ವಿದೇಶದಲ್ಲೂ ಮೈಸೂರು ಸಿಲ್ಕ್ ಪ್ರಸಿದ್ಧಿ

blank

ಹಾಸನ: ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ಸಿಲ್ಕ್ ಉದ್ಯಮ ಸಂಸ್ಥೆ ಗುಣಮಟ್ಟ ಹಾಗೂ ಗ್ರಾಹಕರ ನಂಬಿಕೆಗೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ(ಕೆಎಸ್‌ಐಸಿ)ದಿಂದ ನಗರದ ಸೀತಾರಾಮಾಂಜನೇಯ ದೇವಾಲಯ ಸಭಾಂಗಣದಲ್ಲಿ ಜ.8 ರಿಂದ 11ರವರೆಗೆ ಪ್ರಾರಂಭವಾದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ನೂರಾರು ಉದ್ಯಮಗಳು ಸ್ಥಾಪನೆಯಾಗಿ ಅದೇ ವೇಗದಲ್ಲಿ ಮುಚ್ಚಿವೆ. ಆದರೆ ಮೈಸೂರು ಸಿಲ್ಕ್ ವಿದೇಶಗಳಲ್ಲೂ ಹೆಸರುವಾಸಿಯಾಗಿದೆ. ಮೈಸೂರು ಮಹಾರಾಜರು ತೆರೆದ ಉದ್ಯಮ ಜನಮನ್ನಣೆ ಗಳಿಸಿರುವುದು ಅಲ್ಲಿ ತಯಾರಾಗುವ ವಸ್ತ್ರಗಳ ಗುಣಮಟ್ಟದ ಪ್ರತೀಕ ಎಂದರು.
ಮೈಸೂರು ಸಿಲ್ಕ್ ಒಂದು ಉದ್ಯಮ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಯಲ್ಲೂ ಗುರುತರ ಪಾತ್ರ ವಹಿಸಿದೆ. ಸರ್ಕಾರಿ ಹಾಗೂ ಬ್ಯಾಂಕ್ ನೌಕರರಿಗೆ ಬಡ್ಡಿ ರಹಿತ ಸಾಲ ನೀಡುವ ಮೂಲಕ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಗ್ರಾಹಕರು ಇಲ್ಲಿ ವಸ್ತ್ರ ಖರೀದಿಸುವುದರಿಂದ ಸರ್ಕಾರಕ್ಕೆ ಲಾಭವಾಗುವುದು ಮಾತ್ರವಲ್ಲದೆ ರೇಷ್ಮೆ ಬೆಳೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಮೈಸೂರು ಸಿಲ್ಕ್ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಭರತ್ ಪ್ರಕಾಶ್ ಮಾತನಾಡಿ, ಗ್ರಾಹಕರ ಸಂಖ್ಯೆ ಹೆಚ್ಚಾದರೆ ಮಾರಾಟದ ಅವಧಿಯನ್ನು ವಿಸ್ತರಿಸಲಾಗುವುದು. ಇಲ್ಲಿ ಖರೀದಿಸುವ ಸೀರೆಗಳು ಅತ್ಯಂತ ಗುಣಮಟ್ಟದಾಗಿದ್ದು ತಾಯಿಯಿಂದ ಮಗಳು, ಮಗಳಿಂದ ಮೊಮ್ಮಗಳಿಗೆ ಸೀರೆ ಪ್ರಯೋಜನಕ್ಕೆ ಬರಬೇಕೆಂಬ ಉದ್ದೇಶ ಹೊಂದಿದೆ. ಶೇ. 25 ರಷ್ಟು ರಿಯಾಯಿತಿ ಕಲ್ಪಿಸಿದ್ದು ಜಿಲ್ಲೆಯ ಜನರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
ಹೊಸ ಡಿಸೈನ್‌ನ ಸೀರೆಗಳನ್ನು ಜಿಲ್ಲಾಧಿಕಾರಿ ಆರ್. ಗಿರೀಶ್ ಬಿಡುಗಡೆ ಮಾಡಿದರು. ವಾರ್ತಾಧಿಕಾರಿ ವಿನೋದ್ ಚಂದ್ರ, ಮೀನಾಕ್ಷಮ್ಮ ಇತರರಿದ್ದರು.

blank

 

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank