More

    ಗ್ರಹಣ ಸಹಜ ಪ್ರಕ್ರಿಯೆ

    ಸುಳ್ಳು ಸುದ್ದಿಗೆ ಕಿವಿಗೊಡದಿರಿ, ಡಾ.ಸಾವಿತ್ರಿ ಸಲಹೆ

    ಹಾಸನ: ಗ್ರಹಣ ಎಂಬುದು ಸೌರವ್ಯೆಹದಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದ್ದು, ಈ ಕುರಿತು ಹರಿದಾಡುವ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಸಾವಿತ್ರಿ ಸಲಹೆ ನೀಡಿದರು.
    ನಗರದ ಹೇಮಾವತಿ ಪ್ರತಿಮೆ ಬಳಿ ಭಾನುವಾರ ಬೆಳಗ್ಗೆ ಶ್ರಮ ಸಮಾಜ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಹಣೋತ್ಸವದಲ್ಲಿ ಮಾತನಾಡಿದರು. ಗ್ರಹಣ ಎಂಬುದು ಖಗೋಳ ಕೌತುಕವಾಗಿದ್ದು, ಈ ಬಗ್ಗೆ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಿದೆ ಎಂದರು.
    ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಗ್ರಹಣದಂತಹ ಸೌರ ವಿದ್ಯಮಾನಗಳನ್ನು ಎಲ್ಲರೂ ನೋಡುವ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
    ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, 2020 ವೈಜ್ಞಾನಿಕ ಮನೋಧರ್ಮದ ಪರಿಚಾರಕ ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ವರ್ಷವಾಗಿದ್ದು, ಅದಕ್ಕಾಗಿ ಗ್ರಹಣ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಹಣ ಸೌರವ್ಯೆಹದ ನೆರಳು ಬೆಳಕಿನ ಕೌತುಕವಾಗಿದೆ. ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮ ನೆರವಾಗಲಿದೆ ಎಂದರು.
    ವಿಜ್ಞಾನ ಬರಹಗಾರ ಅಹಮದ್ ಹಗರೆ, ಕೆ.ಎಸ್.ರವಿಕುಮಾರ್, ಕವಿತಾ, ಜಯಪ್ರಕಾಶ್, ಕಾಂತರಾಜು, ಗೋಪಾಲಕೃಷ್ಣ, ಎಂ.ಜಿ. ಪೃಥ್ವಿ, ಸತ್ಯನಾರಾಯಣ, ಅರವಿಂದ, ವಸಂತಕುಮಾರ್, ರವಿ ನಾಕಲಗೂಡು, ಸಂದೇಶ್, ಗ್ಯಾರಂಟಿ ರಾಮಣ್ಣ, ಎಚ್.ಆರ್. ನವೀನ್‌ಕುಮಾರ್ ಇತರರಿದ್ದರು.

    ಗ್ರಹಣ ವೀಕ್ಷಿಸಿದ ಜನರು: ಬೆಳಗ್ಗೆ 10.13ರಿಂದ ಮಧ್ಯಾಹ್ನ 1.31ರವರೆಗೆ ಹಾಸನದಲ್ಲಿ ಗೋಚರಿಸಿದ ಕಂಕಣ ಸೂರ್ಯಗ್ರಹಣವನ್ನು ಸಾರ್ವಜನಿಕರು ವೀಕ್ಷಿಸಿದರು. ಗ್ರಹಣ ಕುರಿತು ಮಾಹಿತಿ ನೀಡುವ ಪುಸ್ತಕ ಮಾರಾಟ ಮಾಡಲಾಯಿತು. ವಿಶೇಷ ಕನ್ನಡಕದ ಮೂಲಕ ನೂರಾರು ಜನರು ಗ್ರಹಣ ಕಣ್ತುಂಬಿಕೊಂಡರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಮುಖ ದೇವಾಲಯಗಳಲ್ಲಿ ದರ್ಶನ ವ್ಯವಸ್ಥೆ ಇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts