More

    ಸಿಬ್ಬಂದಿಗೆ ಥಳಿಸಿದ ಸಿಡಿಪಿಒ ಸಹೋದರ

    ಹಾಸನ: ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಜೈ ಕಿರಣಾ ಅವರ ಸಹೋದರ ಶಿವಕುಮಾರ್ ಕಚೇರಿ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದು ಗುರುವಾರ ಸಂಜೆ ಕಚೇರಿ ರಣರಂಗವಾಗಿ ಮಾರ್ಪಟ್ಟಿತು.

    ಸಿಡಿಪಿಒ ಜೈ ಕಿರಣಾ ಅಂಧರಾಗಿದ್ದು ಅವರಿಗೆ ಸಹಾಯಕನಾಗಿ ಬಂದಿದ್ದ ಸಹೋದರ ಶಿವಕುಮಾರ್ ಹೊರ ಗುತ್ತಿಗೆ ನೌಕರ ಶರತ್ ಮೇಲೆ ಹಲ್ಲೆ ನಡೆಸಿದ್ದಾನೆ.
    ವಿಷಯ ತಿಳಿದು ಸ್ಥಳಕ್ಕೆ ಬಂದ ಬಡಾವಣೆ ಠಾಣೆ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದೊಯ್ದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕ ಕೆ.ಜೆ. ದಿಲೀಪ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎ.ಟಿ. ಮಲ್ಲೇಶ್ ಬಂದು ಕಚೇರಿಗೆ ಬೀಗ ಹಾಕಿದರು.

    ಶರತ್‌ಗೆ ಹೊಡೆಯಲು ಕಾರಣ:

    ಅಧಿಕಾರಿ ಜೈ ಕಿರಣಾ ಇಲ್ಲದಿದ್ದರೂ ಕ್ಯಾಬಿನ್‌ನಲ್ಲಿ ಕುಳಿತಿದ್ದ ಶಿವಕುಮಾರ್‌ನನ್ನು ಗಮನಿಸಿ ಶರತ್ ಏನು ಮಾಡುತ್ತಿದ್ದಾರೆಂದು ಇಣುಕಿ ನೋಡಿದ್ದಾರೆ. ಅಲ್ಲಿನ ಸಿಸಿಟಿವಿ ಕ್ಯಾಮರಾ ವೀಕ್ಷಿಸುತ್ತಿದ್ದರಿಂದ ಶರತ್ ತನ್ನ ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ ಶಿವಕುಮಾರ್ ಕೂಡಲೇ ಹೊರಗೆ ಬಂದು ಶರತ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಿದ್ದಾರೆ. ಅಲ್ಲಿಯೇ ಇದ್ದ ಶಿವಕುಮಾರ್ ತಾಯಿ ಹಾಗೂ ತಂದೆ ಸಹ ಹಲ್ಲೆ ನಡೆಸಿದ್ದಾರೆ. ಇದರಿಂದ ಭಯಭೀತರಾದ ಇತರ ಸಿಬ್ಬಂದಿ ಜಗಳ ಬಿಡಿಸಲು ಹೋದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

    ಶಿವಕುಮಾರ್ ದಬ್ಬಾಳಿಕೆಗೆ ಹೆದರಿದ ಸಿಬ್ಬಂದಿ:
    ಇಲ್ಲಿ ಅಧಿಕಾರಿಗಿಂತ ಸಹೋದರನ ದಬ್ಬಾಳಿಯೇ ಹೆಚ್ಚಿದ್ದು ಇದು ಕಚೇರಿ ಬದಲಿಗೆ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ. ಕಚೇರಿ ತುಂಬೆಲ್ಲ ಸಿಸಿಟಿವಿ ಕ್ಯಾಮರಾ ಹಾಗೂ ಆಡಿಯೋ ರೆಕಾರ್ಡರ್ ಅಳವಡಿಸಿದ್ದು ಯಾರು ಏನೇ ಮಾತನಾಡಿದರೂ ಅವರು ದ್ವೇಷ ಸಾಧಿಸುತ್ತಾರೆ. ರಾತ್ರಿ 12 ಗಂಟೆ ನಂತರ ಕಚೇರಿಗೆ ಬಂದು ಕ್ಯಾಮರಾ ಪರಿಶೀಲಿಸುತ್ತಾರೆ. ಇದನ್ನು ಪ್ರಶ್ನಿಸುವ ಮೇಲಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯ, ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಪ್ರತಿಕ್ರಿಯಿಸಿದರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts