ಶಾಸಕರತ್ತ ಮಹಿಳಾ ಅಧಿಕಾರಿ ಗರಂ!

blank

ಅರಸೀಕೆರೆ: ಕ್ಯಾಂಟೀನ್ ಉದ್ಘಾಟನೆ ಮತ್ತು ವಿವಿಧ ವಿಭಾಗಗಳ ಪರಿಶೀಲನೆಗೆಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್ ಸಿಂಗ್ ಶುಕ್ರವಾರ ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತನ್ನ ಜತೆ ಅಸಭ್ಯವಾಗಿ ವರ್ತಿಸಿದರು ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಅಧಿಕಾರಿಗಳ ಭೇಟಿ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯಿಂದ ಅರಸೀಕೆರೆಗೆ ಆಗಬೇಕಾಗಿರುವ ವಿವಿಧ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಲೆಂದು ಶಾಸಕರ ನೇತೃತ್ವದಲ್ಲಿ ಸರ್ವಪಕ್ಷಗಳ ಮುಖಂಡರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಎಲ್ಲರೂ ಪ್ಲಾಟ್ ಫಾರಂ ಮೇಲೆ ತೆರಳುತ್ತಿದ್ದಾಗ ಜನಜಂಗುಳಿ ನಡುವೆ ಕೆ.ಎಂ.ಶಿವಲಿಂಗೇಗೌಡ ತನ್ನನ್ನು ತಳ್ಳಿದರೆಂದು ಅಪರ್ಣಾ ಗರ್ಗ್ ಸಿಡಿಮಿಡಿಗೊಂಡರು.
ಶಾಸಕರ ವರ್ತನೆ ಅನುಚಿತವೆಂದು ಕಟುವಾಗಿ ಟೀಕಿಸಿದ ಅವರು, ಮಹಿಳಾ ಅಧಿಕಾರಿಗಳ ಜತೆ ಸರಿಯಾಗಿ ವರ್ತಿಸುವಂತೆ ತಾಕೀತು ಮಾಡಿದರು. ಕೋಪೋದ್ರಿಕ್ತ ಅಧಿಕಾರಿಯ ಆರೋಪಕ್ಕೆ ಉತ್ತರಿಸಲಾರದೆ ಮಜುಗರಕ್ಕೀಡಾದ ಶಿವಲಿಂಗೇಗೌಡ, ತಾನು ಅನುಚಿತವಾಗಿ ವರ್ತಿಸಿಲ್ಲ. ಮಹಿಳಾ ಅಧಿಕಾರಿ ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾದರು. ತಕ್ಷಣವೇ ಮಧ್ಯೆ ಪ್ರವೇಶಿಸಿದ ಹಿರಿಯ ಅಧಿಕಾರಿಗಳು ಎಲ್ಲರನ್ನೂ ಸಮಾಧಾನಗೊಳಿಸಿ ಸ್ಥಳದಿಂದ ಕರೆದೊಯ್ದರು.

blank



Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank