More

    ಮುಸುಕಿನ ಜೋಳ ಬೆಳೆಗೆ ಹುಳುಬಾಧೆ

    ಕೃಷಿ ಅಧಿಕಾರಿಗಳಿಂದ ಹುಳು ನಿಯಂತ್ರಣ ಪ್ರಾತ್ಯಕ್ಷಿಕೆ

    ಆಲೂರು: ತಾಲೂಕು ಕೃಷಿ ಇಲಾಖೆ ವತಿಯಿಂದ ಭಾನುವಾರ ತಾಲೂಕಿನ ಪಾಳ್ಯ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿಗಳಿಗೆ ಭೇಟಿ ನೀಡಿ ಮುಸುಕಿನಜೋಳದ ಬೆಳೆಯ ಕೀಟಬಾಧೆ ನಿಯಂತ್ರಿಸುವ ಪ್ರಾತ್ಯಕ್ಷಿಕೆ ನಡೆಯಿತು.
    ತಾಲೂಕು ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ತಮ್ಮನಗೌಡ ಮಾತನಾಡಿ, ತಾಲೂಕಿನಲ್ಲಿ ಮುಸುಕಿನಜೋಳವನ್ನು ಸುಮಾರು 5,200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಬಿತ್ತನೆಯಾದ ಶೇ.70 ರಷ್ಟು ಮುಸುಕಿನಜೋಳದ ಬೆಳೆಗೆ ಹುಳು ಬಾಧೆ ಕಂಡುಬಂದಿದೆ. ರೈತರು ಭಯಪಡದೆ ಕೀಟನಾಶಕ ಸಿಂಪಡಣೆ ಮಾಡಿದರೆ ರೋಗವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
    ಸಕಲೇಶಪುರ ವಿಭಾಗದ ಉಪಕೃಷಿ ನಿರ್ದೇಶಕ ಮುನೇಗೌಡ ಮಾತನಾಡಿ, ಪ್ರತಿ ಲೀಟರ್ ನೀರಿಗೆ 2.0 ಮಿ.ಲೀ. ಕ್ಲೊರೋಫೈರಿಫಾಸ್ ಅಥವಾ ಕ್ವಿನಾಲ್‌ಫಾಸ್ ಅನ್ನು ಬೆರೆಸಿ ಸುಮಾರು 250 ಲೀ. ನೀರನ್ನು ಪ್ರತಿ ಎಕರೆಗೆ ಸಿಂಪಡಿಸಬೇಕು. ಪ್ಲೋರೇಟ್ ಅಥವಾ ಕಾರ್ಬೊಫ್ಯೂರಾನ್ ಹರಳುಗಳನ್ನು 4 ರಿಂದ 5 ಕೆಜಿ ಪ್ರತಿ ಎಕರೆಗೆ ಮರಳಿನೊಂದಿಗೆ ಬೆರೆಸಿ ಗಿಡದ ಸುಳಿಗಳಿಗೆ 3 ರಿಂದ 4 ಹರಳುಗಳು ಬೀಳುವ ಹಾಗೆ ಹಾಕುವುದು. ಹುಳುಗಳ ಬಾಧೆ ಹೆಚ್ಚಿದ್ದಲ್ಲಿ ಇಮಾಮೆಕ್ಟಿನ್ ಬೆಂಜೊಯೆಟ್ 0.4 ಗ್ರಾಂ ಪ್ರತಿ ಲೀ. ನೀರಿಗೆ ಅಥವಾ ಲ್ಯಾಮ್ಡಾ ಸೈಲೊಥ್ರಿನ್ 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು. ಸಿಂಪರಣೆಗೆ ಕೀಟನಾಶಕಗಳನ್ನು ಸಂಜೆ ಹೊತ್ತಿನಲ್ಲಿ ಬೆಳೆಗಳ ಎಲೆ ಸುಳಿಗಳು ತೊಯ್ಯುವಂತೆ ಸಾಮೂಹಿಕವಾಗಿ ಸಿಂಪರಣೆ ಮಾಡಿದೆ ರೋಗ ನಿಯಂತ್ರಿಸಬಹುದು ಎಂದು ತಿಳಿಸಿದರು.
    ತಾಲೂಕು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಯೋಗಾನಂದ್, ಕಸಬಾ ಕೃಷಿ ಅಧಿಕಾರಿ ಮಂತೇಶ್, ಕುಂದೂರು ಹೋಬಳಿ ಕೃಷಿ ಅಧಿಕಾರಿ ಮೋಹನ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts