More

    ಹಾಸನಾಂಬೆ ದರ್ಶನ ಪ್ರಾರಂಭ, ಭಾವಪರವಶರಾದ ಭಕ್ತರು

    ಹಾಸನ: ಶ್ರೀ ಹಾಸನಾಂಬೆ ಅಮ್ಮನವರಿಗೆ ಜೈ… ಎಂಬ ಭಕ್ತರ ಜಯಘೋಷದ ನಡುವೆ ನಗರದ ಅಧಿದೇವತೆ ಹಾಸನಾಂಬೆ ಗುರುವಾರ ಮಧ್ಯಾಹ್ನ 12.15ಕ್ಕೆ ವಿಶ್ವರೂಪ ದರ್ಶನ ನೀಡಿದಳು.

    ತಳವಾರ ವಂಶಸ್ಥ ನರಸಿಂಹರಾಜ ಅರಸ್, ಸಂಪ್ರದಾಯದಂತೆ ಗರ್ಭಗುಡಿ ಬಾಗಿಲು ತೆರೆದೊಡನೆ ದೇವಿಯ ಉಗ್ರದೃಷ್ಟಿಯಿಂದ ತೊಂದರೆಯಾಗದಿರಲಿ ಎಂದು ಪೂಜೆ ಸಲ್ಲಿಸಿ, ಬನ್ನಿ ಕಡಿದ ನಂತರ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಅಲ್ಲಿ ಹಾಜರಿದ್ದ ಭಕ್ತರು, ಜನಪ್ರತಿನಿಧಿಗಳು ಹಾಸನಾಂಬೆಗೆ ಜೈ ಎಂದು ಜಯಘೋಷ ಮೊಳಗಿಸಿ ಭಾವಪರವಶರಾದರು.

    ಗರ್ಭಗುಡಿ ಬಾಗಿಲು ತೆರೆದ ನಂತರ ಅರ್ಚಕರು, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಆರ್. ಶ್ರೀನಿವಾಸ್‌ಗೌಡ, ದೇವಾಲಯದ ಆಡಳಿತಾಧಿಕಾರಿ ಬಿ.ಎ. ಜಗದೀಶ್, ತಹಸೀಲ್ದಾರ್ ಶಿವಶಂಕರಪ್ಪ ಅವರು ಗರ್ಭಗುಡಿ ಪ್ರವೇಶಿಸಿ ದೇವಿಯ ದರ್ಶನ ಪಡೆದರು.

    ಉರಿಯುತ್ತಿದ್ದ ನಂದಾದೀಪ:
    ದೇವಿಯ ಮುಂಭಾಗದಲ್ಲಿ ಕಳೆದ ವರ್ಷ ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಹಚ್ಚಲಾಗಿದ್ದ ನಂದಾದೀಪ ಉರಿಯುತ್ತಲೇ ಇತ್ತು ಹಾಗೂ ದೇವಿಗೆ ಮುಡಿಸಿದ್ದ ಹೂವು ಬಾಡದೆ ತಾಜಾ ಆಗಿಯೇ ಉಳಿದಿತ್ತು. ಇದನ್ನು ಜಿಲ್ಲಾ ಉಸ್ತುವಾರಿ ಕೆ. ಗೋಪಾಲಯ್ಯ ದೃಢಪಡಿಸಿದರು. ಧಾರ್ಮಿಕ ನಂಬಿಕೆಯಂತೆ ದೀಪ ಉರಿಯುತ್ತಿದ್ದದ್ದು ಶುಭ ಸೂಚಕ ಎಂದು ಭಾವಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts