More

    ಹಾಸನಾಂಬ ಮಹೋತ್ಸವ ವಿಚಾರದಲ್ಲಿ ಜಿಲ್ಲಾಡಳಿತ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್

    ಹಾಸನ: ಹಾಸನಾಂಬೆ ದರ್ಶನಕ್ಕೆ ವಿಐಪಿಗಳಿಗೆ ಅವಕಾಶ ನೀಡಿ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಪ್ರಶ್ನಿಸಿದರು.


    ದೇವಾಲಯಕ್ಕೆ ಇದ್ದ ಐತಿಹಾಸಿಕ ಪರಂಪರೆಯನ್ನು ಜಿಲ್ಲಾಡಳಿತ ಹಾಳು ಮಾಡುತ್ತಿದೆ. ಯಾವ ಮಂತ್ರಿ, ಶಾಸಕರ ಮುಲಾಜಿಗೆ ಒಳಗಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ ಗೊತ್ತಿಲ್ಲ. ಮಾಸ್ಕ್, ಸ್ಯಾನಿಟೈಸರ್ ಹಾಗೂ ಪರಸ್ಪರ ಅಂತರ ಪಾಲನೆಯ ನಿಯಮ ಕಡ್ಡಾಯಗೊಳಿಸಿ ಬಡ ಭಕ್ತರಿಗೂ ಪ್ರವೇಶ ನೀಡಬಹುದಿತ್ತು ಎಂದರು.

    ಹೂವಿನ ಅಲಂಕಾರ, ಲೈಟಿಂಗ್, ಶಾಮಿಯಾನ ಗುತ್ತಿಗೆಯನ್ನು ನಾಗರಾಜ್ ಎಂಬುವರಿಗೆ ಮಾತ್ರ ನೀಡಿದ್ದಾರೆ. ಕಡಿಮೆ ಮೊತ್ತಕ್ಕೆ ಬಿಡ್ ಕೂಗಿದ ಗುತ್ತಿಗೆದಾರರನ್ನು ಕಡೆಗಣಿಸಿದ್ದಾರೆ. ಬಿಜೆಪಿ ನಾಯಕರ ಹಿಡಿತಕ್ಕೆ ಜಿಲ್ಲಾಡಳಿತ ಸಿಲುಕಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಕ್ತವಾಗಿ ಜನರನ್ನು ಬಿಡುತ್ತಾರೆ. ಆದರೆ ಹಾಸನದಲ್ಲಿ ಆ ರೀತಿಯ ವ್ಯವಸ್ಥೆ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts