More

    ‘ಟೈಟಾನಿಕ್’ ಖ್ಯಾತಿಯ ‘ರೋಸರಿ ಚರ್ಚ್’ ಮುಳುಗಡೆ: ಡ್ರೋಣ್ ಕ್ಯಾಮರಾದಲ್ಲಿ ವಿಹಂಗಮ ನೋಟ

    ಹಾಸನ: ಮುಳುಗುತ್ತಿರುವ ಟೈಟಾನಿಕ್ ಖ್ಯಾತಿಯ ಶೆಟ್ಟಿಹಳ್ಳಿ ರೋಸರಿ ಚರ್ಚ್ ಹೇಮಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದು, ಅದರ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಇದನ್ನೂ ಓದಿ: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗುತ್ತಿದೆ ರೋಸರಿ ಚರ್ಚ್​: ಟೈಟಾನಿಕ್​ ದೃಶ್ಯ ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ 

    ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಹಿನ್ನೀರು ವ್ಯಾಪ್ತಿಯ ಚರ್ಚ್ ಮುಳುಗಡೆಯಾಗಿದೆ. ಭಾನುವಾರ ಚರ್ಚ್ ಸೌಂದರ್ಯ ಸವಿಯಲು ಪ್ರವಾಸಿಗರು ಮುಗಿಬಿದ್ದಿದ್ದಾರೆ. ಅಲ್ಲದೇ ಕೆಲ ಪ್ರವಾಸಿಗರು ತಮ್ಮ ಮೊಬೈಲ್ ಮತ್ತು ಡ್ರೋಣ್ ಕ್ಯಾಮರಾ ಮೂಲಕ ಈ ವಿಹಂಗಮ ನೋಟವನ್ನು ಸೆರೆಹಿಡಿದಿದ್ದಾರೆ.

    ರೋಜರಿ ಚರ್ಚ್​ ಇತಿಹಾಸ:

    ಹಾಸನ, ಮಂಡ್ಯ, ತುಮಕೂರು ಭಾಗಕ್ಕೆ ನೀರು ಕಲ್ಪಿಸುವ ನಿಟ್ಟಿನಲ್ಲಿ, ಹಾಸನದ ಜೀವನದಿಯಾಗಿದ್ದ ಹೇಮಾವತಿಗೆ ಗೋರೂರು ಗ್ರಾಮದ ಬಳಿ 1960 ರಲ್ಲಿ ಜಲಾಶಯ ಪ್ರಾರಂಭವಾಯಿತು. ಆಗ ಶೆಟ್ಟಿಹಳ್ಳಿ ಸೇರಿದಂತೆ ಸುಮಾರು 28 ಹಳ್ಳಿಗಳು ಮುಳುಗಡೆಯಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts