More

    ಸರ್ಕಾರ ಲೈಸೆನ್ಸ್​ ಪಡೆದಿದೆಯೇ? ಸುಪ್ರೀಂ ಅಂಗಳಕ್ಕೆ ಪೆಗಾಸಸ್ ಪ್ರಕರಣ!

    ನವದೆಹಲಿ : ಭಾರತದ ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿರುವ ಪೆಗಾಸಸ್​ ಪ್ರಕರಣವು, ಇದೀಗ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ವಿಪಕ್ಷ ರಾಜಕಾರಣಿಗಳು, ಪತ್ರಕರ್ತರು ಮತ್ತು ಇತರರು ಈ ಇಸ್ರೇಲಿ ಬೇಹುಗಾರಿಕೆ ಸಾಫ್ಟ್​​ವೇರ್​ನ ಟಾರ್ಗೆಟ್​ಗಳಾಗಿದ್ದಾರೆಂಬ ಆರೋಪದ ವಿಶೇಷ ತನಿಖೆ ಕೋರಿರುವ ರಿಟ್​ ಅರ್ಜಿಯೊಂದರ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯ ಮುಂದಿನ ವಾರ ಕೈಗೆತ್ತಿಕೊಳ್ಳಬಹುದಾಗಿದೆ.

    ಹಿರಿಯ ಪತ್ರಕರ್ತರಾದ ಎನ್.ರಾಮ್ ಮತ್ತು ಶಶಿಕುಮಾರ್​ ಅವರು ಒಬ್ಬ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್​​ಐಟಿ ರಚಿಸಿ ತನಿಖೆ ಆದೇಶಿಸಬೇಕೆಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ರೀತಿಯ ಕಣ್ಗಾವಲು ನಡೆಸಲು ವಿವಾದಿತ ಪೆಗಾಸಸ್ ಸ್ಪೈವೇರ್​ಗಾಗಿ ಪರವಾನಗಿ ಪಡೆದಿದ್ದೀರಾ ಅಥವಾ ಅದನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸಿದ್ದೀರಾ ಎಂಬುದನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. ದೇಶದ ಸುಮಾರು 142 ಜನರ ಫೋನುಗಳನ್ನು ಈ ಸ್ಪೈವೇರ್​ ಮೂಲಕ ಹ್ಯಾಕ್​ ಮಾಡಲಾಗಿದೆ ಎಂದು ವರದಿಗಳು ಹೇಳಿದ್ದು, ಇದು ಸ್ವಾತಂತ್ರ್ಯ ಮತ್ತು ವೈಯಕ್ತಿಕ ಗೌಪ್ಯತೆಯ ಮೇಲೆ ಭಾರೀ ಪರಿಣಾಮ ಹೊಂದಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

    ಇದನ್ನೂ ಓದಿ: ಮಾಜಿ ಮ್ಯಾನೇಜರ್​ನಿಂದ ಬ್ಯಾಂಕ್ ಲೂಟಿ! ತಡೆಯಲು ಹೋದ ಉದ್ಯೋಗಿಗಳಿಗೆ ಚಾಕು!

    ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಾಲ್​ ಅವರು ಇಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರಿಗೆ ಪ್ರಕರಣವನ್ನು ವಿಚಾರಣೆಗೆ ಲಿಸ್ಟ್​ ಮಾಡಬೇಕೆಂದು ಮನವಿ ಮಾಡಿದರು. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, “ಮುಂದಿನ ವಾರ ಅದನ್ನು ಲಿಸ್ಟ್​ ಮಾಡೋಣ. ವರ್ಕ್​ಲೋಡ್​ ಮೇಲೆ ಅವಲಂಬಿಸಿದೆ” ಎಂದು ಹೇಳಿ, ಮುಂದಿನ ವಾರದಲ್ಲಿ ವಿಚಾರಣೆಗೆ ಪೋಸ್ಟ್​ ಮಾಡಲು ಸೂಚನೆ ನೀಡಿದರು ಎನ್ನಲಾಗಿದೆ. (ಏಜೆನ್ಸೀಸ್)

    ಪಂದ್ಯಕ್ಕೆ ಒಂದು ನಿಮಿಷ ಮುಂಚೆ ಡ್ರೆಸ್​ ಬದಲಿಸಲು ಹೇಳಿದ್ದೇಕೆ? ಒಲಿಂಪಿಕ್ಸ್​ನಿಂದ ಹೊರಬಿದ್ದ ಮೇರಿ ಕೋಂ ಪ್ರಶ್ನೆ!

    ಕರೊನಾ ಹೆಚ್ಚಳದ ಕಳವಳ: ಕೇರಳಕ್ಕೆ ಕೇಂದ್ರದ ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts