More

    ಪಾಕಿಸ್ತಾನದಲ್ಲಿ ಅವಿತಿರುವ ಭೂಗತ ಕ್ರಿಮಿ ದಾವೂದ್​ ಇಬ್ರಾಹಿಂ ಕೋವಿಡ್​ಗೆ ಬಲಿ?

    ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಅವಿತಿರುವ ಭಾರತಕ್ಕೆ ತುಂಬಾ ಬೇಕಾಗಿರುವ ಭೂಗತ ಕ್ರಿಮಿ, ಉಗ್ರ ದಾವೂದ್​ ಇಬ್ರಾಹಿಂ ಕೋವಿಡ್​-19 ಸೋಂಕಿಗೆ ಬಲಿಯಾಗಿದ್ದಾನೆ ಎಂಬ ಸುದ್ದಿ ಭಾರಿ ವೈರಲ್​ ಆಗುತ್ತಿದೆ.

    ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ 1993ರ ಮುಂಬೈ ಸರಣಿ ಸ್ಫೋಟದ ಸಂಚುಕೋರ ಮತ್ತು ಆತನ ಪತ್ನಿ ಶಕೀಲಾ ಕೋವಿಡ್​-19 ಸೋಂಕಿಗೆ ತುತ್ತಾಗಿದ್ದಾರೆ. ಪಾಕ್​ನಲ್ಲಿ ಸೇನಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂಬ ಸುದ್ದಿ ವೈರಲ್​ ಆಗಿತ್ತು. ಶನಿವಾರದ ವೇಳೆಗೆ ಆತ ಕರೊನಾ ಸೋಂಕಿಗೆ ಬಲಿಯಾಗಿರುವ ಸುದ್ದಿ ವೈರಲ್​ ಆಗುತ್ತಿದೆ.

    ಆದರೆ, ದಾವೂದ್​ ಇಬ್ರಾಹಿಂ ಸತ್ತಿಲ್ಲ. ಆತನಿಗಾಗಲಿ ಅಥವಾ ಆತನ ಪತ್ನಿಗಾಗಲಿ ಕರೊನಾ ಸೋಂಕು ತಗುಲಿಲ್ಲ. ಅಷ್ಟೇ ಅಲ್ಲ, ಆತನ ಸಹಚರರಲ್ಲಿ ಆಗಲಿ ಯಾರಿಗೂ ಕರೊನಾ ಸೋಂಕು ತಗುಲಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ದಾವೂದ್​ನ ಸಹೋದರ ಅನೀಸ್​ ಇಬ್ರಾಹಿಂ ಶನಿವಾರ ಟ್ವೀಟ್​ ಮಾಡಿ ಸ್ಪಷ್ಟಪಡಿಸಿದ್ದಾನೆ.

    ಇದೇ ಮೊದಲಲ್ಲ: ಭೂಗತ ಕ್ರಿಮಿ ದಾವೂದ್​ ಇಬ್ರಾಹಿಂ ಮೃತಪಟ್ಟಿದ್ದಾನೆ ಅಥವಾ ಬಂಧಿಸಲ್ಪಟ್ಟಿದ್ದಾನೆ ಎಂಬ ವದಂತಿಗಳು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಹಲವು ಬಾರಿ ಈತನ ಸಾವು ಮತ್ತು ಬಂಧನದ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಆದರೆ ಪ್ರತಿಬಾರಿಯೂ ಆತ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ಆ ವದಂತಿಗಳನ್ನು ಸುಳ್ಳೆಂದು ಸಾಬೀತುಪಡಿಸುತ್ತಿದ್ದ. ಆದರೆ, ಈ ಬಾರಿ ಇನ್ನೂ ಆತ ಎಲ್ಲಿಯೂ ಕಾಣಿಸಿಕೊಂಡಿಲ್ಲ.

    ಇದನ್ನೂ ಓದಿ: ಡಬಲ್ ಗೇಮ್​ ಮುಂದುವರಿಸಿದೆ ಪಾಕ್​; ಭಾರತದ ಭದ್ರತಾ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಬಯಲಾಯ್ತು ಸತ್ಯ

    ಆಫ್ರಿದಿ ಮತ್ತು ದ ಅಂಡರ್​ಟೇಕರ್​ ಮುಂಚೂಣಿಗೆ: ದಾವೂದ್​ ಇಬ್ರಾಹಿಂ ಸಾವಿನ ವದಂತಿ ದಟ್ಟವಾಗುತ್ತಿರುವಂತೆ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಡಬ್ಲ್ಯುಡಬ್ಲ್ಯುಇನ ಫೈಟರ್​ ದ ಅಂಡರ್​ಟೇಕರ್​ ಮತ್ತು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹೀದ್​ ಆಫ್ರಿದಿ ಹೆಸರು ಭಾರಿ ಟ್ರೆಂಡಿಂಗ್​ಗೆ ಬಂದಿದ್ದಾವೆ.

    ಡಬ್ಲ್ಯುಡಬ್ಲ್ಯುಇನ ಸೂಪರ್​ಸ್ಟಾರ್​ ದ ಅಂಡರ್​ಟೇಕರ್​ ಕೂಡ ರಿಂಕ್​ನಲ್ಲಿ ಹೋರಾಡುತ್ತಾ ಆಗಾಗ ಸಾಯುತ್ತಲೇ ಇರುತ್ತಾರೆ. ಆದರೆ, ಮರುದಿನ ಇಲ್ಲವೇ ಮರುವಾರದ ಫೈಟ್​ಗಳಲ್ಲಿ ಕಾಣಿಸಿಕೊಂಡು ತಮ್ಮ ಸಾವಿನ ಸುದ್ದಿಯನ್ನು ಸುಳ್ಳೆಂದು ಸಾಬೀತುಪಡಿಸುತ್ತಿರುತ್ತಾರೆ. ಇವರಂತೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹೀದ್​ ಆಫ್ರಿದಿ ಕೂಡ ಹಲವು ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರೂ, ಅಷ್ಟೂ ಬಾರಿ ನಿವೃತ್ತಿಯಿಂದ ಹೊರಬಂದು ಪಾಕ್​ ಜೆರ್ಸಿಯಲ್ಲಿ ಕಾಣಿಸಿಕೊಂಡ ಶಾಕ್​ ಕೊಟ್ಟ ಹಲವು ಉದಾಹರಣೆಗಳಿವೆ. ಆದರೆ, ಈ ಬಾರಿ ಅವರು 2017ರಲ್ಲಿ ನಿವೃತ್ತಿ ಹೊಂದಿದ ನಂತರದಲ್ಲಿ ಮತ್ತೆಂದೂ ಪಾಕ್ ಜೆರ್ಸಿ ತೊಟ್ಟಿಲ್ಲ ಎಂಬುದು ವಿಶೇಷ.

    ಇವರಿಬ್ಬರಂತೆ ದಾವೂದ್​ ಕೂಡ ತನ್ನ ಸಾವಿನ ಸುದ್ದಿ ಹಬ್ಬಿದಾಗಲೆಲ್ಲ ರಕ್ತಬೀಜಾಸುರನಂತೆ ಮತ್ತೊಮ್ಮೆ ಹುಟ್ಟಿ ಬಂದವನ ರೀತಿ ಕಾಣಿಸಿಕೊಳ್ಳುತ್ತಾನೆ. ಹಾಗಾಗಿ ಆತನ ಸಾವಿನ ಸುದ್ದಿ ಹಬ್ಬುತ್ತಲೇ ದ ಅಂಡರ್​ಟೇಕರ್​ ಮತ್ತು ಶಾಹೀದ್​ ಆಫ್ರಿದಿ ಹೆಸರು ಟ್ವಿಟರ್​ನಲ್ಲಿ ಟ್ರೆಂಡಿಂಗ್​ಗೆ ಬಂದಿದೆ ಎಂದು ಹೇಳಲಾಗುತ್ತಿದೆ.

    ಮಿಯಾಂವ್​ ಮಿಯಾಂವ್​: ಬೆಕ್ಕಿನ ಚಿತ್ರದೊಂದಿಗೆ ಮುಂಬೈ ಜನತೆಗೆ ಪೊಲೀಸರ ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts