More

    ಅಮೃತ್​ಪಾಲ್​ಗೆ ಆಶ್ರಯ; ಹರಿಯಾಣ ಮೂಲದ ಮಹಿಳೆ, ಸಹಚರ ಬಂಧನ

    ಹರಿಯಾಣ: ಪಂಜಾಬ್​ನಲ್ಲಿ ಖಾಲಿಸ್ತಾನಿ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇಲೆ ವಾರಿಸ್​ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತ್​​ ಪಾಲ್​ ಸಿಂಗ್​ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    ಮಹತ್ವದ ಬೆಳವಣಿಗೆಯಲ್ಲಿ ಆರೋಪಿಯು ಹರಿಯಾಣದ ಕುರುಕ್ಷೇತ್ರದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ಮುಂದಾದಾಗ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

    ಇನ್ನು ಅಮೃತ್​ಪಾಲ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಕುರುಕ್ಷೇತ್ರದ ಶಹಬಾದ್​ನಲ್ಲಿ ಮಹಿಳೆ ಹಾಗೂ ಲುಧಿಯಾನದಲ್ಲಿ ಓರ್ವ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಲ್ಜಿತ್​ ಕೌರ್​, ತೇಜೇಂದರ್​​​​ ಸಿಂಗ್​ ಗಿಲ್​​​ ಎಂದು ಗುರುತಿಸಲಾಗಿದೆ.

    ಬಂಧಿತ ಮಹಿಳೆಯನ್ನ ಪಂಜಾಬ್​ ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದ್ದು ಆರೋಪಿಯೂ ಅಮೃತ್​ಪಾಲ್​ ಸಿಂಗ್​ಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಳು ಎಂದು ಕುರುಕ್ಷೇತ್ರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸುರಿಂದರ್​ ಸಿಂಗ್ ಬೋರಿಯಾ ತಿಳಿಸಿದ್ದಾರೆ.

    ಅಮೃತ್​​ಪಾಲ್​ಗೆ ಭದ್ರತೆ ಒದಗಿಸುತ್ತಿದ್ದ ಆರೋಪದ ಮೇಲೆ ಲುಧಿಯಾನ ಮೂಲದ ತೇಜೇಂದರ್​ ಸಿಂಗ್​ ಗಿಲ್​ನನ್ನ ಬಂಧಿಸಿರುವುದಾಗಿ ಪಂಜಾಬ್​ ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts