More

    ವಾರಿಯರ್ಸ್‌ ಮೇಲೆ ಸ್ಟೀಲರ್ಸ್‌ ಸವಾರಿ: ಸಿದ್ಧಾರ್ಥ್‌, ಶಿವಂ ಸೂಪರ್‌ ಟೆನ್‌

    ಪಟನಾ: ಸಿದ್ಧಾರ್ಥ್ದೇಸಾಯಿ (11 ಅಂಕ) ಮತ್ತು ಶಿವಂ (12 ಅಂಕ) ಅವರ ಸೂಪರ್ಟೆನ್ಸಾಹಸದಿಂದ ಹರಿಯಾಣ ಸ್ಟೀಲರ್ಸ್ತಂಡ ಪ್ರೊ ಕಬಡ್ಡಿ ಲೀಗ್10ನೇ ಆವೃತ್ತಿಯಲ್ಲಿ 5 ಅಂಕಗಳಿಂದ ಬೆಂಗಾಲ್ವಾರಿಯರ್ಸ್ತಂಡವನ್ನು ಪರಾಭವಗೊಳಿಸಿದೆ. ಪಾಟಲೀಪುತ್ರ ಒಳಾಂಗಣ ಕ್ರೀಡಾಂಗದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್41-36 ಅಂಕಗಳ ಅಂತರದಿಂದ ವಾರಿಯರ್ಸ್ಸವಾಲನ್ನು ಮೆಟ್ಟಿನಿಂತಿತು. ಜತೆಗೆ ಹಿಂದಿನ ದಬಾಂಗ್ದಿಲ್ಲಿ ಎದುರಿನ ಸೋಲಿನಿಂದ ಸ್ಟೀಲರ್ಸ್ತಂಡ ಹೊರಬಂದಿತು. ಸ್ಟೀಲರ್ಸ್ಪರ ಸಿದ್ಧಾರ್ಥ್ಮತ್ತು ಶಿವಂ ಅಲ್ಲದೆ, ವಿನಯ್6 ಅಂಕ ಗಳಿಸಿ ಗೆಲುವಿಗೆ ಬೆಂಬಲ ವ್ಯಕ್ತಪಡಿಸಿದರು.

    ಮಣಿಂದರ್ಸಿಂಗ್(13 ಅಂಕ), ನಿತಿನ್ಕುಮಾರ್(9 ಅಂಕ) ಮತ್ತು ಶ್ರೀಕಾಂತ್(7 ಅಂಕ) ದಿಟ್ಟ ಹೋರಾಟ ನೀಡಿದರೂ ತಂಡದ ಹ್ಯಾಟ್ರಿಕ್ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಹಿನ್ನಡೆ ತಗ್ಗಿಸುವ ಭರವಸೆಯಲ್ಲಿ ಎರಡನೇ ಅವಧಿಯನ್ನು ಆರಂಭಿಸಿ ಜೈದೀಪ್ದಹಿಯಾ ನೇತೃತ್ವದ ಸ್ಟೀಲರ್ಸ್ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಇದರ ಫಲವಾಗಿ 24ನೇ ನಿಮಿಷದಲ್ಲಿಬೆಂಗಾಲ್ತಂಡವನ್ನು ಆಲೌಟ್ಮಾಡಿದ ಹರಿಯಾಣ, ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಫಲಗೊಂಡಿತು. ಮೊದಲ ಅವಧಿಯಲ್ಲಿ ಗಮನ ಸೆಳೆದಿದ್ದ ಸ್ಟಾರ್‌ ರೈಡರ್ಸಿದ್ಧಾರ್ಥ್, ದ್ವಿತೀಯಾರ್ಧದಲ್ಲಿ ಅಬ್ಬರಿಸಿ ಸೂಪರ್ಟೆನ್ಸಾಧನೆ ಮಾಡಿದರು. ಅನುಭವಿ ಮಣಿಂದರ್ಸಿಂಗ್ನಾಯಕತ್ವದ ಬೆಂಗಾಲ್ಕೂಡ ಪ್ರತಿ ಹೋರಾಟ ಸಂಘಟಿಸಿತು.ನಿತಿನ್ಕುಮಾರ್ಮತ್ತು ಶ್ರೀಕಾಂತ್ಜಾಧವ್ಆಕರ್ಷಕ ರೇಡಿಂಗ್ಮೂಲಕ ತಂಡದ ಹೋರಾಟಕ್ಕೆ ಬೆಂಬಲ ಸೂಚಿಸಿದರು.

    ಪಂದ್ಯ ಮುಕ್ತಾಯಕ್ಕೆ 10 ನಿಮಿಷಗಳಿರುವಾಗ ಹರಿಯಾಣ (31-27) ನಾಲ್ಕು ಅಂಕಗಳ ಮುನ್ನಡೆ ಕಾಯ್ದುಕೊಂಡು ಗೆಲುವಿನ ವೇದಿಕೆ ಹೇರುವ ಮುನ್ಸೂಚನೆ ನೀಡಿತು. 30ರಿಂದ 35 ನಿಮಿಷಗಳ ಆಟದಲ್ಲಿ ಆಲ್ರೌಂಡ್ಪ್ರದರ್ಶನ ಹೊರಹಾಕಿದ ಹರಿಯಾಣ 9 ಅಂಕ ಕಲೆಹಾಕಿದರೆ, ಬೆಂಗಾಲ್ಕೇವಲ 3 ಅಂಕಗಳಿಗೆ ಸೀಮಿತಗೊಂಡಿತು. 33ನೇ ನಿಮಿಷದಲ್ಲಿವಾರಿಯರ್ಸ್ತಂಡವನ್ನು ಆಲೌಟ್ಮಾಡಿದ ಹರಿಯಾಣ ತನ್ನ ಮುನ್ನಡೆಯನ್ನು 9 ಅಂಕಗಳಿಗೆ (39-30) ವಿಸ್ತರಿಸಿಕೊಂಡಿತು. ಇದರಿಂದ ಸಹಜವಾಗಿ ಒತ್ತಡಕ್ಕೆ ಸಿಲುಕಿದ ಮಣಿಂದರ್ಬಳಗ ಹೊಂದಾಣಿಕೆ ಆಟವಾಡುವಲ್ಲಿಪದೇ ಪದೆ ಎಡವಿದರೆ, ಸ್ಟೀಲರ್ಸ್ಮಾತ್ರ ತನ್ನ ಪ್ರಭುತ್ವವನ್ನು ಕಾಯ್ದುಕೊಂಡಿತು.

    ಸೂಪರ್ಟ್ಯಾಕಲ್ನಲ್ಲಿಮಿಂಚಿದ ಬೆಂಗಾಲ್ವಾರಿಯರ್ಸ್ಪಂದ್ಯದ ಪ್ರಥಮಾರ್ಧಕ್ಕೆ ಹರಿಯಾಣ ಸ್ಟೀಲರ್ಸ್ವಿರುದ್ಧ 18-16 ಅಂಕಗಳ ಅಂತರದಲ್ಲಿಮುನ್ನಡೆ ಕಂಡುಕೊಂಡಿತು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನೀಡುವ ಮೂಲಕ ಮುನ್ನಡೆಗಾಗಿ ಪ್ರಯತ್ನಿಸಿದವು. ಬೆಂಗಾಲ್ಪರ ಮಣಿಂದರ್ಮತ್ತು ಶ್ರೀಕಾಂತ್ಸೂಧಿರ್ತಿದಾಯಕ ಪ್ರದರ್ಶನ ತೋರಿದರೆ, ಹರಿಯಾಣ ತಂಡದ ಪರ ಸಿದ್ಧಾರ್ಥ್ದೇಸಾಯಿ ಹಾಗೂ ವಿನಯ್ಗಮನ ಸೆಳೆದರು. 13ನೇ ನಿಮಿಷದಲ್ಲಿ ಉಭಯ ತಂಡಗಳು 11 -11ರಲ್ಲಿ ಸಮಬಲದ ಹೋರಾಟ ನೀಡಿದ ಪಂದ್ಯ ಆರಂಭದಲ್ಲೇ ರೋಚಕತೆ ಮೂಡಿಸಿತು. ವೇಳೆ ಸತತ ಎರಡು ಅಂಕ ಗಳಿಸಿದ ಹರಿಯಾಣ 13-11ರಲ್ಲಿ ಮೇಲುಗೈ ಸಾಧಿಸಿತು. ಆದರೆ ಕೆಲವೇ ನಿಮಿಷಗಳಲ್ಲಿಎರಡು ಸೂಪರ್ಟ್ಯಾಕಲ್ನಲ್ಲಿಮಿಂಚಿನ ಆಟವಾಡಿದ ಬೆಂಗಾಲ್16-17ರಲ್ಲಿ ಅಂತರ ಕಾಯ್ದುಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts