More

    ಲಂಚ ಕೇಳಿದ ಪ್ರಕರಣ: ಐಎಎಸ್ ಅಧಿಕಾರಿ ಅರೆಸ್ಟ್​​!

    ಗುರುಗ್ರಾಮ: ಭ್ರಷ್ಟಚಾರ ಪ್ರಕರಣ ಸಂಬಂಧ ಐಎಎಸ್ ಅಧಿಕಾರಿಯೊಬ್ಬರನ್ನು ಗುರುಗ್ರಾಮದಲ್ಲಿ ಬಂಧಿಸಲಾಗಿದೆ.

    ಬಂಧಿತ ಐಎಎಸ್ ಅಧಿಕಾರಿ ಧರ್ಮೇಂದರ್ ಸಿಂಗ್, ಹರಿಯಾಣ ಭವನದಲ್ಲಿ ರೆಸಿಡೆಂಟ್ ಕಮಿಷನರ್‌ ಆಗಿ ನೇಮಕಗೊಂಡಿದ್ದರು. ಎಸ್‌ಐಟಿ ಮತ್ತು ಫರಿದಾಬಾದ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅಧಿಕಾರಿಯನ್ನು ಬಂಧಿಸಲಾಗಿದೆ.

    ಆರೋಪಿ ಕಾನೂನುಬಾಹಿರವಾಗಿ ಗುತ್ತಿಗೆ ದರವನ್ನು 55-87 ಕೋಟಿ ರೂ. ಹೆಚ್ಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಅವರು ಸೋನಿಪತ್ ಮುನ್ಸಿಪಲ್ ಕಾರ್ಪೊರೇಷನ್‌ನ ಆಯುಕ್ತರಾಗಿದ್ದಾಗ ಗುತ್ತಿಗೆದಾರರಿಂದ 1.11 ಕೋಟಿ ರೂ. ಲಂಚ ಪಡೆದಿದ್ದಾರೆಂದು ನವದೆಹಲಿ ರಂಜಿತ್ ನಗರದ ನಿವಾಸಿ ಲಲಿತ್‌ ಮಿತ್ತಲ್ ಅವರು ಧರ್ಮೇಂದರ್ ವಿರುದ್ಧ ಫರಿದಾಬಾದ್‌ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಮಹಿಳೆಯ ಕೂದಲು ಕತ್ತರಿಸಿ ಮೆರವಣಿಗೆ

    ಐಎಎಸ್ ಅಧಿಕಾರಿ ಸಿಂಗ್ ಅವರು ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಆಗಿದ್ದಾಗ ಸೋನಿಪತ್‌ನಲ್ಲಿ ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ನಡೆಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಅವರು 52 ಕೋಟಿ ಟೆಂಡರ್ ಮೊತ್ತವನ್ನು 87 ಕೋಟಿಗೆ ಹೆಚ್ಚಿಸಿದ್ದಾರೆ.

    “ಐಎಎಸ್ ಅಧಿಕಾರಿ ಧರ್ಮೇಂದರ್ ಸಿಂಗ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರನ್ನು ಮಂಗಳವಾರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಫರಿದಾಬಾದ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದ್ದವ ಅರೆಸ್ಟ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts