More

    ವಿಜಯ್ ಹಜಾರೆ ಟ್ರೋಫಿಯಲ್ಲಿ ಇಂದು ಕರ್ನಾಟಕ-ರಾಜಸ್ಥಾನ ಸೆಮಿಫೈನಲ್: ಚಾಹಲ್ ಗೈರಿನಲ್ಲಿ ಫೈನಲ್‌ಗೇರಿದ ಹರಿಯಾಣ

    ರಾಜ್‌ಕೋಟ್: ಕಳೆದ ಮೂರು ಆವೃತ್ತಿಗಳಿಂದ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಜಯಿಸುವಲ್ಲಿ ವಿಲವಾಗಿರುವ ಕರ್ನಾಟಕ ತಂಡ ಗುರುವಾರ ನಡೆಯಲಿರುವ 2ನೇ ಸೆಮಿೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಿದೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. 4 ಬಾರಿಯ ಚಾಂಪಿಯನ್ ಕರ್ನಾಟಕ 5ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

    ಟೂರ್ನಿಯ ಲೀಗ್ ಹಂತದಲ್ಲಿ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಕ್ವಾರ್ಟರ್‌ೈನಲ್‌ಗೇರಿದ್ದ ಕರ್ನಾಟಕ ತಂಡ, ಹರಿಯಾಣ ಎದುರು ಮಾತ್ರ ಸೋಲು ಅನುಭವಿಸಿದೆ. ಕ್ವಾರ್ಟರ್‌ೈನಲ್‌ನಲ್ಲಿ ವಿದರ್ಭ ಎದುರು 7 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಮಯಾಂಕ್ ಅಗರ್ವಾಲ್ ಬಳಗ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ನಾಕೌಟ್‌ಗೇರದ ಕಹಿಯನ್ನು ಮರೆಮಾಚಿದೆ. ಆರಂಭಿಕ ಪಂದ್ಯದ ಬಳಿಕ ಲಯತಪ್ಪಿದ ಮಯಾಂಕ್ ಅಗರ್ವಾಲ್, ಉಪನಾಯಕ ಆರ್.ಸಮರ್ಥ್ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಾರ್ಮ್‌ಗೆ ಮರಳಿದ್ದಾರೆ.

    ನಿಕಿನ್ ಜೋಸ್ ಹಾಗೂ ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಆಟದ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ವೇಗಿ ವಿ.ಕೌಶಿಕ್ ಆಡಿದ 8 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿ ಕರ್ನಾಟಕ ಪರ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿದ್ದಾರೆ. ಇವರಿಗೆ ವೈಶಾಕ್ ವಿಜಯ್‌ಕುಮಾರ್, ಜೆ. ಸುಚಿತ್ ಉತ್ತಮ ಬೆಂಬಲ ಒದಗಿಸಿದ್ದಾರೆ.
    ಇತ್ತ ರಾಜಸ್ಥಾನ ಡಿ ಗುಂಪಿನ 6 ಲೀಗ್ ಪಂದ್ಯ ಜಯಿಸಿ ಅಗ್ರಸ್ಥಾನದೊಂದಿಗೆ ನಾಕೌಟ್‌ಗೇರಿದೆ. ದೀಪಕ್ ಹೂಡಾ ರಾಜಸ್ಥಾನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೇರಳ ವಿರುದ್ಧ 200 ರನ್‌ಗಳ ಭರ್ಜರಿ ಗೆಲುವು ದಾಖಲಿಸಿರುವ ರಾಜಸ್ಥಾನ ಪರ ಮಹಿಪಾಲ್ ಲೊಮ್ರೋರ್ ಶತಕ ಸಿಡಿಸಿ ಮಿಂಚಿದ್ದರು.

    ಆರಂಭ: ಮಧ್ಯಾಹ್ನ 1.30
    ನೇರಪ್ರಸಾರ: ಜಿಯೋ ಸಿನಿಮಾ

    ಫೈನಲ್‌ಗೇರಿದ ಹರಿಯಾಣ: ಅಜೇಯ ಓಟ ಮುಂದುವರಿಸಿದ ಹರಿಯಾಣ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಮೊದಲ ಸೆಮಿೈನಲ್‌ನಲ್ಲಿ ಹಿಮಾಂಶು ರಾಣಾ (116*ರನ್, 118 ಎಸೆತ, 11 ಬೌಂಡರಿ, 2 ಸಿಕ್ಸರ್) ಅಜೇಯ ಶತಕದ ಬಲದಿಂದ ಐದು ಬಾರಿಯ ಚಾಂಪಿಯನ್ ತಮಿಳುನಾಡು ಎದುರು 63 ರನ್‌ಗಳಿಂದ ಗೆಲುವು ದಾಖಲಿಸಿತು. ಇದರೊಂದಿಗೆ ಸತತ 9ನೇ ಪಂದ್ಯಕ್ಕೂ ಜಯದ ಓಟ ವಿಸ್ತರಿಸಿದೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರಿಯಾಣ, ಆರಂಭಿಕ ಯುವರಾಜ್ ಸಿಂಗ್ (65) ಹಾಗೂ ಹಿಮಾಂಶು ಜತೆಯಾಟದಿಂದ 7 ವಿಕೆಟ್‌ಗೆ 293 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಅಂಶುಲ್ ಕಾಂಬೋಜ್ (30ಕ್ಕೆ4) ದಾಳಿಗೆ ಕುಸಿದ ತಮಿಳುನಾಡು 47.1 ಓವರ್‌ಗಳಲ್ಲಿ 230 ರನ್‌ಗಳಿಗೆ ಸರ್ವಪತನ ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts