More

    ಬಾರ್ಬಿ ಡಾಲ್​ ಹರ್ಷಿಕಾ; ಮಹಿಳಾ ದಿನದ ಅಂಗವಾಗಿ ಹೊಸ ಫೋಟೋಶೂಟ್

    ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಹಲವು ನಟಿಯರು ತಮ್ಮದೇ ರೀತಿಯಲ್ಲಿ ಆಚರಿಸಿದ್ದಾರೆ. ಇನ್ನು, ಹರ್ಷಿಕಾ ಪೂಣಚ್ಚ ಮಹಿಳಾ ದಿನದ ಸಲುವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಬಾರಿ ಅವರು ಬಾರ್ಬಿ ಡಾಲ್ ಆಗಿ ಕಾಣಿಸಿಕೊಂಡಿದ್ದು, ಯಾಕೆ ಹೀಗೆ ಎಂಬ ಪ್ರಶ್ನೆಗೆ ಅವರು ನೀಡಿರುವ ವಿವರಣೆ ಇಲ್ಲಿದೆ.

    ‘ನಿಮ್ ಲೈಫ್​ಗೆ ನೀವೇ ಸೂಪರ್ ವುಮನ್. ನಮಗೆ ನಾವೇ ಸ್ಪೂರ್ತಿ. ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿತರೆ ಜೀವನ ಮತ್ತಷ್ಟು ಕಲರ್​ಫುಲ್ ಆಗುತ್ತದೆ. ಇದೀಗ ಅದೇ ಪರಿಕಲ್ಪನೆಯಲ್ಲಿ ಫೋಟೋಶೂಟ್ ಮಾಡಿಸಿದ್ದೇನೆ. ಬಾರ್ಬಿಗೆ ಗೊಂಬೆ ಎನ್ನುತ್ತಾರೆ. ಆ ಗೊಂಬೆಯೇ ನಾವು. ಚಿಕ್ಕಂದಿನಲ್ಲಿ ಬೊಂಬೆಯನ್ನು ಎಷ್ಟು ಜೋಪಾನ ಮಾಡುತ್ತಿದ್ದೆವೋ, ಎಷ್ಟು ಅಲಂಕಾರ ಮಾಡುತ್ತಿದ್ದೆವೋ ಅದೇ ರೀತಿ ನಮ್ಮನ್ನು ನಾವು ಕೇರ್ ಮಾಡಿಕೊಳ್ಳಬೇಕು. ಆ ಕಾರಣಕ್ಕಾಗಿ ಬಾರ್ಬಿ ಡಾಲ್ ಗೆಟಪ್​ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ’ ಎನ್ನುತ್ತಾರೆ.

    ಬಾರ್ಬಿ ಡಾಲ್​ ಹರ್ಷಿಕಾ; ಮಹಿಳಾ ದಿನದ ಅಂಗವಾಗಿ ಹೊಸ ಫೋಟೋಶೂಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts