More

    ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

    ಹರಪನಹಳ್ಳಿ: ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳು, ಶಾಲಾ ಕೊಠಡಿ, ಚರಂಡಿ ಇತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

    ತಾಲೂಕಿನ ನಾನಾ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನಹಳ್ಳಿತಾಂಡಾ ಕ್ರಾಸ್‌ನಿಂದ ಅಲಮರಸೀಕೆರೆ, ವಡ್ಡಿನ ದಾದಪುರವರೆಗೆ 195 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಗೌರಿಹಳ್ಳಿ ಅಲಮರಸಿಕೇರೆ ರಸ್ತೆಯಿಂದ ಮೀನಹಳ್ಳಿ ತಾಂಡಾ ಕೂಡು ಮಾರ್ಗವನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಚಿಗಟೇರಿ, ಮೈದೂರು, ಕೆಸರಹಳ್ಳಿ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ, ಕೆ.ಕಲ್ಲಹಳ್ಳಿ ಕೆರೆ ಏರಿ ಅಭಿವೃದ್ಧಿ, ಅನಂತನಹಳ್ಳಿ, ಬೈರಾಪುರದಲ್ಲಿ ಜೆಜೆಎಂ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಪಟ್ಟಣ ಒಳಗೊಂಡು ತಾಲೂಕಿನ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

    ಮುಖಂಡರಾದ ಆರ್.ಲೋಕೇಶ್, ಬಾಗಳಿ ಕೋಟ್ರೆಶಪ್ಪ, ಕೆಂಗಳ್ಳಿ ಪ್ರಕಾಶ್, ಶಿವಾನಂದ ದಾದಪುರ, ಎಂ.ಮಲ್ಲೇಶ್, ಗುತ್ತಿಗೆದಾರರಾದ ವಿ.ದೊಡ್ಡಬಸಪ್ಪ, ಕೆ.ತಿಪ್ಪೇಸ್ವಾಮಿ, ಸುಭಾಷ್‌ನಾಯ್ಕ, ಉಪ್ಪಾರ ತಿಮ್ಮಣ್ಣ, ಸಿದ್ದೇಶ್, ಗ್ರಾಮಸ್ಥರಾದ ಪ್ರವೀಣಕುಮಾರ, ಯು.ಪಿ. ಕುಮಾರ, ಕೆಂಚಪ್ಪ, ಎಂ.ಪರಮೇಶ, ಜೊಳ್ಳಿ ನಿಂಗಪ್ಪ, ಇ. ಕಿರಣ, ಬಿ.ಗಣೇಶ, ಎಚ್. ಹನುಮಂತಪ್ಪ, ಶಂಕರನಾಯ್ಕ, ವಾಲ್ಯನಾಯ್ಕ, ಪೂರ್ಯನಾಯ್ಕ, ಗೋಣೆಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts