More

    ಪಾದಯಾತ್ರಿಗಳಿಗೆ ಹಣ್ಣು, ಉಪಹಾರ ವಿತರಣೆ

    ಹರಪನಹಳ್ಳಿ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಮಂಡಳಿಯಿಂದ ಕೊಟ್ಟೂರು ಗುರುಬಸವೇಶ್ವರ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ಔಷಧೋಪಚಾರ, ಹಣ್ಣು, ಉಪಹಾರ, ಊಟ ಸೇರಿ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಭಕ್ತಿ ಸಮರ್ಪಿಸಲಾಯಿತು.

    ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ ಸೇರಿದಂತೆ ಇತರ ತಾಲೂಕು, ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ವೈದ್ಯರ ಮೂಲಕ ವಿವಿಧ ಔಷಧೋಪಾಚಾರ ನಡೆಸಲಾಯಿತು. ಬೆಳಗ್ಗೆ ಉಪಹಾರ ಮಧ್ಯಾಹ್ನ ವಿವಿಧ ಹಣ್ಣುಗಳು, ತಂಪು ಪಾನಿಯಗಳನ್ನು ನೀಡಲಾಯಿತು. ಸಂಜೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರ್ಯವೈಶ್ಯ ಸಮಾಜ ಸಂಘದ ಅಧ್ಯಕ್ಷ ಮುದುಗಲ್ ನಾಗರಾಜ ಶೆಟ್ರು, ಉಪಾಧ್ಯಕ್ಷ ಬಿ.ಎಸ್.ರವಿಶಂಕರ್, ನಟೇಶಕುಮಾರ, ಉಪಕಾರ್ಯದರ್ಶಿ ಕಡ್ಲಿ ನಟರಾಜ, ಖಜಾಂಚಿ ಪೆಂಡಕೂರು ಶ್ರೀಧರ, ಕಡ್ಲಿ ರಾಘವೇಂದ್ರ ಶೆಟ್ಟಿ, ಎಚ್.ಕೆ.ಬದರಿನಾರಾಯಣ, ಗಂಗಾವತಿ ಕಿಟ್ಟಣ್ಣ, ಬಂಕಾಪುರ ಸತೀಶ, ಗಂಗಾವತಿ ಮನೋಹರ, ಕೃಷ್ಣ ಮುದುಗಲ್, ನಾಗಾನಂದ ಮುದುಗಲ್, ಪಿ.ಮುರಳಿ, ಮಹಿಳಾ ಅಧ್ಯಕ್ಷೆ ಎಂ.ಸುಜಾತಾ, ಕಾರ್ಯದರ್ಶಿ ಸವಿತಾ, ಖಜಾಂಚಿ ಪಿ.ಎಂ.ಸೌಮ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts