More

    ತೃತೀಯ ಲಿಂಗಿಗಳಿಗೆ ಕೊಡಿ ಅವಕಾಶ; ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಮನವಿ

    • ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

    ಹರಪನಹಳ್ಳಿ: ತೃತೀಯ ಲಿಂಗಿಗಳಿಗೆ ಅನುಕಂಪ ತೋರಿಸಬೇಡಿ. ಅದರ ಬದಲಿಗೆ ಅವಕಾಶ ಕೊಡಿ ಎಂದು ಸಾರ್ವಜನಿಕರಿಗೆ ಪದ್ಮಶ್ರೀ ಪುರಸ್ಕೃತೆ, ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಮನವಿ ಮಾಡಿದರು.

    ದೇವರತಿಮ್ಮಲಾಪುರದ ಲಕ್ಷ್ಮೀವೆಂಕಟೇಶ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ವೈ.ಡಿ.ಅಣ್ಣಪ್ಪ ಸಮಾಜಮುಖಿ ಟ್ರಸ್ಟ್ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ತೃತೀಯಲಿಂಗಿಗಳಿಗೆ ಉತ್ತಮ ಶಿಕ್ಷಣ ಕೊಡಿಡಬೇಕು. ಲೈಂಗಿಕ ಕಾರ್ಯಕರ್ತೆಯರನ್ನಾಗಿ ಮಾಡದೆ, ಬಿಕ್ಷಾಟನೆ ವೃತ್ತಿಯಿಂದ ಮುಕ್ತಿ ನೀಡಬೇಕು. ಅವರು ಸ್ವಾವಲಂಬಿ ಬದುಕು ನಡೆಸಲು ವಾತಾವರಣ ಕಲ್ಪಿಸಬೇಕು ಎಂದರು.

    ತೆಗ್ಗಿನ ಮಠದ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಒತ್ತಡದ ಶಿಕ್ಷಣ ನೀಡದೆ ಆಸಕ್ತಿದಾಯಕವಾಗಿರುವ ವಿಭಾಗದ ಕೋರ್ಸ್‌ಗಳನ್ನು ಕೊಡಿಸಿ ಸ್ವಾವಲಂಬಿ ಬದುಕು ನಿರ್ಮಿಸಬೇಕು ಎಂದರು.

    ಟ್ರಸ್ಟ್ ಮುಖ್ಯಸ್ಥ ವೈ.ಡಿ.ಅಣ್ಣಪ್ಪ ಮಾತನಾಡಿ, ಐಎಎಸ್ ಮೊದಲಾಧ ಸ್ಪರ್ಧಾತ್ಮ ಪರೀಕ್ಷೆಗಳಿಗೂ ಪೂರ್ವ ತಯಾರಿಗೆ ವೆಚ್ಚವನ್ನು ಸಂಪೂರ್ಣವಾಗಿ ಟ್ರಸ್ಟ್‌ನಿಂದ ಭರಿಸಲಾಗುವುದು ಎಂದರು.

    ಉಪನ್ಯಾಸಕ ದುರುಗೇಶ್ ಉಪನ್ಯಾಸ ನೀಡಿದರು. ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ನೀಲಗುಂದಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ, ವಾಲ್ಮೀಕಿ ನಗರದ ಸಣ್ಣ ಹಾಲಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ತಾಲೂಕಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸುರೇಶ್, ಪರುಶರಾಮ್, ನವೀನ್, ಆದಿತ್ಯ, ಮೈದೂರು ಮಾರುತಿ, ಅಣ್ಣಪ್ಪ, ಮಹೇಶ್, ರಾಮಚಂದ್ರನಾಯ್ಕ, ಪ್ರಶಾಂತ್ ಪಟೇಲ್, ಅಣ್ಣಪ್ಪ, ಮರಿಯಪ್ಪ, ಮಾದಿಹಳ್ಳಿ ಮಂಜಪ್ಪ ಇತರರು ಇದ್ದರು.

    x

    • ಜಾನಪದ ಅಕಾಡೆಮಿ ಅದ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಮನವಿ
    • ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

    ಹರಪನಹಳ್ಳಿ, ಜಾನಪದ ಅಕಾಡೆಮಿ ಅದ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ,
    Harpanahalli, Folk Academy, President Mata Manjamma Jogati, Pratibha Puraskar programme,
    ಹರಪನಹಳ್ಳಿ: ತೃತೀಯ ಲಿಂಗಿಗಳಿಗೆ ಅನುಕಂಪ ತೋರಿಸಬೇಡಿ. ಅದರ ಬದಲಿಗೆ ಅವಕಾಶ ಕೊಡಿ ಎಂದು ಸಾರ್ವಜನಿಕರಿಗೆ ಪದ್ಮಶ್ರೀ ಪುರಸ್ಕೃತೆ, ಜಾನಪದ ಅಕಾಡೆಮಿ ಅದ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಮನವಿ ಮಾಡಿದರು.

    ದೇವರತಿಮ್ಮಲಾಪುರದ ಲಕ್ಷ್ಮೀವೆಂಕಟೇಶ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ವೈ.ಡಿ.ಅಣ್ಣಪ್ಪ ಸಮಾಜಮುಖಿ ಟ್ರಸ್ಟ್ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ತೃತೀಯಲಿಂಗಿಗಳಿಗೆ ಉತ್ತಮ ಶಿಕ್ಷಣ ಕೊಡಿಡಬೇಕು. ಲೈಂಗಿಕ ಕಾರ್ಯಕರ್ತೆಯರನ್ನಾಗಿ ಮಾಡದೆ, ಬಿಕ್ಷಾಟನೆ ವೃತ್ತಿಯಿಂದ ಮುಕ್ತಿ ನೀಡಬೇಕು. ಅವರು ಸ್ವಾವಲಂಬಿ ಬದುಕು ನಡೆಸಲು ವಾತಾವರಣ ಕಲ್ಪಿಸಬೇಕು ಎಂದರು.

    ತೆಗ್ಗಿನ ಮಠದ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಒತ್ತಡದ ಶಿಕ್ಷಣ ನೀಡದೆ ಆಸಕ್ತಿದಾಯಕವಾಗಿರುವ ವಿಭಾಗದ ಕೋರ್ಸ್‌ಗಳನ್ನು ಕೊಡಿಸಿ ಸ್ವಾವಲಂಬಿ ಬದುಕು ನಿರ್ಮಿಸಬೇಕು ಎಂದರು.

    ಟ್ರಸ್ಟ್ ಮುಖ್ಯಸ್ಥ ವೈ.ಡಿ.ಅಣ್ಣಪ್ಪ ಮಾತನಾಡಿ, ಐಎಎಸ್ ಮೊದಲಾಧ ಸ್ಪರ್ಧಾತ್ಮ ಪರೀಕ್ಷೆಗಳಿಗೂ ಪೂರ್ವ ತಯಾರಿಗೆ ವೆಚ್ಚವನ್ನು ಸಂಪೂರ್ಣವಾಗಿ ಟ್ರಸ್ಟ್‌ನಿಂದ ಭರಿಸಲಾಗುವುದು ಎಂದರು.

    ಉಪನ್ಯಾಸಕ ದುರುಗೇಶ್ ಉಪನ್ಯಾಸ ನೀಡಿದರು. ಕೋಲಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ನೀಲಗುಂದಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ, ವಾಲ್ಮೀಕಿ ನಗರದ ಸಣ್ಣ ಹಾಲಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ತಾಲೂಕಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸುರೇಶ್, ಪರುಶರಾಮ್, ನವೀನ್, ಆದಿತ್ಯ, ಮೈದೂರು ಮಾರುತಿ, ಅಣ್ಣಪ್ಪ, ಮಹೇಶ್, ರಾಮಚಂದ್ರನಾಯ್ಕ, ಪ್ರಶಾಂತ್ ಪಟೇಲ್, ಅಣ್ಣಪ್ಪ, ಮರಿಯಪ್ಪ, ಮಾದಿಹಳ್ಳಿ ಮಂಜಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts