More

    ತುಂಗಭದ್ರಾ ನದಿ ಹಳೇ ಸೇತುವೆ ನಿರ್ವಹಣೆಗೆ ಆಗ್ರಹ

    ಹರಿಹರ: ತುಂಗಭದ್ರಾ ನದಿಯ ಶತಮಾನ ಕಂಡ ಹಳೇ ಸೇತುವೆ ನಿರ್ವಹಣೆಗೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆ ಸದಸ್ಯರು ಲೋಕೋಪಯೋಗಿ ಇಲಾಖೆ ಎಇಇ ಶಿವಮೂರ್ತಪ್ಪ ಅವರಿಗೆ ಬುಧವಾರ ಮನವಿ ನೀಡಿದರು.

    ನಂತರ ವೇದಿಕೆ ಸಂಚಾಲನಾ ಸಮಿತಿ ಸದಸ್ಯ ಹಾಗೂ ಲೇಖಕ ಜೆ.ಕಲೀಂಬಾಷಾ ಮಾತನಾಡಿ, 137 ವರ್ಷಗಳಷ್ಟು ಪುರಾತನವಾದ ಸೇತುವೆ ನಿರ್ವಹಣೆ ಇಲ್ಲದೇ ಶಿಥಿಲವಾಗುತ್ತಿದೆ. ನಾಲ್ಕೈದು ತಲೆಮಾರಿನ ಹೆಗ್ಗುರುತಾಗಿ ಈ ಸೇತುವೆ ಉಳಿದಿದೆ ಎಂದರು.

    ಸೇತುವೆ ಮೇಲಿರುವ ನಗರಸಭೆ ನೀರಿನ ಪೈಪ್‌ಗಳ ಕೆಳಗೆ ಗಿಡ ಗಂಟಿ ಬೆಳೆದಿವೆ. ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಮಳೆ ನೀರು ನದಿಗೆ ಸೇರಿಸುವ ಕಿಂಡಿಗಳು ಮುಚ್ಚಿ ಹೋಗಿವೆ. ಮಳೆ ನೀರು ಸೇತುವೆ ಮೇಲೇ ನಿಲ್ಲುತ್ತಿದೆ. ಸೇತುವೆ ಎರಡೂ ಬದಿಯಲ್ಲಿ ಹತ್ತಾರು ಅಡಿ ಎತ್ತರಕ್ಕೆ ದಟ್ಟವಾದ ಗಿಡ ಗಂಟಿ ಬೆಳೆದು ನಿಂತಿವೆ ಎಂದು ಹೇಳಿದರು.

    ಗಿಡ-ಗಂಟಿ ಬೇರುಗಳು ಸೇತುವೆ ಗೋಡೆಗಳ ಒಳ ಹೊಕ್ಕಿವೆ. ಸ್ವಾತಂತ್ರೃ ಪೂರ್ವದಿಂದ ಆಗಿನ ಮಹಾರಾಷ್ಟ್ರ ಮತ್ತು ಮೈಸೂರು ರಾಜ್ಯಗಳ ನಡುವಿನ ಸಂಪರ್ಕದ ಕೊಂಡಿಯಾಗಿದ್ದ ಸೇತುವೆ ಈ ತಾಲೂಕಿನ ಪ್ರಮುಖ ಸ್ಮಾರಕವಾಗಿದೆ ಎಂದರು.

    ಪುರಸಭೆ ಮಾಜಿ ಸದಸ್ಯ ಬಾಂಬೆ ರಹಮಾನ್ ಸಾಬ್ ಮಾತನಾಡಿ, ಈ ಹಿಂದೆ ತಹಶೀಲ್ದಾರರಿಗೆ ವೇದಿಕೆಯಿಂದ ಮನವಿ ನೀಡಲಾಗಿದೆ. ಸೇತುವೆಗಳು ರಾಷ್ಟ್ರೀಯ ಸಂಪತ್ತಾಗಿದ್ದು, ಈವರೆಗೂ ಸೇತುವೆ ನಿರ್ವಹಣೆಗೆ ಮುಂದಾಗದಿರುವುದು ಖಂಡನೀಯ. ಇದೇ ನಿರ್ಲಕ್ಷ್ಯ ಮುಂದುವರೆಸಿದರೆ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

    ಎಇಇ ಶಿವಮೂರ್ತಪ್ಪ ಅವರು ಮಾತನಾಡಿ, ಸೇತುವೆ ನಿರ್ವಹಣೆಗಾಗಿ ಹಿರಿಯ ಅಧಿಕಾರಿಗಳಿಗೆ 5 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬರುವ ನಿರೀಕ್ಷೆ ಇದೆ. ಈ ಕುರಿತು ಅರಣ್ಯ ಇಲಾಖೆ ತಜ್ಞರೊಂದಿಗೆ ಚರ್ಚಿಸಿ ಅಲ್ಲಿನ ಗಿಡ, ಗಂಟಿಗಳನ್ನು ತೆರವುಗೊಳಿಸಲು ರಸಾಯನಿಕ ಬಳಕೆ ಮಾಡುತ್ತೇವೆ. ಗಿಡ, ಗಂಟಿ ತೆರವುಗೊಳಿಸಿ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ವೇದಿಕೆ ಸದಸ್ಯರಾದ ರಹಮಾನ್ ಖಾನ್, ಮೊಹ್ಮದ್ ಇಸಾಕ್, ಯಾಖೂಬ್ ಸಾಬ್, ಮಂಜುನಾಥ್, ಚಂದ್ರಶೇಖರಪ್ಪ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts