More

    ಸರ್ಕಾರದ ನಿಯಮ ಪಾಲನೆ ಅವಶ್ಯ

    ಹರಿಹರ: ಸರ್ಕಾರದ ಜತೆಗೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಕರೊನಾ ರೋಗಾಣು ನಿಯಂತ್ರಣಕ್ಕೆ ತರಬಹುದು ಎಂದು ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಹೇಳಿದರು.

    ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಕೋವಿಡ್ ನಿವಾರಣೆ ಕುರಿತ ತರಬೇತಿ ಕಾರ್ಯಾಗಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಕಣ್ಣಿಗೆ ಕಾಣದ ವೈರಾಣು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಆದ್ದರಿಂದ ಸಾರ್ವಜನಿಕರು ಸರ್ಕಾರದ ನಿಯಮ ಪಾಲಿಸಲು ಸಹಕರಿಸ ಬೇಕು ಎಂದರು.

    ನಗರದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸಮಿತಿ ರಚಿಸಲಿದ್ದು, ಆರೋಗ್ಯ, ನಗರಸಭೆ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಮತ್ತು ಸ್ವಯಂ ಸೇವಾ ಸಂಸ್ಥೆ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

    ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ಮಾತನಾಡಿ, ನಾವು ರೋಗ ವಿರುದ್ಧ ಹೋರಾಡ ಬೇಕೇ ವಿನಾ ರೋಗಿಯ ವಿರುದ್ಧವಲ್ಲ ಎಂದು ಜನರಿಗೆ ಅರಿವು ಮೂಡಿಸುವುದು ಅವಶ್ಯ ಎಂದರು.

    ಪೌರಾಯುಕ್ತೆ ಎಸ್.ಲಕ್ಷ್ಮೀ ಮಾತನಾಡಿ, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವಾಗಬೇಕು ಎಂದರು.

    ನಗರಸಭೆ ಸದಸ್ಯರಾದ ನಿಂಬಕ್ಕ ಚಂದಾಪೂರ, ಕೆ.ಜಿ.ಸಿದ್ದೇಶ್, ದಾದಾ ಖಲಂದರ್, ಮಾಜಿ ಅಧ್ಯಕ್ಷ ಕೆ.ಮರಿದೇವ, ಎಇಇ ಎಸ್.ಎಸ್. ಬಿರಾದರ್, ಆರೋಗ್ಯ ನಿರೀಕ್ಷಕರಾದ ಕೋಡಿ ಭೀಮರಾಯ್, ರವಿ ಪ್ರಕಾಶ್, ಪರಿಸರ ಇಂಜಿನಿಯರ್ ಮಹೇಶ್ ಕೊಡಬಾಳ್, ಸಿಬ್ಬಂದಿ ಪ್ರವೀಣ್ ಕುಮಾರ್, ಮಂಜುನಾಥ್ ಇದ್ದರು.

    ಸದಸ್ಯರು ಗೈರು: ಕೊವೀಡ್ ನಿಯಂತ್ರಣಕ್ಕೆ ತರಲು ಸರ್ಕಾರ ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸಲು ಕರೆಯಲಾಗಿದ್ದ ಪ್ರಮುಖ ಸಭೆಗೆ ನಗರಸಭೆಯ ಬಹುತೇಕ ಸದಸ್ಯರ ಗೈರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts