More

    ಬೆಂಗಳೂರಿನ ಪಾಂಡುರಂಗ ಶಿಂಧೆ ‘ಕನಕ ಕಂಠೀರವ’

    ಹರಿಹರ: ಕನಕ ಜಯಂತಿ ಪ್ರಯುಕ್ತ ನಗರದಲ್ಲಿ ಎರಡು ದಿನಗಳ ಕಾಲ ನಡೆದು ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ +86 ಕೆ.ಜಿ.ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಬೆಂಗಳೂರಿನ ಎಂಇಜಿಯ ಪಾಂಡುರಂಗ ಶಿಂಧೆ ‘ಕನಕ ಕಂಠೀರವ’ ಪ್ರಶಸ್ತಿ, ಬೆಳ್ಳಿ ಗದೆ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಮುಡಿಗೇರಿಸಿಕೊಂಡರು.

    ಕನಕದಾಸರ 534ನೇ ಜಯಂತಿ ಅಂಗವಾಗಿ ಶ್ರೀ ಹರಿಹರ ಕುಸ್ತಿ ಜೀರ್ಣೋದ್ಧಾರ ಸಮಿತಿ ಮತ್ತು ರಾಜ್ಯ ಕುಸ್ತಿ ಸಂಘದಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. + 86 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬೆಳಗಾವಿಯ ಶಿವಯ್ಯ ಪೂಜಾರಿ ದ್ವಿತೀಯ ಸ್ಥಾನ ಗಳಿಸಿ ಪ್ರಶಸ್ತಿ ಪತ್ರ, ನಗದು ಬಹುಮಾನ ಪಡೆದರು. ದಾವಣಗೆರೆಯ ಕಿರಣ್ ಅಸ್ತಗಿ ಹಾಗೂ ಆಳ್ವಾಸ್ ಸಂಸ್ಥೆಯ ರಕ್ಷಿತ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.

    86 ಕೆ.ಜಿ.ವಿಭಾಗದಲ್ಲಿ ಧಾರವಾಡದ ಎಸ್‌ಟಿಸಿ ಸಂಸ್ಥೆಯ ಆದಿತ್ಯ ಪ್ರಥಮ ಸ್ಥಾನ ಪಡೆದು ‘ಹರಿಹರ ಕೇಸರಿ’ ಪ್ರಶಸ್ತಿ, ಬೆಳ್ಳಿ ಗದೆಗೆ ಭಾಜನರಾದರು. ಎಂಐಆರ್‌ಸಿ ಸಂಸ್ಥೆಯ ಮಹೇಶ್ ಲಂಗೋಟಿ 2ನೇ ಸ್ಥಾನ, ಮುಶಾಲ್‌ನ ಬಾಪೂಶೆಬಿ ಶಿಂಧೆ, ದಾವಣಗೆರೆಯ ಪಂಕಜ್ ಕುಮಾರ್ 3ನೇ ಸ್ಥಾನಕ್ಕೆ ಪಾತ್ರರಾದರು.

    74 ಕೆ.ಜಿ.ವಿಭಾಗದಲ್ಲಿ ದಾವಣಗೆರೆಯ ಹೊಳಿಬಸು ಪ್ರಥಮ ಸ್ಥಾನದ ಜತೆಗೆ ಶ್ರೀ ಹರಿಹರ ಕುಮಾರ ಪ್ರಶಸ್ತಿ, ಬೆಳ್ಳಿ ಗದೆ ಪಡೆದರು. ಎಂಇಜಿ ಸಂಸ್ಥೆಯ ಆಕಾಶ್ 2ನೇ ಸ್ಥಾನ ಪಡೆದರೆ, ಬಿಜಿಎಂ ಸಂಸ್ಥೆಯ ಸಚಿನ್ ವೈ.ಶಿರಗುಪ್ಪಿ ಮತ್ತು ಧಾರವಾಡದ ಮಲ್ಲಿಕಾರ್ಜುನ ತಳಮಸ್ತಿ 3ನೇ ಸ್ಥಾನ ಪಡೆದರು.

    61 ಕೆ.ಜಿ.ವಿಭಾಗದಲ್ಲಿ ಹಳಿಯಾಳದ ಮಹೇಶ್ ಗೌಡ ಪ್ರಥಮ ಸ್ಥಾನ ಪಡೆದು ಶ್ರೀ ಹರಿಹರ ಕಿಶೋರ ಪ್ರಶಸ್ತಿ, ಬೆಳ್ಳಿ ಗದೆ ಪಡೆದರು. ಎಂಇಜಿ ಸಂಸ್ಥೆಯ ರಮೇಶ್ ಹೊಸಕೋಟೆ 2ನೇ ಸ್ಥಾನ, ಲಕ್ಷ್ಮಣ ಮುನ್ ಹೊಳೆ, ದಾವಣಗೆರೆಯ ಸುನೀಲ್ ಸಿ. 3ನೇ ಸ್ಥಾನ ಪಡೆದರು.
    55 ಕೆ.ಜಿ.ವಿಭಾಗದಲ್ಲಿ ದಾವಣಗೆರೆಯ ಕೆಂಪನಗೌಡ ಕೆ. ಪ್ರಥಮ ಸ್ಥಾನ ಪಡೆದು ಬಾಲ ಕನಕ ಕೇಸರಿ ಪ್ರಶಸ್ತಿ, ಬೆಳ್ಳಿ ಗದೆ ಪಡೆದರು. ಬಾಗಲಕೋಟೆಯ ಕತೀಖ್ ತಲ್‌ವಾರ್ 2ನೇ ಸ್ಥಾನ ಪಡೆದರು. ದಾವಣಗೆರೆಯ ವಿರೂಪಾಕ್ಷಿ ಮತ್ತು ಮಂಜುನಾಥ ಬಿ. 3ನೇ ಸ್ಥಾನ ಪಡೆದರು.

    48 ಕೆ.ಜಿ.ವಿಭಾಗದಲ್ಲಿ ದಾವಣಗೆರೆಯ ಪರಶುರಾಮ ವಿ. ಪ್ರಥಮ ಸ್ಥಾನ ಪಡೆದು ಶ್ರೀ ಹರಿಹರೇಶ್ವರ ಪ್ರಶಸ್ತಿ, ಬೆಳ್ಳಿ ಕಪ್ ಪಡೆದರು. ಬೆಳಗಾವಿಯ ಬೆನಕಪ್ಪನವರ್ 2ನೇ ಸ್ಥಾನ, ಹಳಿಯಾಳದ ನಂದಲಿಂಗ ಮಹದೇವ ಮತ್ತು ಬಾಗಲಕೋಟೆ ಮಂಜುನಾಥ ದೇಸಾಯಿ 3ನೇ ಸ್ಥಾನ ಪಡೆದರು.

    45 ಕೆ.ಜಿ.ವಿಭಾಗದಲ್ಲಿ ದಾವಣಗೆರೆಯ ಎನ್.ಜಿ.ಕೆಂಚು ಪ್ರಥಮ ಸ್ಥಾನ, ಬೆಳ್ಳಿ ಕಪ್ ಪಡೆದರು. ದಾವಣಗೆರೆಯ ಯುವರಾಜ್ 2ನೇ ಸ್ಥಾನ, ದಾವಣಗೆರೆಯ ನಾಗಾರ್ಜುನ ಮತ್ತು ಕೀರ್ತನ್ 3ನೇ ಸ್ಥಾನ ಪಡೆದರು.

    44 ಕೆ.ಜಿ.ವಿಭಾಗದಲ್ಲಿ ಬಾಗಲಕೋಟೆಯ ಹನುಮಂತ ತುಂಗಲ್ ಪ್ರಥಮ ಸ್ಥಾನ, ಬಾಗಲಕೋಟೆಯ ವರುಣ್ ಕುಮಕಲೆ 2ನೇ ಸ್ಥಾನ, ಬೆಳಗಾವಿಯ ಓಂ ಮಾರುತಿ ಗೋಡಿ, ಹಾವೇರಿಯ ಚೇತನ್ ಸುರೇಶ್ 3ನೇ ಸ್ಥಾನ ಪಡೆದರು.

    38 ಕೆ.ಜಿ.ವಿಭಾಗದಲ್ಲಿ ದಾವಣಗೆರೆಯ ಮೋಹನ್‌ರಾಜ್ ಪ್ರಥಮ ಸ್ಥಾನ ಪಡೆದು ಬೆಳ್ಳಿ ಕಪ್ ಪಡೆದರು. ಹರಿಹರದ ವೆಂಕಟೇಶ್ ಚಂದ್ರ 2ನೇ ಸ್ಥಾನ, ಧಾರವಾಡದ ಭಜರಂಗಿ, ಬಾಗಲಕೋಟೆಯ ಮುತ್ತು ಬಸಪ್ಪ ತೃತೀಯ ಸ್ಥಾನ ಪಡೆದರು.

    ಮಹಿಳಾ ವಿಭಾಗ:

    + 55 ಕೆ.ಜಿ.ವಿಭಾಗದಲ್ಲಿ ಹಳಿಯಾಳದ ಲೀನಾ ಎ.ಸಿದ್ಧಿ ಪ್ರಥಮ ಸ್ಥಾನ ಪಡೆದು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಬೆಳ್ಳಿ ಕಪ್ ಮುಡಿಗೇರಿಸಿದರು. ಗದಗಿನ ಶ್ವೇತಾ 2ನೇ ಸ್ಥಾನ, ಹಳಿಯಾಳದ ಪ್ರತೀಕ್ಷಾ ಬೋವಿ ಮತ್ತು ಪ್ರಿನಿಶಾ ಪಿ.ಸಿದ್ಧಿ ತೃತೀಯ ಸ್ಥಾನ ಪಡೆದರು.

    55 ಕೆ.ಜಿ.ವಿಭಾಗದಲ್ಲಿ ಹಳಿಯಾಳದ ಲಕ್ಷ್ಮಿ ಎಸ್.ಪಾಟೀಲ್ ಪ್ರಥಮ ಸ್ಥಾನ, ಬೆಳ್ಳಿ ಕಪ್ ಪಡೆದರು. ಗದಗಿನ ಶಾಹಿದಾ ಬೇಗಂ ಬಿ. 2ನೇ ಸ್ಥಾನ, ಆಳ್ವಾಸ್‌ನ ಸಹನಾ ಪಿ.ಎಸ್. ಮತ್ತು ಬೆಳಗಾವಿಯ ಐಶ್ವರ್ಯ ಕೆ. 3ನೇ ಸ್ಥಾನ ಪಡೆದರು.

    50 ಕೆ.ಜಿ. ವಿಭಾಗದಲ್ಲಿ ಗದಗಿನ ಪ್ರೇಮಾ ಎಚ್.ಪ್ರಥಮ ಸ್ಥಾನ ಹಾಗೂ ಬೆಳ್ಳಿ ಕಪ್ ಪಡೆದರು. ಹಳಿಯಾಳದ ಶಾಲಿನಾ ಎಸ್.ಸಿದ್ಧಿ 2ನೇ ಸ್ಥಾನ, ಗದಗಿನ ಬಷೀರಾ ಮತ್ತು ಧಾರವಾಡದ ಗೋಪವ್ವ ಎಂ. ಕೊಡಕಿ ತೃತೀಯ ಸ್ಥಾನ ಪಡೆದರು.

    46 ಕೆ.ಜಿ.ವಿಭಾಗದಲ್ಲಿ ಹಳಿಯಾಳದ ಕಾವ್ಯ ಟಿ.ಡಿ. ಪ್ರಥಮ ಸ್ಥಾನ ಪಡೆದು ಶ್ರೀಮತಿ ಬಚ್ಚಮ್ಮ ತಾಯಿ ಪ್ರಶಸ್ತಿ, ಬೆಳ್ಳಿ ಕಪ್ ಪಡೆದರು. ಗದಗಿನ ಶ್ವೇತಾ ಜಿ.ಜಾಧವ್ 2ನೇ ಸ್ಥಾನ, ಹಳಿಯಾಳದ ವಿದ್ಯಾಶ್ರೀ ಜಿ ಮತ್ತು ಬಾಗಲಕೋಟೆಯ ರಜನಿ ಅಡಗಲ 3ನೇ ಸ್ಥಾನ ಪಡೆದರು.

    40 ಕೆ.ಜಿ.ವಿಭಾಗದಲ್ಲಿ ಬಾಗಲಕೋಟೆಯ ಕಲ್ಪನಾ ಪ್ರಥಮ, ಹಳಿಯಾಳದ ಸೋನಾಲ್ ಎಸ್.ಲಂಬಾರೆ 2ನೇ ಸ್ಥಾನ, ಧಾರವಾಡದ ಪುಷ್ಪ ಜಿ.ನಾಯಕ್, ಹಳಿಯಾಳದ ಗಂಗತ್ರಿ ತೃತೀಯ ಸ್ಥಾನ ಪಡೆದರು.

    ಕಾಗಿನೆಲೆ ಕನಕಗುರು ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ವಿಜೇತರಿಗೆ ಬಹುಮಾನ, ಪ್ರಶಸ್ತಿ ವಿತರಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಗುರುವಾರ ಬೆಳಗಿನಜಾವದವರೆಗೆ ಅಭಿಮಾನಿಗಳು ಕುಸ್ತಿ ಪಂದ್ಯಾವಳಿಯ ರಸದೌತಣ ಕಣ್ತುಂಬಿಕೊಂಡರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts