More

    ಮಹನೀಯರ ತತ್ವಾದರ್ಶ ದಾರಿದೀಪ

    ಚಿಕ್ಕಮಗಳೂರು: ಯಾವುದೇ ಮಹಾನ್ ವ್ಯಕ್ತಿಗಳ ಹೆಸರಿನ ಜಯಂತಿಯ ಬ್ಯಾಡ್ಜ್‌ಗಳು ಎದೆಯ ಮೇಲೆ ಬಿದ್ದರೆ ಸಾಲದು. ಅವರ ತತ್ವಾದರ್ಶಗಳು ನಮ್ಮ ತಲೆಯೊಳಗೆ ಸಂಗ್ರಹವಾದರೆ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.

    ನಗರದ ಕೆಎಸ್‌ಆರ್‌ಟಿಸಿ ಘಟಕದ ಆವರಣದಲ್ಲಿ ಕೆಎಸ್‌ಆರ್‌ಟಿಸಿ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಕನಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಮಾತನಾಡಿದರು.
    ಈಗಿನ ಸರ್ಕಾರ 5 ಗ್ಯಾರಂಟಿ ಕೊಟ್ಟಿದೆ. ಆದರೆ ನಮ್ಮ ಬದುಕಿಗೆ ಪ್ರಕೃತಿಯೇ ಗ್ಯಾರಂಟಿ ಕೊಟ್ಟಿದೆ. ರಸ್ತೆ, ಕುಡಿಯುವ ನೀರು, ಗಾಳಿ, ಶಿಕ್ಷಣ, ಆರೋಗ್ಯ ಈ ಐದು ಜಾತ್ಯತೀತ ಕೊಡುಗೆಗಳು. ದೇಹ ಮತ್ತು ದೇಶವನ್ನು ಸೌಖ್ಯವಾಗಿ ಇರಿಸಿಕೊಳ್ಳಬೇಕು. ದೇಹವನ್ನು ಸೌಖ್ಯವಾಗಿ ಇರಿಸುವವನು ರೈತ. ದೇಶವನ್ನು ಸಮೃದ್ಧವಾಗಿ ಇರಿಸುವವರು ಯೋಧರು. ಗನ್, ಪೆನ್ನು ಇವೆರಡೂ ಇದ್ದಾಗ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ವಿಶ್ಲೇಷಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಚ್.ಡಿ.ತಮ್ಮಯ್ಯ, ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು ಈ ಮಹಾನ್ ಪುರುಷರ ಉದ್ದೇಶ ಒಂದೇ ಆಗಿತ್ತು. ಶೋಷಿತರ ಪರ ಧ್ವನಿ ಎತ್ತಿ ಸಮಾನತೆ ಕಾಪಾಡುವುದು ಅವರ ವಿಚಾರಧಾರೆಗಳಲ್ಲಿ ಪ್ರಮುಖವಾಗಿದ್ದವು. ಇಂತಹ ಮಹಾನ್ ಪುರಷರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಪ್ರಪಂಚ ಇರುವವರೆಗೆ ಅವರ ವಿಚಾರಧಾರೆಗಳು ಜೀವಂತವಾಗಿರುತ್ತವೆ ಎಂಬುದಕ್ಕೆ ಇಂದು ಜಯಂತಿ ಆಚರಣೆ ಸ್ಪಷ್ಟ ನಿದರ್ಶನ ಎಂದು ತಿಳಿಸಿದರು.
    ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಮೂಲಕ ಅವರ ತತ್ವಾದರ್ಶಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾವಯವ ಕೃಷಿಕ ಚಂದ್ರಶೇಖರ್ ನಾರಣಾಪುರ, ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ.ರಾಜಣ್ಣ, ವಕೀಲ ಅನಿಲ್‌ಕುಮಾರ್, ವಸ್ತಾರೆಯ ನಿವೃತ್ತ ಯೋಧ ಎಂ.ಎಂ.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಕಾರಿ ಕೆ.ಆರ್.ಬಸವರಾಜ್, ಸಹಾಯಕ ಲೆಕ್ಕಾಕಾರಿ ಕೆ.ಎ ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts