More

    ವಿದ್ಯುತ್ ಅವಘಡದಿಂದ ರೈತ ಸಾವು

    ಹರಿಹರ: ತಾಲೂಕಿನ ಹರಗನಹಳ್ಳಿಯಲ್ಲಿ ಶನಿವಾರ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ರೈತ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ.

    ಮಲ್ಲೇಶಪ್ಪ (45) ಮೃತ. ಈತ ಎಂದಿನಂತೆ ಬೆಳಗಿನ ಜಾವ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ವೇಳೆ ವಿದ್ಯುತ್ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಕ್ಕದ ಜಮೀನಿನ ರೈತರು ನೋಡಿ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ನಂತರ ನೂರಾರು ರೈತರು ಸ್ಥಳಕ್ಕೆ ಆಗಮಿಸಿದರು.

    ಪೊಲೀಸರು ಶವವನ್ನು ಸ್ಥಳಾಂತರಿಸಲು ಮುಂದಾದಾಗ ಬೆಸ್ಕಾಂ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಅಲ್ಲಿಯವರೆಗೂ ಶವವನ್ನು ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು.

    ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಹಾಗೂ ಬೆಸ್ಕಾಂ ಅಧಿಕಾರಿಗಳು ಆಗಮಿಸಿದರು. ರೈತನ ಸಾವಿಗೆ ಬೆಸ್ಕಾಂ ಕಾರಣ. ಆದ್ದರಿಂದ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.

    ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ. ವಿದ್ಯುತ್ ಸರಬರಾಜಿನ ಸಮಯ ಬದಲಾವಣೆ ಕುರಿತು ಚರ್ಚಿಸುತ್ತೇನೆ. ರೈತನ ಶವ ಪರೀಕ್ಷೆಗೆ ಕಳುಹಿಸಲು ಸಹಕರಿಸಬೇಕೆಂದು ತಹಸೀಲ್ದಾರ್ ಕೋರಿದಾಗ, ರೈತರು ಹರಿಹರ ಸಾರ್ವಜನಿಕ ಆಸ್ಪತ್ರೆಗೆ ತೆಗೆದುಕೊಂಡು ಹೋದರು.

    ಸಿಪಿಐ ಶಿವಪ್ರಸಾದ್, ಪಿಎಸ್‌ಐ ಡಿ.ರವಿಕುಮಾರ್ ಇದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾತ್ರಿ ವೇಳೆ ವಿದ್ಯುತ್‌ನಿಂದ ಅವಘಡ: ರಾತ್ರಿ ಸಮಯದಲ್ಲಿ 3 ಪೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ರೈತರ ಜಮೀನುಗಳಿಗೆ ನೀರು ಹಾಯಿಸಲು ಈ ರೀತಿಯ ಅವಘಡಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ರಾತ್ರಿ ಸರದಿ ಬಿಟ್ಟು ಕೂಡಲೇ ಬೆಳಗಿನ ಸಮಯದಲ್ಲಿ 3 ಪೇಸ್ ವಿದ್ಯುತ್ ನೀಡಬೇಕು ಎಂದು ರೈತರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts