More

    ದುಶ್ಚಟಗಳು ನಾಗರಿಕ ಸಮಾಜಕ್ಕೆ ಮಾರಕ

    ಹರಿಹರ: ಮದ್ಯಪಾನದಂತಹ ದುಶ್ಚಟಗಳು ನಾಗರಿಕ ಸಮಾಜಕ್ಕೆ ಮಾರಕವಾಗಿವೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

    ನಗರದ ಗುತ್ತೂರಿನ ಕೋಟೆ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಎಲ್ಲ ಶಿಬಿರಾರ್ಥಿಗಳು ಇಲ್ಲಿ ಪಾಲಿಸಿದ ನಿಯಮಗಳನ್ನು ಜೀವನದುದ್ದಕ್ಕೂ ಅನುಸರಿಸಿದಾಗ ಸಮಸ್ಯೆಗಳು ದೂರವಾಗಲಿವೆ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ನೀಡುತ್ತಿರುವ ಸೇವೆ ಶ್ಲಾಘನೀಯವಾದುದು ಎಂದರು.

    ತಪೋವನ ಆಯುರ್ವೇದ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಶಶಿಕುಮಾರ್ ಮಾತನಾಡಿ, ಮದ್ಯಪಾನದಂತಹ ದುಶ್ಚಟಗಳು ವೈಯಕ್ತಿಕವಾಗಿ ಮಾತ್ರವಲ್ಲದೆ, ಸಮಾಜಕ್ಕೂ ಹಾನಿಕರ. ಇವುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಆಯೋಜಿಸಬೇಕಿದೆ. ಇಂತಹ ಕಾರ್ಯದಲ್ಲಿ ತೊಡಗಿಕೊಂಡಿರುವ ಧರ್ಮಸ್ಥಳ ಸಂಸ್ಥೆಯ ಕಾರ್ಯ ಅವಿಸ್ಮರಣೀಯ ಎಂದರು.

    ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ. ರುದ್ರೇಗೌಡ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಮಾಡುವ ಎಲ್ಲ ಕೆಲಸಗಳಲ್ಲೂ ಸಮಾಜದ ಅಭಿವೃದ್ಧಿಪರ ಕಾಳಜಿ ಇದೆ. ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

    ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಬಾಬಣ್ಣ, ಅಣಬೇರು ಮಂಜಪ್ಪ, ಸಮಿತಿಯ ಅಧ್ಯಕ್ಷ ಸಿದ್ದಪ್ಪ ಮೂಲಿಮನಿ, ಬಿ.ಎಸ್. ಬಸಪ್ಪ, ಬಸಪ್ಪ ಗರಡಿಮನಿ, ಜೆ.ಎಸ್. ವೀರಭದ್ರಪ್ಪ, ರೂಪಾ ಕಾಟ್ವೆ, ಮಲ್ಲಮ್ಮ, ಚಂದ್ರಪ್ಪ, ಶಿಬಿರಾಧಿಕಾರಿ ವಿದ್ಯಾಧರ, ರಂಜಿತಾ, ಮೇಲ್ವಿಚಾರಕರಾದ ಶಿಲ್ಪಾ, ಸಂತೋಷ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts