More

    ಗ್ರಾಮೀಣ ಪತ್ರಕರ್ತರ ಜೀವನಕ್ಕೆ ಬೇಕು ಭದ್ರತೆ

    ಹರಿಹರ: ಗ್ರಾಮೀಣ ಭಾಗದ ಪತ್ರಕರ್ತರ ಜೀವನಕ್ಕೆ ಭದ್ರತೆ ದೊರಕಬೇಕು ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಪತ್ರಕರ್ತರು ಸಾಮಾನ್ಯವಾಗಿ ಆರ್ಥಿಕವಾಗಿ ಸಬಲರಾಗಿತ್ತಾರೆಂಬ ಭಾವನೆ ಸಮಾಜದಲ್ಲಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಪೂರ್ಣವಾಗಿರಲು ಶ್ರಮಿಸುವ ಪತ್ರಕರ್ತರ ಬದುಕು ಅತಂತ್ರವಾಗಿರಬಾರದು. ಅವರಿಗೆ ಜೀವನ ಭದ್ರತೆ ದೊರಕಬೇಕು ಎಂದರು.

    ಪತ್ರಕರ್ತರಿಗೆ ನಿಯಮಬದ್ಧ ಸೌಕರ್ಯಗಳನ್ನು ಸರ್ಕಾರದಿಂದ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಶ್ರೀಗಳು, ಈ ಬಗ್ಗೆ ಮುಖ್ಯಮಂತ್ರಿ, ಸಂಬಂಧಿತ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

    ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ ಉಪನ್ಯಾಸ ನೀಡಿ, ಆಧುನಿಕ ತಂತ್ರಜ್ಞಾನ ಬಳಕೆಗೆ ನಾವುಗಳು ಸಜ್ಜಾಗಬೇಕು ಇದರಿಂದ ನಮ್ಮ ಜ್ಞಾನ ಮತ್ತು ಬರವಣಿಗೆ ಸಹಕಾರವಾಗುತ್ತದೆ ಮಾತ್ರವಲ್ಲದೆ ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ವೃತ್ತಿಪರತೆ ಹೆಚ್ಚಾಗುತ್ತದೆ ಎಂದರು.

    ನಾವು ಬಳಸುವ ಮೊಬೈಲ್ ಫೋನ್‌ನಲ್ಲಿರುವ ಆಪ್‌ಗಳನ್ನು ದಕ್ಷವಾಗಿ ಬಳಸಿಕೊಂಡು ಸುದ್‌ದಿ ಹಾಗೂ ವೀಡಿಯೋಗಳನ್ನು ಯು ಟ್ಯೂಬ್‌ಗಳಿಗೆ ಆಪ್‌ಲೋಡ್ ಮಾಡಿದರೆ ಕ್ರಮೇಣವಾಗಿ ಆದರಿಂದ ಅದಾಯಗಳಿಸ ಬಹುದಾಗಿದೆ ಎಂದರು.

    ಗ್ರಾಮೀಣ ಭಾಗದ ಪತ್ರಕರ್ತರಿಗೆ ಸಂಭಾವನೆ ಕಡಿಮೆ ಇದ್ದು ಸರ್ಕಾರ ವಿಶೇಷ ಸಹಕಾರ ನೀಡಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಿದ್ದು ಆಳುವ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

    ಪ್ರಸ್ತಾವನೆ ಮಾಡಿದ ಸಂಘದ ಮಾಜಿ ಅಧ್ಯಕ್ಷ ಶೇಖರಗೌಡ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವುದು ದುಸ್ತರವಾಗಿದೆ. ಊರಿಗೆ ಉಪಕಾರಿ, ಮನೆಗೆ ಮಾರಿ ಎಂಬ ದುಸ್ಥಿತಿ ನಮ್ಮದಾಗಿದೆ. ಕಾರ್ಯಾಂಗ, ಶಾಂಸಕಾಂಗವನ್ನು ಎಚ್ಚರಿಸುವ, ಅವು ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಮಹತ್ವದ ಜವಾಬ್ದಾರಿ ಹೊತ್ತ ಪತ್ರಕರ್ತರಿಗೆ ಸರ್ಕಾರ ಅಗತ್ಯ ಸೌಲಭ್ಯ ಸೌಕರ್ಯಗಳನ್ನು ಒದಗಿಸಬೇಕೆಂದರು.

    ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಜನ ಸಾಮಾನ್ಯರ ಹಕ್ಕು, ಬಾಧ್ಯತೆಗಳನ್ನು ಕಾಪಾಡುವ ಮಹತ್ವದ ಜವಾಬ್ದಾರಿ ನಿಭಾಯಿಸುವ ಮಾದ್ಯಮದವರ ಆರ್ಥಿಕ ಭದ್ರತೆಗೆ ಸರ್ಕಾರ ಗಮನ ಹರಿಸಬೇಕು. ನಿರ್ಧಿಷ್ಟವಾಗಿ ಮನವಿ ನೀಡಿದರೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

    ಸಂಘದ ಅಧ್ಯಕ್ಷೆ ಶಾಂಭವಿ ನಾಗರಾಜ್ ಅಧ್ಯಕ್ಷತೆವಹಿಸಿದ್ದರು. ನಗರಸಭಾಧ್ಯಕ್ಷೆ ನಿಂಬಕ್ಕ ಚಂದಾಪೂರ್, ನಗರಸಭಾ ಸದಸ್ಯ ಎಂ.ಆರ್.ಮುಜಾಮಿಲ್ (ಬಿಲ್ಲು) ಮಾತನಾಡಿದರು. ಗಿರಿಯಮ್ಮ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

    ಸಂಘದ ಉಪಾದ್ಯಕ್ಷ ಎಚ್.ಸುಧಾಕರ, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕೀರ್ತಿಕುಮಾರ್,ಸಹ ಕಾರ್ಯದರ್ಶಿ ಆರ್.ಮಂಜುನಾಥ್, ಬಿ.ಎಂ.ಚಂದ್ರಶೇಖರ್, ವೈ.ನಾಗರಾಜ್, ಸಂತೋಷ್ ಎಂ.ನೋಟದವರ, ಜಿಗಳಿ ಪ್ರಕಾಶ್, ಜಿ.ಕುಮಾರ್, ಆರ್.ಬಿ.ಪ್ರವೀಣ್, ಕುಂಬಳೂರು ಸದಾನಂದ, ಟಿ.ಇನಾಯತ್ ಉಲ್ಲಾ, ಬಿ.ಎಂ.ಸಿದ್ದಲಿಂಗಸ್ವಾಮಿ, ಚಂದ್ರಶೇಖರ್ ಕುಂಬಾರ್, ಇರ್ಪಾನ್, ಕೆ.ಪಂಚಾಕ್ಷರಿ, ಕೃಷ್ಣ ರಾಜೋಳಿ, ಚಿದಾನಂದ ಕಂಚಿಕೇರಿ, ಮಂಜುನಾಥ ರಾಜನಹಳ್ಳಿ, ವಿಶ್ವನಾಥ ಮೈಲಾಳ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts