More

    ಐರ್ಲೆಂಡ್ ಪ್ರವಾಸಕ್ಕೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಸಾರಥ್ಯ?

    ನವದೆಹಲಿ: ಐಪಿಎಲ್‌ಗೆ ಪದಾರ್ಪಣೆ ಮಾಡಿದ ಆವೃತ್ತಿಯಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ೈನಲ್‌ಗೇರಿಸಿ ಬೀಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಕ್ಕೆ ಇದೀಗ ಟೀಮ್ ಇಂಡಿಯಾದ ಸಾರಥ್ಯವೂ ಒಲಿದು ಬರುತ್ತಿದೆ. ಭಾರತದ ಪ್ರಮುಖ ಆಟಗಾರರು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಸಮಯದಲ್ಲೇ ನಡೆಯಲಿರುವ ಐರ್ಲೆಂಡ್ ಪ್ರವಾಸದ 2 ಟಿ20 ಪಂದ್ಯಗಳ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.

    ಭಾರತ ತಂಡ ಜೂನ್ 26 ಮತ್ತು 28ರಂದು ಐರ್ಲೆಂಡ್‌ನಲ್ಲಿ 2 ಟಿ20 ಪಂದ್ಯಗಳನ್ನು ಆಡಲಿದೆ. ಇದಕ್ಕೆ ಭಾರತ 2ನೇ ಸ್ತರದ ತಂಡವನ್ನು ಕಳುಹಿಸಲಿದ್ದು, ಗುಜರಾತ್ ಪರ ಕಂಡ ಯಶಸ್ಸಿನ ಹಿನ್ನೆಲೆಯಲ್ಲಿ ಹಾರ್ದಿಕ್‌ಗೆ ಈ ಯುವ ತಂಡದ ಜವಾಬ್ದಾರಿಯನ್ನು ವಹಿಸಲು ಆಯ್ಕೆಗಾರರು ಒಲವು ತೋರಿದ್ದಾರೆ ಎನ್ನಲಾಗಿದೆ.

    ನಾಯಕತ್ವದ ಅನುಭವವಿಲ್ಲದೆ ಐಪಿಎಲ್‌ನಲ್ಲಿ ಮೊದಲ ಬಾರಿ ಜವಾಬ್ದಾರಿ ತೆಗೆದುಕೊಂಡ ಹಾರ್ದಿಕ್, ಗುಜರಾತ್‌ಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತಂದುಕೊಟ್ಟಿದ್ದಲ್ಲದೆ, ಮೊದಲ ಯತ್ನದಲ್ಲೇ ೈನಲ್‌ಗೂ ಮುನ್ನಡೆಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಯುವ ಆಟಗಾರರ ಹೊಸ ತಂಡವನ್ನು ಹಾರ್ದಿಕ್ ಮುನ್ನಡೆಸಿದ ರೀತಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

    ‘ನಾಯಕರಾಗಿ ಹಾರ್ದಿಕ್ ನಿರ್ವಹಣೆ ಪ್ರಭಾವಿತಗೊಳಿಸಿದೆ. ನಾಯಕರಾದ ಬಳಿಕ ಅವರು ಜವಾಬ್ದಾರಿಯುತ ಆಟಗಾರರೂ ಆಗಿರುವುದು ಹೆಚ್ಚು ವಿಶೇಷವೆನಿಸಿದೆ. ಐರ್ಲೆಂಡ್ ಪ್ರವಾಸಕ್ಕೆ ಖಂಡಿತವಾಗಿಯೂ ಅವರನ್ನು ನಾಯಕತ್ವಕ್ಕೆ ಪರಿಗಣಿಸಲಾಗುವುದು’ ಎಂದು ಆಯ್ಕೆ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

    ವಿರಾಟ್ ನಾಯಕತ್ವ ತೊರೆದ ಬಳಿಕ, ರೋಹಿತ್ ಶರ್ಮ ನಾಯಕರಾಗಿ ಬಡ್ತಿ ಪಡೆದಿದ್ದಾರೆ. ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರನ್ನು ಭವಿಷ್ಯದ ನಾಯಕರಾಗಿ ಪರಿಗಣಿಸಲಾಗಿದೆ. ಆದರೆ ಇವರೆಲ್ಲರೂ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ತಂಡದಲ್ಲಿರುವ ಕಾರಣ, ಐರ್ಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಹೊಸ ನಾಯಕನನ್ನು ನೇಮಿಸುವುದು ಅನಿವಾರ‌್ಯವಾಗಿದೆ.

    ಈ ಮುನ್ನ ಹಂಗಾಮಿ ನಾಯಕತ್ವಕ್ಕೆ ಅನುಭವಿ ಆರಂಭಿಕ ಶಿಖರ್ ಧವನ್ ಹೆಸರು ಕೇಳಿಬಂದಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟಿ20 ಸರಣಿಗೆ ಅವರು ತಂಡದಲ್ಲಿ ಸ್ಥಾನವನ್ನೇ ಪಡೆದಿಲ್ಲ. ಹೀಗಾಗಿ ಧವನ್ ನಾಯಕತ್ವ ರೇಸ್‌ನಿಂದಲೂ ಹೊರಬಿದ್ದಿದ್ದಾರೆ. ಇದರಿಂದ ಹಾರ್ದಿಕ್ ಹೆಸರು ಮುಂಚೂಣಿಗೆ ಬಂದಿದೆ.

    ಹೊಸ ಪಾತ್ರದೊಂದಿಗೆ ನೆಚ್ಚಿನ ಆರ್‌ಸಿಬಿಗೆ ವಾಪಸಾಗಲಿದ್ದಾರೆ ಎಬಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts