More

    ಐಪಿಎಲ್‌ನಿಂದ ಹರ್ಭಜನ್ ಸಿಂಗ್ ಔಟ್, ಚೆನ್ನೈ ಸೂಪರ್‌ಕಿಂಗ್ಸ್‌ಗೆ ಮತ್ತೊಂದು ಹೊಡೆತ

    ನವದೆಹಲಿ: ಚೆನ್ನೈ ಸೂಪರ್‌ಕಿಂಗ್ಸ್‌ಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಬೆನ್ನಲ್ಲೇ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ವೈಯಕ್ತಿಕ ಕಾರಣ ನೀಡಿ, ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ.

    ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಆಟಗಾರರು ಈಗಾಗಲೆ ದುಬೈನಲ್ಲಿದ್ದರೂ, 40 ವರ್ಷದ ಹರ್ಭಜನ್ ಸಿಂಗ್ ಮಾತ್ರ ತಾಯಿಯ ಆರೋಗ್ಯದ ಕಾರಣ ನೀಡಿ ತಂಡದೊಂದಿಗೆ ತೆರಳಿರಲಿಲ್ಲ. ಕಳೆದ ಬುಧವಾರ ಅವರು ತಂಡವನ್ನು ಕೂಡಿಕೊಳ್ಳಬೇಕಾಗಿತ್ತು. ಆದರೆ ಅವರು ದುಬೈಗೆ ಪ್ರಯಾಣ ಬೆಳೆಸದ ಕಾರಣ ಟೂರ್ನಿಯಿಂದ ಹಿಂದೆ ಸರಿಯುವ ನಿರೀಕ್ಷೆ ಹೆಚ್ಚಾಗಿತ್ತು.

    ಇದನ್ನೂ ಓದಿ: ಐಪಿಎಲ್‌ಗೆ ಬರಲು ವಿದೇಶಿ ಅಂಪೈರ್‌ಗಳ ಹಿಂದೇಟು, ಭಾರತೀಯರೇ ಆಧಾರ

    ಟೂರ್ನಿಯಿಂದ ಹಿಂದೆ ಸರಿಯುವ ಬಗ್ಗೆ ಹರ್ಭಜನ್ ಸಿಂಗ್ ಶುಕ್ರವಾರ ಸಿಎಸ್‌ಕೆ ತಂಡಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ. ‘ಈ ಕಠಿಣ ಸಮಯದಲ್ಲಿ ನಾನು ವೈಯಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಬಿಡುವು ಪಡೆದುಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಈ ಖಾಸಗಿತನವನ್ನು ಎಲ್ಲರೂ ಗೌರವಿಸುವರೆಂದು ನಂಬಿದ್ದೇನೆ’ ಎಂದು ಹರ್ಭಜನ್​ ಶುಕ್ರವಾರ ತಿಳಿಸಿದ್ದಾರೆ.

    ಈ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದ ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ ಒಟ್ಟಾರೆ 160 ಪಂದ್ಯಗಳನ್ನು ಆಡಿದ್ದು, 150 ವಿಕೆಟ್ ಕಬಳಿಸಿದ್ದಾರೆ. ಟೂರ್ನಿ ಈ ಬಾರಿ ಯುಎಇಯಲ್ಲಿ ನಡೆಯಲಿರುವ ಕಾರಣ ಅಲ್ಲಿನ ಸ್ಪಿನ್-ಸ್ನೇಹಿ ಪಿಚ್‌ನಲ್ಲಿ ಹರ್ಭಜನ್ ಸಿಂಗ್ ಸಿಎಸ್‌ಕೆ ತಂಡಕ್ಕೆ ಉಪಯುಕ್ತರೆನಿಸುತ್ತಿದ್ದರು. ಆದರೆ ಇದೀಗ ಅವರ ಗೈರಿನಲ್ಲಿ ಸಿಎಸ್‌ಕೆ ತಂಡ ಮತ್ತೋರ್ವ ಬದಲಿ ಸ್ಪಿನ್ನರ್‌ಗೆ ಹುಡುಕಾಟ ನಡೆಸಬೇಕಾಗಿದೆ.

    ಇಂದು ಇಂಗ್ಲೆಂಡ್-ಆಸ್ಟ್ರೇಲಿಯಾ ಮೊದಲ ಟಿ20 ಕಾದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts