More

    ಇಂದು ಇಂಗ್ಲೆಂಡ್-ಆಸ್ಟ್ರೇಲಿಯಾ ಮೊದಲ ಟಿ20 ಕಾದಾಟ

    ಸೌಥಾಂಪ್ಟನ್: ಹಾಲಿ ವರ್ಷದ ಟಿ20 ವಿಶ್ವಕಪ್ ಮುಂದೂಡಲ್ಪಟ್ಟಿದ್ದರೂ, ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣದ ಕೊರತೆಯಾಗುವುದಿಲ್ಲ. ಯಾಕೆಂದರೆ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಶುಕ್ರವಾರದಿಂದ ರೋಸ್‌ಬೌಲ್‌ನಲ್ಲಿ 3 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿ ನಡೆಯಲಿದೆ. ಆಸೀಸ್ ತಂಡಕ್ಕಿದು ಕರೊನಾ ಕಾಲದ ಮೊದಲ ಸರಣಿಯಾಗಿದೆ.

    ಈಗಾಗಲೆ ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ಸರಣಿಗಳಲ್ಲಿ ಮೇಲುಗೈ ಸಾಧಿಸಿರುವ ಇಂಗ್ಲೆಂಡ್‌ಗೆ ಅನುಭವಿ ಆಟಗಾರರಿಂದ ತುಂಬಿರುವ ಆಸ್ಟ್ರೇಲಿಯಾ ತಂಡದಿಂದ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಕರೊನಾ ಹಾವಳಿಯ ನಡುವೆ ಈ ಸರಣಿಯೂ ಪ್ರೇಕ್ಷಕರಿಲ್ಲದೆ ನಡೆಯಲಿದೆ.

    ಯುವ-ಅನುಭವಿ ಆಟಗಾರರಿಂದ ಕೂಡಿರುವ ಇಂಗ್ಲೆಂಡ್ ಟಿ20 ತಂಡ ಈಗಾಗಲೆ ಪಾಕ್ ವಿರುದ್ಧದ ಸರಣಿಯಲ್ಲಿ ಮಿಶ್ರಲ ಕಂಡಿದೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಜೇಸನ್ ರಾಯ್ ಅನುಪಸ್ಥಿತಿ ಆಂಗ್ಲರಿಗೆ ಹಿನ್ನಡೆಯಾಗಿದೆ.

    ಇದನ್ನೂ ಓದಿ: ಕರೊನಾ ಭಯವಿಲ್ಲ, ಮನೆಯಲ್ಲಿ ಪೂಜೆ ಇರುವ ಕಾರಣ ಪಿವಿ ಸಿಂಧು ಉಬೆರ್ ಕಪ್ ಆಡಲ್ಲ

    ನಾಯಕ ಆರನ್ ಫಿಂಚ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಅವರಂಥ ಸ್ಟಾರ್ ಆಟಗಾರರಿಂದ ಕೂಡಿರುವ ಆಸೀಸ್ ತಂಡದಲ್ಲಿ ಯುವ ಬ್ಯಾಟಿಂಗ್ ಸೆನ್ಸೇಶನ್ ಮಾರ್ನಸ್ ಲಬುಶೇನ್ ಕೂಡ ಗಮನ ಸೆಳೆಯುವ ಹಂಬಲದಲ್ಲಿದ್ದಾರೆ. ಮಾರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಆಡುತ್ತಿದ್ದ ವೇಳೆ ಕರೊನಾ ಭೀತಿಯಿಂದ ರದ್ದುಗೊಂಡ ಬಳಿಕ ಆಸೀಸ್‌ಗೆ ಇದು ಮೊದಲ ಸರಣಿ ಆಗಿದೆ.

    ಟಿ20 ಸರಣಿಯ ಬಳಿಕ ಏಕದಿನ ಸರಣಿಯೂ ನಡೆಯಲಿದ್ದು, ನಂತರ ಉಭಯ ತಂಡಗಳ ಆಟಗಾರರು ಐಪಿಎಲ್‌ಗಾಗಿ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.

    ತಂಡಗಳು:
    ಇಂಗ್ಲೆಂಡ್: ಇವೊಯಿನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೇರ್‌ಸ್ಟೋ, ಟಾಮ್ ಬ್ಯಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ‌್ರನ್, ಟಾಮ್ ಕರ‌್ರನ್, ಜೋಯಿ ಡೆನ್ಲಿ, ಡೇವಿಡ್ ಮಲಾನ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಮಾರ್ಕ್ ವುಡ್.
    ಆಸ್ಟ್ರೇಲಿಯಾ: ಆರನ್ ಫಿಂಚ್ (ನಾಯಕ), ಪ್ಯಾಟ್ ಕಮ್ಮಿನ್ಸ್, ಸೀನ್ ಅಬೋಟ್, ಆಶ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಜೋಶ್ ಹ್ಯಾಸಲ್‌ವುಡ್, ಮಾರ್ನಸ್ ಲಬುಶೇನ್, ನಾಥನ್ ಲ್ಯಾನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಫಿಲಿಪ್, ರಿಲೀ ಮೆರೆಡಿತ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ನಸ್ ಸ್ಟೋಯಿನಿಸ್, ಆಂಡ್ರೋ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಜಂಪಾ.

    ಇಂಗ್ಲೆಂಡ್-ಆಸೀಸ್ ಸರಣಿ ವೇಳಾಪಟ್ಟಿ
    ದಿನಾಂಕ: ಪಂದ್ಯ (ಸ್ಥಳ ): ಆರಂಭ
    ಸೆ. 4: ಮೊದಲ ಟಿ20 (ಸೌಥಾಂಪ್ಟನ್); ರಾತ್ರಿ 10.30
    ಸೆ. 6: 2ನೇ ಟಿ20 (ಸೌಥಾಂಪ್ಟನ್); ಸಂಜೆ 6.45
    ಸೆ. 8: 3ನೇ ಟಿ20 (ಸೌಥಾಂಪ್ಟನ್); ರಾತ್ರಿ 10.30
    ಸೆ. 11: ಮೊದಲ ಏಕದಿನ (ಮ್ಯಾಂಚೆಸ್ಟರ್); ಸಂಜೆ 5.30
    ಸೆ. 13: 2ನೇ ಏಕದಿನ (ಮ್ಯಾಂಚೆಸ್ಟರ್); ಸಂಜೆ 5.30
    ಸೆ. 16: 3ನೇ ಏಕದಿನ (ಮ್ಯಾಂಚೆಸ್ಟರ್); ಸಂಜೆ 5.30
    ನೇರಪ್ರಸಾರ: ಸೋನಿ ಸಿಕ್ಸ್
    (ಸಮಯ: ಭಾರತೀಯ ಕಾಲಮಾನ)

    VIDEO | ಚಾಹಲ್-ಧನಶ್ರೀ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಸಿಟ್ಟಾದ ಕ್ರಿಸ್ ಗೇಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts