ಮನೆಯ ವಿದ್ಯುತ್ ಬಿಲ್ ನೋಡಿ ಹರ್ಭಜನ್ ಸಿಂಗ್‌ಗೆ ಶಾಕ್!

blank

ಮುಂಬೈ: ಲಾಕ್‌ಡೌನ್ ಸಮಯದಲ್ಲಿ ಬಹುತೇಕ ಎಲ್ಲರೂ ಮನೆಯಲ್ಲೇ ಲಾಕ್ ಆಗಿದ್ದ ಕಾರಣ ಸಹಜವಾಗಿಯೇ ಎನ್ನುವಂತೆ ಹಿಂದಿಗಿಂತ ಹೆಚ್ಚಿನ ದರದ ವಿದ್ಯುತ್ ಬಿಲ್‌ಗಳು ಬಂದಿವೆ. ಈ ಪೈಕಿ ಕೆಲಮನೆಯ ವಿದ್ಯುತ್ ಬಿಲ್‌ಗಳೂ ಶಾಕ್ ನೀಡಲಾರಂಭಿಸಿವೆ. ಟೀಮ್ ಇಂಡಿಯಾದ ಹಿರಿಯ ಆ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಮುಂಬೈನ ಮನೆಯ ವಿದ್ಯುತ್ ಬಿಲ್ ಕೂಡ ಇದೇ ರೀತಿ ಶಾಕ್ ನೀಡಿದೆ.

ವಿದ್ಯುತ್ ಬಿಲ್‌ನ ಅಕ್ಷರ ಸಂದೇಶವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಹರ್ಭಜನ್ ಸಿಂಗ್, ‘ಇಡೀ ಬೀದಿಯ ವಿದ್ಯುತ್ ಬಿಲ್ ಅನ್ನು ನನಗೆ ನೀಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಪರ ಆಡಬೇಕಾಗಿರುವ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್‌ನ ಪ್ರಕಾರ ಅವರಿಗೆ ಜುಲೈ ತಿಂಗಳಲ್ಲಿ 33,900 ರೂ. ವಿದ್ಯುತ್ ಬಿಲ್ ಬಂದಿದೆ. ಇದಕ್ಕಾಗಿ ಅವರು ತಮ್ಮ ಮನೆಗೆ ವಿದ್ಯುತ್ ಸರಬರಾಜು ಮಾಡುವ ಅದಾನಿ ಎಲೆಕ್ಟ್ರಿಸಿಟಿ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ಸರಣಿ ಜಯದ ಆಸೆಗೆ ಮಳೆ ಅಡಚಣೆ

ತಮಗೆ ಈ ಹಿಂದೆ ಬರುತ್ತಿದ್ದ ವಿದ್ಯುತ್ ಬಿಲ್‌ಗಳಿಗಿಂತ ಇದು 7 ಪಟ್ಟು ಅಧಿಕವಾಗಿದೆ ಎಂದೂ ಹರ್ಭಜನ್ ಸಿಂಗ್ ದೂರಿದ್ದಾರೆ. ಅಲ್ಲದೆ ಆಗಸ್ಟ್ 17ರೊಳಗೆ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚನೆ ಬಂದಿದೆ ಎಂದು ತಿಳಿಸಿದ್ದಾರೆ. ಹರ್ಭಜನ್ ಮೂಲತಃ ಪಂಜಾಬ್‌ನ ಜಲಂಧರ್‌ನವರಾದರೂ, ಲಾಕ್‌ಡೌನ್ ಸಮಯದಿಂದ ಮುಂಬೈನ ಮನೆಯಲ್ಲಿ ಪತ್ನಿ ಗೀತಾ ಬಾಸ್ರಾ ಮತ್ತು ಪುತ್ರಿ ಹಿನಾಯ ಜತೆ ವಾಸಿಸುತ್ತಿದ್ದಾರೆ.

ಎಲ್ಲಿಸ್ ಪೆರ‌್ರಿ ವಿಚ್ಛೇದನಕ್ಕೆ ಮುರಳಿ ವಿಜಯ್ ಕಾರಣವಂತೆ!

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…