More

    ಐಪಿಎಲ್ ತಂಡವೊಂದಕ್ಕೆ ಕೋಚ್ ಅಥವಾ ಮೆಂಟರ್ ಆಗಲಿದ್ದಾರೆ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್?

    ನವದೆಹಲಿ: ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಮುಂಬರುವ ಐಪಿಎಲ್‌ನಲ್ಲಿ ತಂಡವೊಂದರ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. 14ನೇ ಆವೃತ್ತಿಯ ಲೀಗ್‌ನಲ್ಲಿ ಕೆಕೆಆರ್ ಪರ ಆಡಿದ್ದ 41 ವರ್ಷದ ಹರ್ಭಜನ್ ಸಿಂಗ್, ಭಾರತದಲ್ಲಿ ನಡೆದ ಮೊದಲ ಚರಣದಲ್ಲಿ ಕೆಲ ಪಂದ್ಯಗಳನ್ನಾಡಿದರೆ, ಯುಎಇಯಲ್ಲಿ ನಡೆದ ಎರಡನೇ ಚರಣದಲ್ಲಿ ಸಂಪೂರ್ಣ ಹೊರಗುಳಿದಿದ್ದರು. ‘ಸಹಾಯಕ ಸಿಬ್ಬಂದಿಯಾಗಿ ಯಾವ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ’ ಎಂದು ಮುಂದಿನ ವಾರ ಹರ್ಭಜನ್ ಸಿಂಗ್ ಅವರೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

    ಎಲ್ಲ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದು, ಬಳಿಕ ಯಾವುದಾರೂ ಒಂದು ತಂಡಕ್ಕೆ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡವೊಂದರ ಮೆಂಟರ್, ಸಲಹೆಗಾರ ಅಥವಾ ಸಲಹಾ ಸಮಿತಿಯ ಸದಸ್ಯ, ಇಲ್ಲವೇ ಮುಖ್ಯಕೋಚ್ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಕಬಳಿಸಿದ್ದು, 236 ಏಕದಿನ ಪಂದ್ಯಗಳಿಂದ 269 ವಿಕೆಟ್, 28 ಟಿ20 ಪಂದ್ಯಗಳಿಂದ 25 ವಿಕೆಟ್ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts