More

    ಆಡಳಿತ ಪಕ್ಷದ ಶಾಸಕನ ಕಿರುಕುಳಕ್ಕೆ ವೈದ್ಯ ಆತ್ಮಹತ್ಯೆ, ಶಾಸಕನ ಕಿರುಕುಳಕ್ಕೆ ಕಾರಣ ಏನು ಗೊತ್ತಾ?

    ನವದೆಹಲಿ: ಜಲಮಂಡಳಿಗೆ ನೀರಿನ ಟ್ಯಾಂಕರ್​ಗಳನ್ನು ಬಾಡಿಗೆ ಕೊಟ್ಟಿದ್ದಕ್ಕಾಗಿ ಆಡಳಿತಾರೂಢ ಪಕ್ಷದ ಶಾಸಕ ಮತ್ತಾತನ ಸಹಚರರು ಕಿರುಕುಳ ನೀಡಿದ್ದರಿಂದ ವ್ಯದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ದೆಹಲಿಯ ವೈದ್ಯ ರಾಜೇಂದ್ರ ಸಿಂಗ್​ (52) ಆತ್ಮಹತ್ಯೆ ಮಾಡಿಕೊಂಡವರು. ಆಡಳಿತಾರೂಢ ಆಮ್​ ಆದ್ಮಿ ಪಕ್ಷದ ಶಾಸಕ ಮತ್ತು ಆತನ ಸಹಚರನ ಕಿರುಕುಳದಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಎರಡು ಪುಟದ ಡೆತ್​ ನೋಟ್​ ಬರೆದಿಟ್ಟಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ದೆಹಲಿಯ ನೇಬ್​ ಸರಾಯ್​ ಪ್ರದೇಶದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಇವರು ನೀರಿನ ಟ್ಯಾಂಕರ್​ ಸರ್ವಿಸ್​ ವ್ಯವಹಾರವನ್ನೂ ಹೊಂದಿದ್ದರು. ದೆಹಲಿ ಜಲಬೋರ್ಡ್​ಗೆ ಇವರು ತಮ್ಮ ಟ್ಯಾಂಕರ್​ಗಳನ್ನು ಬಾಡಿಗೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಮಗೆ ಹಣ ಕೊಡಬೇಕು. ಇಲ್ಲವಾದಲ್ಲಿ ದೆಹಲಿ ಜಲನಿಗಮಕ್ಕೆ ಕೊಟ್ಟಿರುವ ಟ್ಯಾಂಕರ್​ಗಳ ಬಾಡಿಗೆ ಕರಾರನ್ನು ರದ್ದುಗೊಳಿಸುವುದಾಗಿ ಆಮ್​ ಆದ್ಮಿ ಪಕ್ಷದ ದೇವ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್​ ಜರ್ವಾಲ್​ ಮತ್ತು ಆತನ ಸಹಚರ ಕಪಿಲ್​ ನಗರ್​ ಕಿರುಕುಳ ಕೊಡುತ್ತಿದ್ದರು. ಅಲ್ಲದೆ, ಜೀವ ಬೆದರಿಕೆ ಕರೆಗಳು ಕೂಡ ಬರುತ್ತಿದ್ದವು ಎಂದು ತಾವು ಬರೆದಿಟ್ಟಿರುವ ಡೆತ್​ ನೋಟ್​ನಲ್ಲಿ ರಾಜೇಂದ್ರ ಸಿಂಗ್​ ವಿವರಿಸಿದ್ದಾರೆ.

    ಈ ಕಿರುಕುಳ ಸಹಿಸಲಾಗದೆ ತಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಾಸಕ ಜರ್ವಾಲ್​ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
    2018ರಲ್ಲಿ ಕೂಡ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಜರ್ವಾಲ್​ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದರು. ಈ ಬಗ್ಗೆ ಕೂಡ ಅವರ ವಿರುದ್ಧ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.

    ಅಮೆರಿಕದಲ್ಲಿ ಕೋವಿಡ್​ 19ನಿಂದ ಆಗಸ್ಟ್​ವರೆಗೆ ಎಷ್ಟು ಜನ ಸಾಯಬಹುದು ಗೊತ್ತೇ? ಇಟಲಿ, ಸ್ಪೇನ್​, ಬ್ರಿಟನ್​ ಸ್ಥಿತಿಗತಿಯೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts