More

    ಸಂಚಾರಿ ಪೊಲೀಸ್ ಠಾಣೆಗೆ ಪ್ರಸ್ತಾವನೆ; ವಿಜಯನಗರ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾಹಿತಿ

    ಹರಪನಹಳ್ಳಿ: ಹೆಚ್ಚುತ್ತಿರುವ ವಾಹಗಳ ದಟ್ಟಣೆಯಿಂದಾಗಿ ಅಡಚಣೆ ಆಗುತ್ತಿದ್ದು, ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿಜಯನಗರ ಎಸ್ಪಿ ಬಿ.ಎಲ್.ಶ್ರೀಹರಿಬಾಬು ತಿಳಿಸಿದರು.

    ಡಿವೈಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ. ಇದಕ್ಕಾಗಿ ಫುಟ್‌ಪಾತ್ ತೆರವು, ಟ್ರಾಪಿಕ್‌ಸಿಗ್ನಲ್ ಆಳವಡಿಕೆ ಮತ್ತಿತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾದ್ಯಂತ ತಾಲೂಕು ಕೇಂದ್ರಗಳಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಅಳವಡಿಸಲು ಚಿಂತನೆ ನಡೆದಿದೆ ಎಂದರು.

    ವಿಧಾಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣ ರೌಡಿಶೀಟರ್, ಗ್ಯಾಂಬ್ಲಿಂಗ್ ಮುಂತಾದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರನ್ನು ಮುಂದಿನ ತಿಂಗಳ ಅಂತ್ಯದೊಳಗೆ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ವಿವಿಧ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ದೇವರ ದರ್ಶನಕ್ಕೆ ಅನುಕೂಲ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಇದೇ ತಿಂಗಳಲ್ಲಿ ಅಪರಾಧ ತಡೆ ಮಾಸಾಚರಣೆ ಹಮ್ಮಿಕೊಳ್ಳಲಾಗುವುದು. ಟ್ರಾಕ್ಟರ್, ಆಟೋ ಮತ್ತಿತರ ವಾಹನಗಳಿಂದ ಕರ್ಕಶ ಶಬ್ದ ಹೆಚ್ಚಾಗಿ ಕೇಳಿ ಬರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಅಂತಹ ವಾಹನಗಳನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

    ಡಿವೈಎಸ್‌ಪಿ ಹಾಲಮೂರ್ತಿರಾವ್, ವೃತ್ತ ನಿರೀಕ್ಷರಾದ ನಾಗರಾಜ ಎಂ.ಕಮ್ಮಾರ್, ಸುಧೀರ್ ಕುಮಾರ್ ಎಂ.ಬೆಂಕಿ, ಪಿಎಸ್‌ಐಗಳಾದ ಪ್ರಕಾಶ್, ಗುರುರಾಜ, ಪ್ರಶಾಂತ್, ನಾಗರಾಜ, ನಾಗರತ್ನಮ್ಮ, ಶ್ರೀನಿವಾಸ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts