More

    ಒತ್ತಡದ ಜೀವನದಲ್ಲಿ ಆರೋಗ್ಯದತ್ತ ಗಮನವಿರಲಿ; ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸಲಹೆ

    ಅಕ್ಯುಪ್ರೆಷರ್, ಮ್ಯಾಗ್ನೇಟಿಕ್, ವೈಬ್ರೇಷನ್ ಉಚಿತ ಶಿಬಿರ

    ಹರಪನಹಳ್ಳಿ: ಯಾಂತ್ರಿಕೃತ ಒತ್ತಡದ ಜೀವನದಲ್ಲಿ ಮನುಷ್ಯ ಸಿಲುಕಿದ್ದು, ರೋಗ ಬರುವುದಕ್ಕಿಂತ ಮುನ್ನವೇ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ತೆಗ್ಗಿನಮಠದ ಚಂದ್ರಶೇಖರಸ್ವಾಮಿ ಧರ್ಮ ಭವನದಲ್ಲಿ ಭಾನುವಾರ ನ್ಯಾಚುರಲ್ ಹೆಲ್ತ್ ಕ್ಯಾಂಪ್, ಡಾ.ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ ಹಾಗೂ ತೆಗ್ಗಿನಮಠದ ಎಸ್‌ಸಿಎಸ್ ಔಷಧ ಮಹಾವಿದ್ಯಾಲಯ ಫಾರ್ಮಸಿ ಪ್ರಾಕ್ಟಿಸ್ ಆಶ್ರಯದಲ್ಲಿ ಅಕ್ಯುಪ್ರೆಷರ್, ಮ್ಯಾಗ್ನೇಟಿಕ್ ಮತ್ತು ವೈಬ್ರೇಷನ್ ಚಿಕಿತ್ಸೆಯ ಉಚಿತ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ರೋಗಗಳಿಗೆ ಥೆರಪಿ ಹೇಳಿ ಮಾಡಿಸಿದ ಚಿಕಿತ್ಸೆಯಾಗಿದೆ. ಒಳಗಾಯಗಳಾದಾಗ ನರಗಳಿಗೆ ತೊಂದರೆಯಾದಾಗ ಥೆರಪಿ ಚಿಕಿತ್ಸೆ ತುಂಬ ಉಪಕಾರಿಯಾಗಿದೆ. ಈ ಶಿಬಿರವು ಇಂದಿನಿಂದ ಐದು ದಿನಗಳ ಕಾಲ ಚಿಕಿತ್ಸೆ ನಡೆಯಲಿದ್ದು, 60ವರ್ಷದವರೂ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

    ಡಾ.ರಾಖೇಶ ಮಾತನಾಡಿ, ದೈಹಿಕ ತೊಂದರೆ ಬರುವುದಕ್ಕಿಂತ ಮುನ್ನ ಪ್ರಾರಂಭದ ಮೊದಲು ಅಕ್ಯುಪ್ರೆಷರ್ ನ್ಯೊರೋಥೆರಪಿ ಮಾಡಿಸಿಕೊಂಡರೆ ಆರೋಗ್ಯ ಸುಧಾರಣೆ ಆಗುತ್ತದೆ ಎಂದರು. ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದರು.

    ತೆಗ್ಗಿನಮಠ ಆಡಳಿತಾಧಿಕಾರಿ ಟಿ.ಎಂ.ಚೆಂದ್ರಶೇಖರ ಮಾತನಾಡಿ, ಶ್ರೀಮಠದಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ವರ್ಷದಲ್ಲಿ 3 ಬಾರಿ ಮಾಡಲಾಗುತ್ತದೆ, ಆರೋಗ್ಯ ಸುಧಾರಣೆಗಾಗಿ ಋಷಿ ಮುನಿಗಳ ಕಾಲದಿಂದಲೂ ಆರೋಗ್ಯದತ್ತ ಗಮನ ನೀಡಲಾಗಿದೆ. ಯೋಗ ಪ್ರಾಣಾಯಾಮ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts