More

    ಅಂಗವಿಕಲರು ಮುಖ್ಯವಾಹಿನಿಗೆ ಬರಲಿ; ಶಾಸಕ ಜಿ.ಕರುಣಾಕರಡ್ಡಿ ಸಲಹೆ

    ಕಾರ್ಯಕಾರಿಣಿ ಸಮಿತಿಗಳ ಬಲವರ್ಧನೆ ಅಭಿಯಾನ

    ಹರಪನಹಳ್ಳಿ: ಅಂವಿಕಲನರು ಸರ್ಕಾರದ ಸೌಲತ್ತುಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ಮಾಸಾಶನ ಮತ್ತಿತರ ಸೌಲಭ್ಯಗಳನ್ನು ಒದಗಿಸಿದೆ ಎಂದು ಶಾಸಕ ಜಿ.ಕರುಣಾಕರಡ್ಡಿ ಹೇಳಿದರು.

    ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ರಾಜ್ಯ ವಿಕಲಚೇತನರ ತಾಲೂಕು ಒಕ್ಕೂಟ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಂಗವಿಕಲರ ಕಾರ್ಯಕಾರಿಣಿ ಸಮಿತಿಗಳ ಬಲವರ್ಧನೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಗವಿಕಲತೆ ಶಾಪವಲ್ಲ. ಆತ್ಮವಿಶ್ವಾಸದಿಂದ ವೈಕಲ್ಯವನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

    ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ನಾವು ಮಾಡಿದ ಕೆಲಸಗಳು ಶಾಶ್ವತ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಗವಿಕಲರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅನೇಕ ಸೌಲಭ್ಯ ಒದಗಿಸಿದ್ದಾರೆ ಎಂದರು.

    ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅರ್ಹಅಂಗವಿಕಲರಿಗೆ ಡಿಎಂಎಫ್ ನಿಧಿಯಲ್ಲಿ 150 ಮೋಟಾರ್ ಬೈಕ್ ವಿತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಶೀಘ್ರ ವಿತರಿಸಲಾಗುವುದು. ಅಂಗವಿಕಲರು ಕುಟುಂಬಕ್ಕೆ ಹೊರೆಯಾಗದಂತೆ ಎಲ್ಲ ರಂಗಗಳಲ್ಲೂ ತೊಡಗಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

    ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಕರಿಬಸಜ್ಜ ಮಾತನಾಡಿದರು. ತಾಪಂ ಇಒ ಕೆ.ಪ್ರಕಾಶ್, ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಕೃಷ್ಣಪ್ಪ ರಾಜ್ಯ ಸಂಚಾಲಕ ಜಿ.ದೇವರಾಜ್, ಸಂಯೋಜಕ ಟೇಕರಾಜ್, ರಾಜ್ಯ ನಿರ್ದೇಶಕ ಆರ್.ಧನರಾಜ್, ಪುರಸಭೆ ಸದಸ್ಯರಾದ ತಾರಾ ಹನುಮಂತಪ್ಪ ಎಂ.ಕೆ.ಜಾವಿದ್, ಗೌಳಿ ವಿನಯ್ ಬಿಜೆಪಿ ಮುಖಂಡರಾದ ಬಾಗಳಿ ಕೊಟ್ರೆಶಪ್ಪ, ಕೆಂಗಳ್ಳಿ ಪ್ರಕಾಶ್, ಎಂ.ಮಲ್ಲೇಶ್, ವಕೀಲ ರೇವಣಸಿದ್ದಪ್ಪ, ಶಿವಾನಂದ, ಪ್ರಮುಖರಾದ ರುದ್ರೆಗೌಡ, ರವಿಕುಮಾರ್ ನಾಯಕ್, ಬಿ.ಮಂಜುನಾಥ್, ಎನ್.ಲಕ್ಷ್ಮಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts