More

    ಹಾರಕನಾಳು ಗ್ರಾಪಂ ಚುನಾವಣಾ ಫಲಿತಾಂಶ ಪ್ರಕಟ

    ಹರಪನಹಳ್ಳಿ: ತಾಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದಿದ್ದು, ಪಟ್ಟಣದ ತಾಲೂಕು ಮಿನಿವಿಧಾನಸೌಧ ಸಭಾಂಗಣದ ಮೂರು ಕೊಠಡಿಗಳಲ್ಲಿ ಮಂಗಳವಾರ ಸಂಜೆವರೆಗೆ ಮತ ಎಣಿಕೆ ಕಾರ್ಯ ನಡೆಯಿತು.

    ಪಂಚಾಯಿತಿಯ 23 ಸ್ಥಾನಗಳಲ್ಲಿ ಇಬ್ಬರು ಅವಿರೋಧ ಆಯ್ಕೆಯಾಗಿದ್ದು, 21 ಸ್ಥಾನಗಳಿಗೆ ಫೆ.25ರಂದು ಚುನಾವಣೆ ನಡೆದಿತ್ತು. ಈಶಾಪುರದ 1 ಸ್ಥಾನಕ್ಕೆ ಪೂಜಾರ ಮಂಜುನಾಥ 5 ಮತಗಳ ಅಂತರದಿಂದ ಗೆದ್ದಿದ್ದಾರೆ. ಹಾರಕನಾಳು ವಾರ್ಡ್ 1ರಲ್ಲಿ ಬಸವರಾಜಪ್ಪ ಹೊನ್ನಪ್ಪ 280 ಮತ ಪಡೆದು ಜಯ ಗಳಿಸಿದರೆ, ರೇಣುಕವ್ವ ಹಾಗೂ ಬಡಿಗೇರ ರತ್ನಮ್ಮ 262 ಸಮ ಮತಗಳನ್ನು ಪಡೆದಿದ್ದರಿಂದ ಚುನಾವಣಾಧಿಕಾರಿಗಳು ಲಾಟರಿ ಪ್ರಕ್ರಿಯೆ ಮೂಲಕ ಬಡಿಗೇರ ರತ್ನಮ್ಮ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

    ಹಾರಕನಾಳು ವಾರ್ಡ್ 2 ಮೂರು ಸ್ಥಾನಗಳಿಗೆ ಮೀಸಲಿದ್ದು, ಇದರಲ್ಲಿ ಸಾಮಾನ್ಯ ಮಹಿಳೆ ಶಾಂತಮ್ಮ ಕರಿಯಪ್ಪ ಹಾವನೂರು 318, ಸಾಮಾನ್ಯದಲ್ಲಿ ಮಹಾಂತೇಶ್ 343 ಮತ ಪಡೆದು ಜಯ ಸಾಧಿಸಿದರೆ, ಪ.ಜಾತಿ ಮಹಿಳೆ ಕೆ.ದುರುಗಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಕನ್ನನಾಯಕನಹಳ್ಳಿ 2 ಸ್ಥಾನಗಳ ಪೈಕಿ ಪ.ಜಾತಿ ಮಹಿಳಾ ಅಭ್ಯರ್ಥಿ ಭಾಗ್ಯ ಅಶೋಕ ಅವಿರೋಧ ಆಯ್ಕೆಯಾಗಿದ್ದರು. ಉಳಿದ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ದುಗ್ಯನಾಯ್ಕ 319 ಮತ ಪಡೆದು ಜಯ ಸಾಧಿಸಿದ್ದಾರೆ. ಹುಲಿಕಟ್ಟಿಯ 1ರಲ್ಲಿ ಮೂರು ಸ್ಥಾನಗಳಿಗೆ 11 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಪ.ಜಾತಿ ವರ್ಗದಲ್ಲಿ ಅಕ್ಷತಾ 316 ಮತ, ಸಾಮಾನ್ಯ ಮಹಿಳಾ ವರ್ಗದಲ್ಲಿ ಬಿ.ಬಿ. ಫಾತಿಮಾ 467, ಸಾಮಾನ್ಯ ಮಹಿಳಾ ವರ್ಗದಲ್ಲಿ ರಾಭಿಯಾಬೀ 417 ಮತಗಳನ್ನು ಪಡೆದು ವಿಜಯಶಾಲಿಯಗಿದ್ದಾರೆ. ಹುಲಿಕಟ್ಟಿ 6ರಲ್ಲಿ 4 ಸ್ಥಾನಗಳಿಗೆ 9ಜನ ಸ್ಪರ್ಧಿಸಿದ್ದು, ಸಾಮಾನ್ಯ ಮಹಿಳೆ ಕವಿತಾ 529, ಎಸ್‌ಸಿ ಮಹಿಳೆ 368, ಪ.ಪಂಗಡ ಸಾಮಾನ್ಯ ಟಿ.ಹಾಲೇಶಪ್ಪ 597, ಸಾಮಾನ್ಯದಲ್ಲಿ ಜಿ.ದೇವಕ್ಕ 493 ಮತ ಪಡೆದು ಗೆಲುವು ಸಾಧಿಸಿದ್ದಾರೆ.

    ಚನ್ನಹಳ್ಳಿಯ 4 ಸ್ಥಾನಗಳಿಗೆ 9 ಮಂದಿ ಸ್ಪರ್ಧಿಸಿದ್ದು, ಇದರಲ್ಲಿ ಎಸ್‌ಸಿ ಮಹಿಳೆ ಧನಿಬಾಯಿ 834 ಮತ, ಎಸ್.ಸಿ.ಮಹಿಳೆ ಸಿ.ದೇವಿ ಬಾಯಿ 560, ಎಸ್‌ಸಿ ಸಾಮಾನ್ಯ ಪಿ.ಶಿವನಾಯ್ಕ 700, ಎಸ್.ಸಿ. ಸಾಮಾನ್ಯ ಶಾರದಾಬಾಯಿ 488 ಮತ ಪಡೆದು ವಿಜಯಿಯಾಗಿದ್ದಾರೆ. ಮೇಗಳತಾಂಡಾದ 4 ಸ್ಥಾನಗಳಿಗೆ 10 ಮಂದಿ ಸ್ಪರ್ಧಿಸಿದ್ದು, ಇದರಲ್ಲಿ ಎಸ್‌ಸಿ ಮಹಿಳೆ ಸುಶೀಲಾಬಾಯಿ 491, ಎಸ್‌ಸಿ ಸಾಮಾನ್ಯದಲ್ಲಿ ಪಾರಿಬಾಯಿ 415, ಸಾಮಾನ್ಯ ಮಹಿಳೆ ಎಸ್.ಚಂದ್ರಿಬಾಯಿ 403, ಸಾಮಾನ್ಯ ಎಲ್.ಶ್ರುತಿ 355 ಮತಗಳನ್ನು ಪಡೆದು ಗೆದಿದ್ದಾರೆ.

    ವಿಜೇತ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಣೆ ಮಾಡಿಕೊಳ್ಳುತ್ತಾ ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕಿದರು. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಮತ ಎಣಿಕೆ ಕೊಠಡಿಗೆ ಭೇಟಿ ನೀಡಿದ್ದರು. ತಹಸೀಲ್ದಾರ್ ಶಿವಕುಮಾರ ಬಿರಾದಾರ, ಚುನಾವಣಾಧಿಕಾರಿಗಳಾದ ರವಿಕುಮಾರ, ಅರವಿಂದ, ಪಿಎಸ್‌ಐ ಶಾಂತಮೂರ್ತಿ, ಕಂದಾಯ ಇಲಾಖೆ ಅಧಿಕಾರಿಗಳಿಂದ ಮತ ಎಣಿಕೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts