More

    ಅರಸೀಕೆರೆ ಗ್ರಾಮದಲ್ಲಿ ಕರೊನಾ ವಾರಿಯರ್ಸ್‌ಗೆ ಹೂಮಳೆ

    ಅರಸೀಕೆರೆ: ಹರಪನಹಳ್ಳಿ ತಾಲೂಕು ಅರಸೀಕೆರೆ ಗ್ರಾಮದಲ್ಲಿ ಶುಕ್ರವಾರ ಕರೊನಾ ಸೇನಾನಿಗಳಿಗೆ ಕೋಲ ಶಾಂತೇಶ್ವರ ಮಠ, ಗ್ರಾಮಸ್ಥರಿಂದ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಮಾಧ್ಯಮದವರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಬೆಸ್ಕಾಂ ಸಿಬ್ಬಂದಿಯನ್ನು ಗ್ರಾಮದ ಆಸ್ಪತ್ರೆ ಆವರಣದಿಂದ ಶ್ರೀ ಕೋಲ ಶಾಂತೇಶ್ವರ ಹೊರಗಿನ ಮಠದವರೆಗೆ ಮೆರವಣಿಗೆ ಮೂಲಕ ಕರೆತಂದು ರಸ್ತೆಯ ಎರಡೂ ಬದಿ ಹೂವಿನ ಮಳೆ ಸುರಿಸಿ ಅಭಿನಂದಿಸಿದಿದರು.

    ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕರೊನಾದಿಂದ ಎಲ್ಲ ಕ್ಷೇತ್ರಗಳಿಗೂ ಪೆಟ್ಟು ಬಿದ್ದಿದೆ. ದಾಳಿ ಮಾಡಿದರೂ ಲೆಕ್ಕಿಸದೇ ಸೇವೆ ಮಾಡುತ್ತಿದ್ದಾರೆ. ತಮ್ಮ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

    ದೇಶ ಕಾಯುವ ಸೈನಿಕರ ರೀತಿ ಸರ್ಕಾರಿ ನೌಕರರು, ವೈದ್ಯರು, ಜವಾಬ್ದಾರಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.

    ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಜಗಳೂರು ತಹಸೀಲ್ದಾರ್ ಹುಲ್ಮನೆ ತಿಮ್ಮಣ್ಣ, ಉಪ ತಹಸೀಲ್ದಾರ್ ಫಾತಿಮಾ, ಪಿಎಸ್‌ಐ ಕಿರಣ್‌ಕುಮಾರ್, ಮಹೇಶಣ್ಣ, ರಾಜಪ್ಪ ವೈ.ಡಿ.ಅಣ್ಣಪ್ಪ, ಗುರು ಶಾಂತನಗೌಡ್ರು, ಶಾಂತ ಪಾಟೀಲ್, ವೈದ್ಯಾಧಿಕಾರಿಗಳಾದ ಇದಾಯಿತ್, ಭುವನೇಶ್ವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts