More

    ಕಲೆಯನ್ನು ಕಲಿಸಿ, ಉಳಿಸಿ ಬೆಳೆಸಬೇಕು


    ರಪನಹಳ್ಳಿ: ಉನ್ನತ ಶಿಕ್ಷಣ ನೀಡುವುದರ ಜತೆಗೆ ಕಲಾವಿದರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕಲೆಯನ್ನು ಕಲಿಸಿ, ಉಳಿಸಿ ಬೆಳೆಸಿ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅಂಚಿನಮನಿ ರಮೇಶ್ ಹೇಳಿದರು.

    ತಾಲೂಕಿನ ಅರಸನಾಳು ಗ್ರಾಮದಲ್ಲಿ ಭಾನುವಾರ ಕುಂಚೂರು ಗ್ರಾಪಂ ಮಟ್ಟದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಗ್ರಾಮ ಪಂಚಾಯಿತಿ ಘಟಕ ಆಯ್ಕೆ ಹಾಗೂ ಕಲಾವಿದರಿಗೆ ಗುರುತಿನ ಚೀಟಿ ವಿತರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕರು, ಮಕ್ಕಳು ಟಿವಿ ಹಾಗೂ ಮೊಬೈಲ್ ದಾಸ್ಯಕ್ಕೆ ಅಂಟಿಕೊಂಡಿದ್ದು ಇದರಿಂದ ಹೊರ ಬರಲು ತಾವುಗಳು ನಾಟಕ, ಸಂಗೀತ, ಜನಪದ ಕಲೆ, ಸಾಹಿತ್ಯವನ್ನು ಅವರಿಗೆ ಕಲಿಸಿಕೊಡಬೇಕಾಗಿದೆ ಎಂದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮಕ್ಕೆ ಅವಕಾಶ ಕೊಡಬೇಕು. 50ವರ್ಷ ವಯಸ್ಸಿನವರಿಗೆ ಪಿಂಚಣಿ, ರಿಯಾಯಿತಿ ಬಸ್ ಪಾಸ್ ಸೇರಿ ಇತರ ಬೇಡಿಕೆಗಳನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

    ಜಿಲ್ಲಾ ಕಾರ್ಯದರ್ಶಿ ನಾಗರಾಜ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಕರಿಬಸಪ್ಪ ಪಿ, ಹೂವಿನ ಹಡಗಲಿ ತಾಲೂಕು ಅಧ್ಯಕ್ಷ ಬನ್ನೆಪ್ಪ, ಹರಪನಹಳ್ಳಿ ತಾಲೂಕು ಗೌರವಾದ್ಯಕ್ಷೆ ಸೋಗಿ ನಾಗರತ್ನಮ್ಮ, ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಡಿ.ಉಮಾಶಂಕರ್, ಉಪಾದ್ಯಕ್ಷ ಭೀಮಪ್ಪ ನಿಚ್ಚವ್ವನಹಳ್ಳಿ, ಮತ್ತೂರು ಕೋಟೆಪ್ಪ, ವೇಷಗಾರ ಮಾರುತಿ, ಗ್ರಾಪಂ ಉಪಾಧ್ಯಕ್ಷ ಸುಬಾನ್ ಸಾಬ್ ಮಾತನಾಡಿದರು.
    ಹರಪನಹಳ್ಳಿ, ಅರಸನಾಳು ಗ್ರಾಮ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts