More

    ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಿ

    ಕೆಂಭಾವಿ: ಈ ಬಾರಿಯ ದೀಪಾವಳಿ ಹಬ್ಬವನ್ನು ಸಾರ್ವಜನಿಕರು ಪರಿಸರ ಸ್ನೇಹಿಯಾಗಿ ಆಚರಿಸುವುದರೊಂದಿಗೆ ಸ್ವಚ್ಛತೆಯ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಮುಜಾಹಿದ್ ಮುಲ್ಲಾ ಹೇಳಿದರು.

    ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ದೀಪಾವಳಿ ಹಬ್ಬದಲ್ಲಿ ಮಣ್ಣಿನ ದೀಪಗಳು, ಮರು ಬಳಕೆ ವಸ್ತುಗಳಿಂದ ತಯಾರಿಸಿದ ಆಕಾಶ ಬುಟ್ಟಿ ಹಾಗೂ ನೈಸರ್ಗಿಕ ರಂಗೋಲಿಗಳಿಂದ ಅಲಂಕರಿಸಿ ಆಚರಿಸುವುದರಿಂದ ಪರಿಸರ ರಕ್ಷಣೆಗೆ ದಾರಿಯಾಗುತ್ತದೆ ಎಂದರು.

    ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಬೇರೆ ರೀತಿಯ ಪಟಾಕಿ ಹಚ್ಚಿ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಮತ್ತು ತಾಜ್ಯಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವುದರೊಂದಿಗೆ ದೀಪದ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಹೇಳಿದರು.

    ಮರೆಪ್ಪ, ಭೀಮರಾಯ ದೊಡ್ಡಮನಿ, ಸಿದ್ರಾಮಯ್ಯ ಇಂಡಿ, ರಶೀದ್, ಪರಶುರಾಮ, ಶಾಂತಪ್ಪ, ಶರಣಪ್ಪ ಅನೇಕರಿದ್ದರು. ವಾಹನದ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts