More

    ಜನರಲ್ಲಿ ಜಾಗೃತಿ ಅಗತ್ಯ; ಟಿಎಚ್‌ಒ ಆನಂದ ಗೋಟೂರು ಕಿವಿಮಾತು

    ಹನುಮಸಾಗರ: ತಿಳಿವಳಿಕೆ ಕೊರತೆಯಿಂದ ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಟಿಎಚ್‌ಒ ಆನಂದ ಗೋಟೂರು ಹೇಳಿದರು.

    ಪಟ್ಟಣದ ಕರಿಸಿದ್ದೇಶ್ವರ ಮಂಗಳ ಭವನದಲ್ಲಿ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಏಡ್ಸ್ ಇರುವವರ ಜತೆ ಕುಳಿತುಕೊಳ್ಳುವುದರಿಂದ, ಊಟ ಮಾಡುವುದರಿಂದ ರೋಗ ಬರುವುದಿಲ್ಲ. ಶೇ.87 ಪ್ರಮಾಣ ಅಸುರಕ್ಷತೆ ಲೈಂಗಿಕ ಕ್ರಿಯೆಯಿಂದ ಏಡ್ಸ್ ಬರುತ್ತದೆ. ಉಳಿದಂತೆ ಏಡ್ಸ್ ಇರುವವರ ರಕ್ತ ಪಡೆದುಕೊಳ್ಳುವುದರಿಂದ, ಹೆರಿಗೆ ಸಮಯದಲ್ಲಿ ತಾಯಿಯಿಂದ ಮಗುವಿಗೆ ಮತ್ತು ಏಡ್ಸ್ ಇರುವವರಿಗೆ ಮಾಡಿದ ಸೂಜಿಯನ್ನು ಬೇರೆಯವರಿಗೆ ಮಾಡಿದರೆ ಬರುತ್ತದೆ ಎಂದರು.

    ಎಚ್‌ಐವಿ ಮನುಷ್ಯನ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಗ್ಗುವಂತೆ ಮಾಡುವುದರಿಂದ ಪೀಡಿತರಿಗೆ ವಿವಿಧ ಕಾಯಿಲೆಗಳು ಬರುತ್ತವೆ. ಏಡ್ಸ್ ರೋಗ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಮಕ್ಕಳು ಏಡ್ಸ್ ರೋಗ ನಿಯಂತ್ರಣದ ಬಗ್ಗೆ ಸರಿಯಾಗಿ ಓದಿಕೊಂಡು ನಿಮ್ಮ ಕುಟುಂಬ ಹಾಗೂ ಊರಿನವರಿಗೆ ಆ ಬಗ್ಗೆ ತಿಳಿ ಹೇಳಬೇಕು ಎಂದು ಟಿಎಚ್‌ಒ ತಿಳಿಸಿದರು.

    ಸಮಾಲೋಚಕ ಚನ್ನಬಸಪ್ಪ ಮಾತನಾಡಿ, ತಾಲೂಕಿನಲ್ಲಿ 24 ಜನರಲ್ಲಿ ಏಡ್ಸ್ ರೋಗ ಪತ್ತೆಯಾಗಿದ್ದು, ಹನುಮಸಾಗರ ಭಾಗದಲ್ಲಿ 16 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದರು. ವೈದ್ಯಾಧಿಕಾರಿ ವಿನಾಯಕ ಪಟ್ಟಣಶೆಟ್ಟಿ, ಪಿಡಿಒ ನಿಂಗಪ್ಪ ಮೂಲಿಮನಿ, ಡಾ.ಚಂದ್ರಶೇಖರ ಪಟ್ಟಣಶೆಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ಮಂಜುನಾಥ ಜಾಲಿಹಾಳ, ಬೀರಪ್ಪ ವಡಗಲಿ, ಜಯರಾಜ್ ಪುಠಾಣಿ, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿದ್ದರು.

    ಕಾರ್ಯಕ್ರಮಕ್ಕಿಂತ ಮೊದಲು ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ಏಡ್ಸ್ ಕುರಿತು ಜಾಗೃತಿ ಮೂಡಿಸಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥ ನಡೆಸಲಾಯಿತು. ಮುಖ್ಯ ಶಿಕ್ಷಕ ಎಚ್.ಎಚ್.ಇಲಕಲ್ ಜಾಥಾಗೆ ಚಾಲನೆ ನೀಡಿದರು. ತಾಲೂಕಾವೈದ್ಯಾಧಿಕಾರಿ ಆನಂದ ಗೊಟೂರ್, ವೈದ್ಯಾಧಿಕಾರಿ ವಿನಾಯಕ ಪಟ್ಟಣಶೆಟ್ಟಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts