More

    ಸಾಮೂಹಿಕ ವಿವಾಹ ಬಡವರಿಗೆ ವರದಾನ

    ಹನುಮಸಾಗರ: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ ಎಂದು ಕುದರಿಮೋತಿ ಶ್ರೀ ವಿಜಯಮಹಾಂತ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀ ಕರಿಸಿದ್ದೇಶ್ವರ ಜಾತ್ರೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು. ಎಲ್ಲ ಆಶ್ರಮದಲ್ಲಿ ಗ್ರಹಸ್ಥಾಶ್ರಮ ಶ್ರೇಷ್ಠವಾಗಿದೆ. ಅಂತಹ ಆಶ್ರಮದಲ್ಲಿ ಜನ್ಮ ಪಡೆದ ಮನುಕುಲ ನಿಜಕ್ಕೂ ಶ್ರೇಷ್ಠವಾದದ್ದು. ಇಷ್ಟು ದಿನ ಒಂಟಿ ಜೀವನ ನಡೆಸಿದ್ದಿರಿ, ಇನ್ನೂ ಮುಂದೆ ಜಂಟಿಯಾಗಿ ಬಾಳಿ. ಸತಿಪತಿಗಳಾಗಿ ಒಬ್ಬರನೊಬ್ಬರು ಸರಿಯಾಗಿ ಅರ್ಥಮಾಡಿಕೊಂಡು ಸಂಸಾರ ನಡೆಸಿ. ಸುಖ ಜೀವನಕ್ಕೆ ಬಸವಣ್ಣನವರ ವಿಚಾರ ಧಾರೆಗಳನ್ನು ಅನುಸರಿಸಿ ಎಂದ ಅವರು, ಪಾಲಕರು ಮಕ್ಕಳಿಗೆ ಆಸ್ತಿ ಮಾಡದೆ ಉತ್ತಮ ಶಿಕ್ಷಣ ಕೊಟ್ಟು ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ದುಶ್ಚಟದಿಂದ ದೂರವಿದ್ದು, ಆರೋಗ್ಯಕರ-ಗೌರವಯುತ ಜೀವನ ನಡೆಸುವಂತೆ ಸಲಹೆ ನೀಡಿದರು.

    ತೇರದಾಳದ ಪ್ರವಚನಕಾರ ಶಿವಕುಮಾರ ದೇವರು, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಜಿಪಂ ಮಾಜಿ ಸದಸ್ಯ ಭೀಮಣ್ಣ ಅಗಸಿಮುಂದಿನ, ಮುಖಂಡರಾದ ಕರಿಸಿದ್ದಪ್ಪ ಕುಷ್ಟಗಿ, ಅಂದಾನಯ್ಯ ಸೊಪ್ಪಿಮಠ, ಮಹಾಂತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ವಿಶ್ವನಾಥ ಕನ್ನೂರು, ಮಲ್ಲಯ್ಯ ಕೋಮಾರಿ, ರಾಚಪ್ಪ ಚಿನಿವಾಲರ, ಬಸವರಾಜ ಚಿನಿವಾಲರ, ನಿಂಗಪ್ಪ ಮೋಟಗಿ, ಶ್ರೀಶೈಲ ಮೋಟಗಿ, ಚಂದಪ್ಪ ಅಗಸಿಮುಂದಿನ, ಮಹಾಂತಯ್ಯ ಕೋಮಾರಿ, ಬಸಪ್ಪ ದೋಟಿಹಾಳ, ಈರಣ್ಣ ಹುನಗುಂಡಿ, ಶರಣಪ್ಪ ಹುಬ್ಬಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts