More

    ಹನುಮಸಾಗರದಲ್ಲಿ ರಂಗಿನ ಹೋಳಿ ಆಚರಣೆ

    ಹನುಮಸಾಗರ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೋಳಿ ಹಬ್ಬದ ನಿಮಿತ್ತ ಯುವಕರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

    ಕೆಲ ಗ್ರಾಮಗಳಲ್ಲಿ ರಸ್ತೆ ಮೇಲೆ ನಿಂತು ವಾಹನ ಸವಾರಿಂದ ಹಣ ಎತ್ತುವ ಮೂಲಕ ಬಣ್ಣದಾಟದಲ್ಲಿ ನಿರತರಾಗಿರುವುದು ಹಾಗೂ ಚರ್ಮಕ್ಕೆ ಹಾನಿಯುಂಟು ಮಾಡುವ ಬಣ್ಣಗಳ ಲೇಪನ ಕಂಡುಬಂದಿತು. ಮಕ್ಕಳು, ಯುವಕರು ಆಯಿಲ್ ಹಾಗೂ ಕೋಳಿ ಮೊಟ್ಟೆಗಳನ್ನು ಬಣ್ಣದಲ್ಲಿ ಸೇರಿಸಿ ಹೋಳಿ ಆಡುವ ಮೂಲಕ ಸಂಭ್ರಮಿಸಿದರು.

    ಗೊರೇಬಿಹಾಳದಲ್ಲಿ ಮಧ್ಯರಾತ್ರಿ ಕಾಮದಹನ ಮಾಡಲಾಯಿತು. ಸಮೀಪದ ವಾರಿಕಲ್, ಚಿಕ್ಕಗೊಣ್ಣಾಗರ, ತುಗ್ಗಲಡೋಣಿ, ಗೊರೇಬಿಹಾಳ, ತುಮರಿಕೊಪ್ಪ, ಬಾದಿಮನಾಳ ಇತರ ಗ್ರಾಮಗಳಲ್ಲಿ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಹೋಳಿ ಆಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts