More

    ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸಿ

    ಹನುಮಸಾಗರ: ತಾಯಂದಿರು ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಪ್ರವಚನಕಾರ ಶಿವಶಂಕರ ಮೆದಿಕೇರಿ ಹೇಳಿದರು.

    ಸಮೀಪದ ಚಳಗೇರಾ ಗ್ರಾಮದಲ್ಲಿ ಮಂಗಳವಾರ ರೇಣುಕಾದೇವಿ ದೇವಸ್ಥಾನದಲ್ಲಿ ಪುರಾಣದ ನಿಮಿತ್ತ ಹಮ್ಮಿಕೊಂಡ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಚಿಕ್ಕವರಿದ್ದಾಗ ಮಕ್ಕಳಿಗೆ ಕಲಿಸಿದ ಆಚಾರ, ವಿಚಾರಗಳು ಅವರ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಆರಂಭದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ, ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕು. ತಾಯಂದಿರು ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಸರಿಯಾಗಿ ತಿಳಿದುಕೊಂಡು, ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಾತೃಸ್ವರೂಪಕ್ಕಿಂತ ಮಿಗಿಲಾದ ಸ್ಥಾನ ಇನ್ನೊಂದಿಲ್ಲ. ಭೂಮಿಗೆ ಇರುವ ಸಹನಾ ಶಕ್ತಿ ಮಹಿಳೆಯರಲ್ಲಿ ಇರುವುದರಿಂದ ಅದಕ್ಕೆ ನಿಮ್ಮನ್ನು ಭೂತಾಯಿಗೆ ಹೋಲಿಕೆ ಮಾಡುತ್ತಾರೆ. ತಾಯಿ ನೀಡಿದ ಸಂಸ್ಕಾರದಿಂದ ಮಗುವಿನ ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.

    ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಹೋಮ, ಹವನ, ಮಹಿಳೆಯರಿಂದ ಲಲಿತಾಸ್ರನಾಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

    ಅರ್ಚಕ ಮುದಕಪ್ಪ ಹೂಗಾರ, ಮುಖಂಡರಾದ ಮುತ್ತಣ್ಣ ಹಿರೇಮನಿ, ಪಂಚಾಕ್ಷರಯ್ಯ ಮಸ್ಕಿಮಠ, ಬಸವರಾಜ ಭಾಗ್ಯದ, ಶರಣಪ್ಪ ಮಲಕಾಪೂರ, ಕಳಕಪ್ಪ ಕುಸರಗಿ, ಚಂದ್ರು ಯರಗೆರಿ, ಮಾಹಾತೇಶ ತಳವಾರ, ಯಲ್ಲಪ್ಪ ಅಗಸಿಮುಂದಿನ, ನಾಗರಾಜ ಗೊಡೆಳ್ಳಿ, ಸುನಂದಾ ಮೆದಿಕೇರಿ, ಅಕ್ಕಮಹಾದೇವಿ ಹಿರೇಮಠ, ಸುನಿತಾ ಕೋಮಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts