More

    ತರಬೇತಿ ಪಡೆದು ಸ್ವಂತ ಉದ್ಯೋಗ ಮಾಡಿ

    ಹನುಮಸಾಗರ: ಮಹಿಳೆಯರ ಸ್ವಾವಲಂಬನೆಗಾಗಿ ಸರ್ಕಾರ ಸ್ವಂತ ಉದ್ಯೋಗಕ್ಕೆ ಬೇಕಾದ ವಿವಿಧ ತರಬೇತಿಗಳನ್ನು ನೀಡುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಧರ್ಮಸ್ಥಳ ಶ್ರೀ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶೇಖರ ನಾಯಕ್ ಹೇಳಿದರು.

    ಪಟ್ಟಣದ ಕರಿಸಿದ್ದೇಶ್ವರ ಮಂಗಲ ಭವನದಲ್ಲಿ ಮಂಗಳವಾರ ಗ್ರಾಮಾಭಿವೃದ್ಧಿ ಯೋಜನೆ, ದುರ್ಗಾ ಶಕ್ತಿ ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ಹಮ್ಮಿಕೊಂಡಿದ್ದ ಸಂವಾದ ಹಾಗೂ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸ್ವಂತ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಜನರಲ್ಲಿ ಶಾಂತಿ, ನೆಮ್ಮದಿ ಭಾವ ಮೂಡಿಸುವ ಉದ್ದೇಶದಿಂದ ಸಂಸ್ಥೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಉಡಿ ತುಂಬುವ ಕಾರ್ಯಕ್ರಮವೂ ಈ ಪೈಕಿ ಒಂದಾಗಿದೆ ಎಂದರು.

    ಪ್ರಾದೇಶಿಕ ಸಮನ್ವಯಾಧಿಕಾರಿ ಶ್ರೀದೇವಿ ಮಾತನಾಡಿ, ಮಹಿಳೆಯರು ಜಾಗೃತರಾದರೆ ಕುಟುಂಬ ಮತ್ತು ಸಮಾಜ ಜಾಗೃತವಾಗುತ್ತದೆ. ದುರ್ಬಲ ವರ್ಗದ ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕು. ಮಹಿಳೆಯರಿಗೆ ಸಾಲ ನೀಡುವುದು ಸಂಸ್ಥೆಯ ಉದ್ದೇಶವಲ್ಲ. ಸ್ವಾವಲಂಬಿಯಾಗಿ ಯಾವ ರೀತಿಯಾಗಿ ಬದುಕಬೇಕೆಂಬುದನ್ನು ತೋರಿಸುವುದಾಗಿದೆ ಎಂದರು.

    ಒಕ್ಕೂಟದ ಅಧ್ಯಕ್ಷೆ ನಾಗರತ್ನ ಯಾಳಗಿ, ಜ್ಞಾನ ವಿಕಾಸ ಸಂಸ್ಥೆ ಅಧ್ಯಕ್ಷೆ ಬಸಮ್ಮ ಹಿರೇಮಠ, ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಶಿವಲೀಲಾ ಬೆಳ್ಳಿ ಹಿರೇಮಠ, ಕಲ್ಯಾಣಮ್ಮ ಹಿರೇಮಠ, ಸುನೀತಾ ಮಹಾಂತಯ್ಯ ಕೋಮಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts