More

    22ರಂದು ಕುಷ್ಟಗಿ ತಹಸಿಲ್ ಕಚೇರಿ ಮುಂದೆ ಧರಣಿ: ನಮ್ಮ ಭೂಮಿ ನಮ್ಮ ತೋಟ ಯೋಜನೆ ಫಲಾನುಭವಿಗಳ ನಿರ್ಧಾರ

    ಹನುಮಸಾಗರ: ಸಮೀಪದ ನಿಲೋಗಲ್ ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಭೂಮಿ ನಮ್ಮ ತೋಟ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ಜಮೀನು ಮತ್ತು ಅದರ ಹಕ್ಕುಪತ್ರ ನೀಡುವಂತೆ ಕುಷ್ಟಗಿ ತಹಸೀಲ್ದಾರ್ ಎಂ.ಸಿದ್ದೇಶಗೆ ಗುರುವಾರ ಮನವಿ ಸಲ್ಲಿಸಿದರು.

    ರೈತ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ನೀಲಪ್ಪ ಎನ್.ಕಡಿಯವರ ಮಾತನಾಡಿ, ಕಳೆದ 17 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಫಲಾನುಭವಿಗಳು ಗ್ರಾಪಂ ಹಾಗೂ ವಿವಿಧ ಇಲಾಖೆ ಕಚೇರಿಗೆ ಅಲೆದರು ಪ್ರಯೋಜನವಾಗಿಲ್ಲ. ಯೋಜನೆಗೆ ಆಯ್ಕೆಯಾದ 107 ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಇದಕ್ಕಾಗಿ ಮೇ 9, 10ರಂದು ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ದೋರಣೆ ಖಂಡಿ ಮೇ 22 ರಂದು ಗ್ರಾಮದಿಂದ ತಹಸಿಲ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ, ಫಲಾನುಭವಿಗಳಾದ ಶೇಖಪ್ಪ ವಡ್ಡರ್, ಪರಸಪ್ಪ ಕೊತಬಾಳ, ಈರಪ್ಪ ಮೇಟಿ, ಕಳಕಪ್ಪ ಹಡಪದ, ಮೌನೇಶ ಬಡಿಗೇರ, ಮಂಜುನಾಥ ವಡಗೇರಿ, ಮಲ್ಲಪ್ಪ ಕೊತಬಾಳ, ಶಂಕ್ರಪ್ಪ ಮೇಟಿ, ಮುದೇಸಾಬ್ ಕಮತಗಿ, ಪರಸಪ್ಪ ಕೊತಬಾಳ, ಕಪಿಲೆಪ್ಪ ಕಬ್ಬರಗಿ, ಗಂಗಾಧರ, ಶರಣಪ್ಪ ವಡ್ಡರ, ಹುಗಪ್ಪ ವಡ್ಡರ, ಮಹಿಬೂಬಸಾಬ್ ಬಾವಿಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts