More

    ರಣಜಿಯಲ್ಲೂ ರಾಜಕೀಯ: ಆಂಧ್ರತಂಡಕ್ಕೆ ಇನ್ನು ಮುಂದೆ ಆಡೋದಿಲ್ಲ ಎಂದ ಹನುಮ ವಿಹಾರಿ !

    ವಿಜಯವಾಡ: ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ವಿರುದ್ಧ ಟೀಂ ಇಂಡಿಯಾದ ಆಟಗಾರ ಹನುಮ ವಿಹಾರಿ ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶ ತಂಡದ ಪರ ಆಡಲ್ಲ ಎಂದು ಆಕ್ರೋಶ ಸಿಡಿದೆದ್ದಿದ್ದಾರೆ.

    ಇದನ್ನೂ ಓದಿ:ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ರಾಜಮೌಳಿ ತನ್ನನ್ನೇ ಆಯ್ಕೆ ಮಾಡಲು ಕಾರಣ ತಿಳಿಸಿದ ಮಿಲ್ಕಿ ಬ್ಯೂಟಿ!

    ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಲವು ಸಂಗತಿಗಳನ್ನು ಹನುಮ ವಿಹಾರಿ ತಿಳಿಸಿದ್ದಾರೆ. ರಣಜಿ ಟೂರ್ನಿ ವೇಳೆ ನಡೆದ ಒಂದು ಸಣ್ಣ ಗಲಾಟೆಯಿಂದ ಈ ಸಮಸ್ಯೆ ಎದುರಾಗಿದೆ. ಆಂಧ್ರ ಪ್ರದೇಶದ ಪ್ರಭಾವಿ ರಾಜಕಾರಣಿಯ ಮಗನೊಂದಿಗಿನ ಗಲಾಟೆ ಕ್ರಮೇಣ ರಾಜಕೀಯ ತಿರುವು ಪಡೆದು ಹನುಮ ವಿಹಾರಿ ಆಂಧ್ರ ಪ್ರದೇಶ ಕ್ರಿಕೆಟ್ ತಂಡದ ನಾಯಕತ್ವ ತೊರೆಯುವಂತೆ ಮಾಡಿದೆ.

    ಹಿರಿಯ ಆಟಗಾರನ ಬೆನ್ನಿಗೆ ನಿಲ್ಲಬೇಕಿದ್ದ ಆಂಧ್ರ ಪ್ರದೇಶ ಕ್ರಿಕೆಟ್ ಮಂಡಳಿ ಕೂಡ ಪ್ರಭಾವಿ ರಾಜಕಾರಣಿಯ ಒತ್ತಡಕ್ಕೆ ಮಣಿದಿರುವುದು ಹನುಮ ವಿಹಾರಿ ಆಕ್ರೋಶಕ್ಕೆ ಕಾರಣವಾಗಿದೆ. ಬಂಗಾಳ ವಿರುದ್ಧದ ಮೊದಲ ಪಂದ್ಯಕ್ಕೆ ನಾನು ಆಂಧ್ರ ತಂಡಕ್ಕೆ ನಾಯಕನಾಗಿದ್ದೆ. ಈ ಪಂದ್ಯದಲ್ಲಿ ನಾನು 17ನೇ ಆಟಗಾರನ ವಿರುದ್ಧ ಜೋರಾಗಿ ಕೂಗಿದ್ದೆ. ಆದರೆ, ಆ ಆಟಗಾರ ನನ್ನ ವಿರುದ್ಧ ರಾಜಕೀಯ ಪ್ರಭಾವಿ ವ್ಯಕ್ತಿಯಾಗಿರುವ ಅವರ ತಂದೆಗೆ ದೂರು ನೀಡಿದ್ದ. ನನ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರ ತಂದೆ ಆಂಧ್ರ ಅಸೋಸಿಯೇಷನ್‌ಗೆ ಹೇಳಿದ್ದರು.

    ರಾಜಕೀಯದ ಪ್ರಭಾವಿ ವ್ಯಕ್ತಿಯ ಮಗನೊಬ್ಬನ ವಿಚಾರಕ್ಕೆ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ನನ್ನನ್ನು ನಾಯಕತ್ವದಿಂದ ಕೆಳಗಿಳಿಸಿದ್ದಾರೆ. ತಮ್ಮ ತಂಡದ ಆಟಗಾರರು ತನ್ನನ್ನು ಬೆಂಬಲಿಸಿದ ಪತ್ರವನ್ನೂ ಕೂಡ ವಿಹಾರಿ ಹಂಚಿಕೊಂಡಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಎಂದಿಗೂ ಆಂಧ್ರ ತಂಡದ ಪರವಾಗಿ ಆಡುವುದೇ ಇಲ್ಲ ಎಂದು ತೀರ್ಮಾನ ಮಾಡಿದ್ದಾರೆ.

    ಹನುಮವಿಹಾರಿ ಪೋಸ್ಟ್ ನಲ್ಲಿ ಏನಿದೆ?
    ಮಧ್ಯಪ್ರದೇಶ ವಿರುದ್ಧ ತಂಡ ಸೋತ ಬಳಿಕ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಸುದೀರ್ಘ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಹನುಮ ವಿಹಾರಿ, ಪಶ್ಚಿಮ ಬಂಗಾಳದ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ತಂಡದ ನಾಯಕನಾಗಿದ್ದೆ. ಆ ಪಂದ್ಯದ ಸಮಯದಲ್ಲಿ ನಾನು ತಂಡದ 17 ನೇ ಆಟಗಾರನಿಗೆ ಸ್ವಲ್ಪ ಗದರಿದೆ. ಆ ಆಟಗಾರ ನನ್ನ ಬಗ್ಗೆ ಅವನ ತಂದೆಯ ಬಳಿ ದೂರು ನೀಡಿದ. ಪ್ರತಿಯಾಗಿ ಅವನ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಂಧ್ರ ಕ್ರಿಕೆಟ್​ ಮಂಡಳಿಗೆ ಸೂಚನೆ ನೀಡಿದರು. ಬಂಗಾಳದ ವಿರುದ್ಧ ನಾವು 410 ರನ್‌ ಕಲೆಹಾಕಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಸಿದರೂ, ಯಾವುದೇ ತಪ್ಪು ಮಾಡದ ನನಗೆ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಲಾಯಿತು ಎಂದು ಹನುಮ ವಿಹಾರಿ ಆರೋಒ ಮಾಡಿದ್ದಾರೆ.

     

    ಬಾಹುಬಲಿಯಲ್ಲಿ ಅವಂತಿಕಾ ಪಾತ್ರಕ್ಕೆ ರಾಜಮೌಳಿ ತನ್ನನ್ನೇ ಆಯ್ಕೆ ಮಾಡಲು ಕಾರಣ ತಿಳಿಸಿದ ಮಿಲ್ಕಿ ಬ್ಯೂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts