More

  ಕಳವಾಗಿದ್ದ ವಸ್ತುಗಳು ವಾರಸುದಾರರಿಗೆ ಹಸ್ತಾಂತರ

  ಕೋಲಾರ: ಜಿಲ್ಲಾ ಪೊಲೀಸ್​ ವ್ಯಾಪ್ತಿಯ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ ಸಂಬಂಧಿಸಿದ್ದ ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಪತ್ತೆಯಾಗಿರುವ ಮಾಲನ್ನು ವಾರಸುದಾರರಿಗೆ ಹಿಂದುರಿಗಿಸಲಾಗಿದೆ ಎಂದು ಎಸ್ಪಿ ಎಂ.ನಾರಾಯಣ ಹೇಳಿದರು.

  ನಗರದ ಎಸ್ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಪೊಲೀಸ್​ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಳ್ಳತನ ಪ್ರಕರಣಗಳ ಕಳ್ಳರ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು. ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಅಧಿಕಾರಿಗಳು ಬೇರೆ ರಾಜ್ಯಗಳಿಗೆ ತೆರಳಿ ಕಳ್ಳರನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
  ಮಾಲೂರು ಠಾಣೆ ವ್ಯಾಪ್ತಿಯಲ್ಲಿ 2023ರ ಡಿ.30ರಂದು ಅಂತರಾಜ್ಯ ಕಳ್ಳರು 6 ಲಕ್ಷ ರೂ. ನಗದು ಕಳವು ಮಾಡಿ ತಲೆಮರೆಸಿಕೊಂಡಿದ್ದರು. ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಂಡರು, ಯಾವುದೇ ರೀತಿ ಸುಳಿವು ದೊರೆಯದಂತೆ ಕಳ್ಳರು ಎಚ್ಚರ ವಹಿಸಿದ್ದರು. ರಾಜಸ್ತಾನ ನಿವಾಸಿಗಳಾದ ಅಜತ್​ಕುಮಾರ್​, ಜಮ್ಮು ರಾಜ್ಯದ ಮಹಮದ್​ ರಂಜಾನ್​, ಮಧ್ಯಪ್ರದೇಶದ ಪ್ರವಿಣ್​ ಸ್ವಾನಾಡಿಯಾ ಸ್ಥಳಿಯರ ಸಹಾಯವಿಲ್ಲದೆ ಕಳವು ಮಾಡಿದ್ದರು. ಅವರ ಸ್ವ ಸ್ಥಳಕ್ಕೆ ಪೊಲೀಸರು ತೆರಳಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದರು.
  ಮಾಲೂರು ಸಮೀಪದ ಫ್ಲಿಪ್​ಕಾರ್ಟ್​ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲಾಜಿ ಎಂಬಾತ 15 ಲಕ್ಷ ರೂ. ಬೆಲೆಬಾಳುವ 15 ಐೋನ್​ಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಮತ್ತೊಂದು ಪ್ರಕರಣದಲ್ಲಿ ಮಾಲೂರು ತಾಲೂಕಿನ ಶಿವಾರಪಟ್ಟಣ ನಿವಾಸಿ ವೃದ್ಧೆ ಮುನಿರತ್ನ ಅವರ ಮನೆಯ ಮೇಲೆ ನಾಲ್ಕು ಮಂದಿ ದಾಳಿ ಮಾಡಿ 70 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಕಾರ್ಯಾಚರಣೆ ನಡೆಸಿ ಹರೀಶ್​, ತಿಪ್ಪೇಸ್ವಾಮಿ, ಶಿವರಾಜ್​ ಹಾಗೂ ಅಶೋಕ್​ನನ್ನು ಬಂಧಿಸಲಾಗಿದೆ ಎಂದರು.
  ಕೆಜಿಎಫ್​ ನಗರದ ಸುಮತಿ ನಗರ ನಿವಾಸಿ ಪ್ರದಿಪ್​ ಫ್ಲಿಪ್​ಕಾರ್ಟ್​ ಕಂಪನಿಯಲ್ಲಿ ಮೇಲಧಿಕಾರಿಗಳ ಕಣ್ಣು ತಪ್ಪಿಸಿ 14 ಆ್ಯಪಲ್​ೋನ್​ ಹಾಗೂ 15 ಸಾವಿರ ರೂ. 2024ರ ಜ.17ರಂದು ದೋಚಿ ಏನು ಗೊತ್ತಿಲ್ಲದ ಹಾಗೆ ಇದ್ದ. ಈ ಕುರಿತು ಪ್ರಕರಣ ದಾಖಲಾಗಿ ಪ್ರದಿಪ್​ನನ್ನು ವಿಚಾರಣೆ ಮಾಡಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದರು.
  ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿ:
  ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳು ಸಂಭವಿಸಿದ್ದು, ಆ ಪೈಕಿ ತಾಲೂಕಿನ ವೀರಾಪುರ ಸಮೀಪದ ಹಿಂದುಸ್ಥಾನ್​ ಮಿಲ್​ ಮತ್ತು ಇಟ್ಟಿಗೆ ಫ್ಯಾಕ್ಟರಿ ಆವರಣದ ಮನೆಯ ಮೇಲೆ ದಾಳಿ ಮಾಡಿರುವ ಮುಸುಕುಧಾರಿಗಳು 125 ಗ್ರಾಂ ಆಭರಣ, 4 ಲಕ್ಷ ರೂ ನಗದು ದೋಚಿ ತಲೆಮರೆಸಿಕೊಂಡಿದ್ದರು. ಮಹಿಳೆ ಮುನಿಯಪ್ಪ ನೀಡಿದ್ದ ದೂರನ್ನು ಆಧರಿಸಿ ಸುಲ್ತಾನ್​ ವಿರುದ್ಧ ದೋಷಾರೋಪಟ್ಟಿ ಸಲ್ಲಿಸಲಾಗಿದೆ. ಇನ್ನೋರ್ವ ಆರೋಪಿ ಆಸ್​ೀ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
  ಜ.19ರಂದು ತಾಲೂಕಿನ ನಾಯಕರಹಳ್ಳಿ ಶ್ರೀವೇಣು ಗೋಪಾಲಸ್ವಾಮಿ ದೇವಾಲಯದ ಬಾಗಿಲು ಮುರಿದು ದೇವರ ಅಲಂಕಾರದ ಬೆಳ್ಳಿಯ ಮೂರು ಕಿರೀಟ ಹಾಗೂ 2 ಚಿನ್ನದ ತಾಳಿ ಬೊಟ್ಟುಗಳನ್ನು ಕಳವು ಮಾಡಿದ್ದ ಅರಳಕುಂಟೆ ನಿವಾಸಿ ಸೈಯದ್​ ನಯಾಜ್​, ವಶಪಡಿಸಿಕೊಂಡು ದೇವಾಲಯಕ್ಕೆ ಹಿಂದುರುಗಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿರುವ ತನಿಖಾ ತಂಡಕ್ಕೆ ಎಸ್ಪಿ ಎಂ.ನಾರಾಯಣ ತಲಾ 5 ಸಾವಿರ ರೂ. ಬಹುಮಾನ ಘೋಷಿಸಿದರು. ಹೆಚ್ಚುವರಿ ವರಿಷ್ಠಾಧಿಕಾರಿಗಳಾದ ಜಗದೀಶ್​, ರವಿಶಂಕರ್​ ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts