19 ಲಕ್ಷ ರೂ. ಮೌಲ್ಯದ ಹ್ಯಾಂಡ್​ ಬ್ಯಾಗ್…! ಅಧಿಕಾರಿಗಳು ನಿರ್ದಯವಾಗಿ ಧ್ವಂಸಗೊಳಿಸಿದ್ದೇಕೆ?

ಸಿಡ್ನಿ: 19 ಲಕ್ಷ ರೂ. ನೀಡಿ ಖರೀದಿಸಿದ್ದ ಹ್ಯಾಂಡ್​ ಬ್ಯಾಗ್​ ಅದು. ಆದರೆ, ಆಸ್ಟ್ರೇಲಿಯಾದ ಕಸ್ಟಮ್ಸ್​ ಅಧಿಕಾರಿಗಳು ಅದನ್ನು ನಿರ್ದಯವಾಗಿ ಧ್ವಂಸಗೊಳಿಸಿದ್ದಾರೆ. ಇತರರಿಗೂ ಇದು ಪಾಠವಾಗಬೇಕೆಂದು ಹೇಳಿದ್ದಾರೆ.

ಫ್ರಾನ್ಸ್​ ಸೇಂಟ್​ ಲಾರೆಂಟ್​ ಬೊಟಿಕ್​ನಿಂದ 19 ಲಕ್ಷ ರೂ. ನೀಡಿ ಐಷಾರಾಮಿ ಬ್ಯಾಗ್​ ಖರೀದಿಸಲಾಗಿತ್ತು. ಪರ್ತ್​ನ ಗಡಿಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ಈ ಬ್ಯಾಗ್​ ವಶಪಡಿಸಿಕೊಂಡಿದ್ದಾರೆ. ಇದರಲ್ಲೇನೂ ಅಕ್ರಮ ನಡೆದಿದೆ ಎಂಬ ಶಂಕೆ ಅವರಿಗೆ ಉಂಟಾಗಿತ್ತು. ಜತೆಗೆ, ಅವನತಿಯ ಅಂಚಿನಲ್ಲಿರುವ ಪ್ರಾಣಿಯಿಂದ ತಯಾರಿಸಿದ ಉತ್ಪನ್ನವಾಗಿರಬೇಕು ಎಂಬ ಅನುಮಾನ ಅವರನ್ನು ಕಾಡಿತ್ತು.

ಇದನ್ನೂ ಓದಿ; VIDEO: ಗಾಂಜಾ ಬೆಳೆಯೋದಲ್ಲ…., ಇಸ್ರೇಲ್​ನಲ್ಲಿ ಸುರಿಯಿತು ‘ಗಾಂಜಾ ಮಳೆ’…! 

ವಿಚಾರಣೆ ನಡೆಸಿದಾಗ ಹ್ಯಾಂಡ್​ ಬ್ಯಾಗ್​ಅನ್ನು ಮೊಸಳೆ ಚರ್ಮದಿಂದ ತಯಾರಿಸಿದ್ದಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾದಲ್ಲಿ ಮೊಸಳೆ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಹೊಂದಲು ಅವಕಾಶವಿದೆ ಆದರೆ, ಅದಕ್ಕೆ ಅಂದಾಜು 3,700 ರೂ. ನೀಡಿ ಆಮದು ಪರವಾನಗಿ ‘ಡೆಯಬೇಕು ಎಂಬ ಕಾನೂನು ಇದೆ.
ಹ್ಯಾಂಡ್​ಬ್ಯಾಗ್​ನ ಮಾಲೀಕರು ರಫ್ತು ಮಾಡಲು ಅವಕಾಶವಿದ್ದ ಸಂಸ್ಥೆಯ ಪರವಾನಗಿ ಪತ್ರ ಹಾಜರು ಪಡಿಸಿದರಾದರೂ, ಆಸ್ಟ್ರೇಲಿಯಾಗೆ ತರಿಸಿಕೊಳ್ಳಲು ಅನುಮತಿ ಪಡೆದಿರಲಿಲ್ಲ. ಈ ಕಾರಣಕ್ಕಾಗಿ ದುಬಾರಿ ಬೆಲೆಯ ಬ್ಯಾಗ್​ಅನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ.

ದಾಖಲೆ ಪತ್ರಗಳು ಸರಿಯಾಗಿರಬೇಕು ಎಂಬುದಕ್ಕೆ ಭಾರಿ ಬೆಲೆ ತೆತ್ತ ಪ್ರಕರಣ ಇದಾಗಿದೆ ಎಂದು ಆಸ್ಟ್ರೇಲಿಯಾದ ಪರಿಸರ ಸಚಿವೆ ಸೂಸನ್​ ಲೇ ಹೇಳಿದ್ದಾರೆ. ಆನ್​ಲೈನ್​ನಲ್ಲಿ ಖರೀದಿಸುವ ಮುನ್ನ ಭಾರಿ ಎಚ್ಚರಿಕೆ ಹೊಂದಿರಬೇಕು. ಏಕೆಂದರೆ, ವಿನಾಶದಂಚಿನಲ್ಲಿರುವ ಪ್ರಾಣಿಗಳಿಂದ ತಯಾರಿಸಿದ ಉತ್ಪನ್ನವನ್ನು ಖರೀದಿಯನ್ನು ತಡೆಯುವುದು ಕೂಡ ಅವುಗಳ ಸಂರಕ್ಷಣೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ. ಜನರು ಕೂಡ ಫ್ಯಾಷನ್​ನಲ್ಲೂ ಕೂಡ ನೈತಿಕ ಮೌಲ್ಯಗಳನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ದಿನಕ್ಕೆ 3.3 ಲೀಟರ್​ ಮೂತ್ರ ಸೇವನೆ; ಕಣ್ಣು, ಮೂಗಿನಿಂದಲೂ ಒಳಗೆಳೆದುಕೊಳ್ತಾನೆ; ಮೈಗೆಲ್ಲ ಉಜ್ಜಿಕೊಳ್ತಾನೆ…!

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…