More

    ರೈತಗೆ ನೋಟಿಸ್ ನೀಡದೆ ಬೆಳೆ ನಾಶ

    ಕನಕಗಿರಿ: ಅರಣ್ಯ ಭೂಮಿಯನ್ನು ಅನಧಿಕೃತವಾಗಿ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು, ಜಮೀನಿನಲ್ಲಿದ್ದ ಔಡಲ ಹಾಗೂ ತೊಗರಿ ಬೆಳೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಾಶ ಮಾಡಿದ್ದಾರೆ ಎಂಬ ಆರೋಪ ರೈತನಿಂದ ಕೇಳಿಬಂದಿದೆ.

    ಇದನ್ನೂ ಓದಿ: ರಾಹುಲ್​ ಗಾಂಧಿಗೆ EC ನೋಟಿಸ್; ದೊಡ್ಡ ವಿಚಾರವೇನಲ್ಲ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

    ತಾಲೂಕಿನ ಬಂಕಾಪುರ ಗ್ರಾಮದ ಸರ್ವೆ ನಂ.29ರಲ್ಲಿನ 10 ಎಕರೆ ಜಮೀನಿನಲ್ಲಿ ಈ ಘಟನೆ ನಡೆದಿದೆ. ನಾಗಪ್ಪ ಸಲ್ಲರ್ ಎಂಬುವರು ಕಳೆದ 30 ವರ್ಷದಿಂದ ಸದರಿ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದಾರೆ.

    ಸುಮಾರು 40 ವರ್ಷಗಳ ಹಿಂದೆ ಜಮೀನನ್ನು ಅವರ ತಂದೆ ಖರೀದಿಸಿದ್ದಾರೆ ಎಂದು ರೈತ ಹೇಳುತ್ತಿದ್ದಾನೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡಿಲ್ಲ.

    ಶಿವರಾಜ ಮೇಟಿ ನೇತೃತ್ವದ ತಂಡ ಶುಕ್ರವಾರ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನಾಶಪಡಿಸಿ ಜಮೀನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ, ಫಸಲು ಬಂದಿದೆ 15 ದಿನಗಳ ಅವಕಾಶ ನೀಡಿ ಎಂದರೂ ಜೆಸಿಬಿಗಳ ಮೂಲಕ ಬೆಳೆ ನಾಶಪಡಿಸಿದ್ದಾರೆ ಎಂದು ರೈತ ದೂರಿದ್ದಾನೆ.

    ಖರೀದಿ ಮಾಡಿದ ಆಸ್ತಿಯಾಗಿದ್ದು, ನಮ್ಮ ಬಳಿ ಖರೀದಿಯ ದಾಖಲಾತಿಗಳಿವೆ. ನೋಟಿಸ್ ನೀಡದೇ ನಮ್ಮ ಜಮೀನನ್ನು ಅರಣ್ಯ ಇಲಾಖೆಯ ಜಮೀನು ಎಂದು ಈಗ ಹೇಳುತ್ತಿದ್ದಾರೆ. ಅದು ಏನೇ ಇದ್ದರೂ ನೋಟಿಸ್ ನೀಡಿ, ನಮಗೂ ಕಾನೂನು ವ್ಯಾಪ್ತಿಯಲ್ಲಿ ಕಾಲಾವಕಾಶ ನೀಡಬೇಕಿತ್ತು. ಅದು ಬಿಟ್ಟು ಏಕಾಏಕಿ ಬೆಳೆ ನಾಶ ಮಾಡಿರುವುದು ನಮ್ಮ ಮೇಲೆ ಅಧಿಕಾರಿಗಳು ಮಾಡಿದ ದೌರ್ಜನ್ಯ. ಬೆಳೆ ಕಟಾವಿಗೆ ಅವಕಾಶ ಕೊಡದಿರುವುದು ಅತೀವ ನೋವು ತಂದಿದೆ.
    ನಾಗಪ್ಪ ಸಲ್ಲರ್, ರೈತ

    ಅರಣ್ಯ ಇಲಾಖೆಗೆ ಸೇರಬೇಕಾದ ಭೂಮಿ. ಕಳೆದ ವರ್ಷವೇ ಬಿತ್ತನೆ ಮಾಡದಂತೆ ಸೂಚಿಸಲಾಗಿತ್ತು. ಆದರೆ, ಈ ವರ್ಷವೂ ಬಿತ್ತನೆ ಮಾಡಿದ್ದಾರೆ. ಕಾನೂನು ಪ್ರಕಾರವೇ ಒತ್ತುವರಿಯಾದ ಭೂಮಿಯನ್ನು ತೆರವು ಮಾಡಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಗಿದೆ.
    ಶಿವರಾಜ್ ಮೇಟಿ
    ಆರ್‌ಎಫ್‌ಒ ಗಂಗಾವತಿ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts