More

    ವಚನಗಳಿಲ್ಲಿದೆ ಕೃಷಿಗೆ ಪೂರಕ ಸಂದೇಶ

    ಹಾನಗಲ್ಲ: ಶರಣರ ವಚನ ಸಾಹಿತ್ಯದಲ್ಲಿ ಕೃಷಿಯ ಪೂರಕ ಸಂದೇಶಗಳನ್ನು ಹೇಳಲಾಗಿದೆ. ವಚನಗಳು ವ್ಯವಸಾಯ ಪೂರಕವಾಗಿದ್ದವು ಎಂಬುದಕ್ಕೆ ಶರಣ ಒಕ್ಕಲಿಗ ಮುದ್ದಣ್ಣನ ವಚನಗಳು ಸಾಕ್ಷಿಯಾಗಿವೆ ಎಂದು ಡಾ. ಹೊನ್ನಪ್ಪ ಭೋವಿ ಹೇಳಿದರು.
    ಪಟ್ಟಣದ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಮಂಗಳವಾರ ಆಯೋಜಿಸಿದ್ದ ಶರಣ ಒಕ್ಕಲಿಗ ಮುದ್ದಣ್ಣ ಸ್ಮತಿ ಹಾಗೂ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
    ವೃತ್ತಿಧರ್ಮ ಕಾಯ್ದ ವಚನಕಾರರು ಅದರಲ್ಲಿಯೇ ಸತ್ಯ ಸಂದೇಶಗಳನ್ನು ವಚನಗಳ ಮೂಲಕ ಹೇಳಿದ್ದಾರೆ. ಕೃಷಿ ಬದುಕನ್ನು ಮಾನವ ಬದುಕಿಗೆ ಹೋಲಿಸುವ ಮೂಲಕ ಅಂತರಂಗ ಶುದ್ಧತೆ ಬಗೆಗೆ ಒಕ್ಕಲಿಗ ಮುದ್ದಣ್ಣ ಅರ್ಥಪೂರ್ಣ ವಚನ ನೀಡಿದ್ದಾರೆ ಎಂದರು.
    ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕೃಷಿ ಬದುಕನ್ನು ಕೂಡ ವಚನಗಳಲ್ಲಿ ಹೇಳಿರುವ ವಚನಕಾರರು 12ನೇ ಶತಮಾನದಲ್ಲಿಯೂ ಕೃಷಿಗೆ ಪ್ರಾಧಾನ್ಯತೆ ನೀಡಿದ್ದರೆಂಬ ಸಂಗತಿ ತಿಳಿದು ಬರುತ್ತದೆ ಎಂದರು.
    ನಗರ ಘಟಕದ ಅಧ್ಯಕ್ಷ ಸಿ. ಮಂಜುನಾಥ ಮಾತನಾಡಿ, ಶರಣರ ತತ್ವ ಚಿಂತನೆಗಳು ನಮ್ಮ ಅಂತರಂಗ ಶುದ್ಧಗೊಳಿಸುವ ಗಂಗೆಯಂತೆ. ಪ್ರಾಮಾಣಿಕ ಬದುಕಿನ ಮಾರ್ಗಸೂಚಿಗಳು ಇದರಲ್ಲಿವೆ. ಬದುಕಿನ ಎಲ್ಲ ಮಗ್ಗಲುಗಳನ್ನು ಸಮಚಿತ್ತದಲ್ಲಿ ಆಸ್ವಾದಿಸುವ ಸಾಹಿತ್ಯವಾಗಿ ವಚನಗಳು ಕೆಲಸ ಮಾಡುತ್ತವೆ ಎಂದರು.
    ಸುಜಾತಾ ನಂದಿಶೆಟ್ಟರ್, ರೇಖಾ ಶೆಟ್ಟರ್, ಪೂರ್ಣಿಮಾ ಶಿವಗಿರಿ, ಅಕ್ಷತಾ ಶೆಟ್ಟರ್, ಸುಧಾ ಹೊಸಮನಿ ವಚನಗಳನ್ನು ಹಾಡಿದರು. ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಜಿಲ್ಲಾ ಶಸಾಪ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ನಿರಂಜನ ಗುಡಿ, ಎಸ್.ಸಿ. ಕಲ್ಲನಗೌಡರ, ಶಂಭುಲಿಂಗ ಹೇಮಗಿರಿಮಠ, ಕದಳಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಶಾಂತಕ್ಕ ಹೊಳಲದ, ಶೋಭಾ ಪಾಟೀಲ, ಅಕ್ಕಮ್ಮ ಕುಂಬಾರಿ, ಅಕ್ಕಮ್ಮ ಶೆಟ್ಟರ್, ರೂಪಾ ಹೊಳಲದ, ಮಂಗಳಾ ಹೊಳಲದ, ನಿಂಗಪ್ಪ ಹನುಮಣ್ಣನವರ, ಸಂತೋಷ ದೊಡ್ಡಮನಿ, ಸೋಮಣ್ಣ ಜಡೆಗೊಂಡರ, ಸಿದ್ದಪ್ಪ ಕೋಣನವರ, ಮಲ್ಲಿಕಾರ್ಜುನ ಬಣಕಾರ, ಬಸಪ್ಪ ಕೊಂಡೋಜಿ ಇದ್ದರು. ಸನ್ನಿಧಿ ಕಬ್ಬೂರ, ಶೋಭಾ ಪಾಟೀಲ ಸ್ವಾಗತಿಸಿದರು. ಸುಭಾಸ ಹೊಸಮನಿ, ಪ್ರವೀಣ ಬ್ಯಾತನಾಳ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts