More

    ಹಂಪಿ ಉತ್ಸವ; ಮೆಹಂದಿ ಹಚ್ಚಿಕೊಂಡು ಸಂಭ್ರಮಿಸಿದ ವಿದೇಶಿ ಮಹಿಳೆಯರು

    ಹಂಪಿ: ಹಂಪಿ ಉತ್ಸವದಲ್ಲಿ ಪ್ರಥಮ ದಿನವಾದ ಶುಕ್ರವಾರ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮಹಿಳೆಯರಿಗಾಗಿ ಮೆಹಂದಿ ಹಾಗೂ ರಂಗೋಲಿ ಸ್ಪರ್ಧೆ ನಡೆಯಿತು. ಸ್ಥಳೀಯರೊಂದಿಗೆ ಬೆಲ್ಜಿಯಂ ದೇಶದ ಮೂವರು ಮಹಿಳೆಯರು ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕೈಗಳಿಗೆ ಮೆಹಂದಿ ಹಚ್ಚಿಕೊಂಡು ಸಂಭ್ರಮಿಸಿದರು. ಈ ಸ್ಪರ್ಧೆಯಲ್ಲಿ ಹಗರಿಬೊಮ್ಮನಹಳ್ಳಿಯ ಸೌರಭ ಪ್ರಥಮ, ಹೊಸಪೇಟೆ ಶೈಲಜಾ ದ್ವಿತೀಯ, ಬಳ್ಳಾರಿ ಕೃಪಾ ತೃತೀಯ ಬಹುಮಾನ ಪಡೆದರು. ಭಾಗ್ಯ, ರಾಕಿ, ಕಾವೇರಿ, ರೇಷ್ಮಾ, ಸಮತಾ ಸಮಾಧಾನಕರ ಬಹುಮಾನ ಪಡೆದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶೋಭಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಂಬಿಕಾ, ವಿನೋದಾ, ಉಷಾ ಇದ್ದರು.

    ರೋಮಾಂಚನಗೊಳಿಸಿದ ಮಕ್ಕಳ ಸಾಹಸ ಕ್ರೀಡೆಗಳು
    ಕಡಲೆಕಾಳು ಗಣಪ, ಅಕ್ಕತಂಗಿಯರ ಗುಡ್ಡದ ಹತ್ತಿರ ಆಯೋಜಿಸಿದ್ದ 10 ಸಾಹಸ ಕ್ರೀಡೆಗಳು ರೋಮಾಂಚನ ಮೂಡಿಸಿತು.
    ಬಾಲಕ, ಬಾಲಕಿಯರಿಗಾಗಿ ಪ್ರವಾಸೋದ್ಯಮ ಇಲಾಖೆ, ಸೋಪಸಾನ ಕಂಪನಿಯಿಂದ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಕಲ್ಲು ಬಂಡೆ ಏರುವ ಮೂಲಕ ಸಾಹಸ ಮೆರೆದರು. ಇನ್ನೂ ಕೆಲವರು ಬಿಲ್ಲುಗಳನ್ನು ಹಿಡಿದು ಗುರಿ ಇಟ್ಟು ಬಾಣ ಹೊಡೆಯುವ ಮೂಲಕ ಪ್ರತಿಭೆ ಪ್ರದರ್ಶಿಸಿದರು. ಸಾಹಸ ಕ್ರೀಡೆಗಳಲ್ಲಿ ಹೆಚ್ಚಾಗಿ ಶಾಲಾ ಮಕ್ಕಳೇ ಭಾಗವಹಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಒಡಿಶಾ, ಬೆಂಗಳೂರು, ಕೇರಳದ ಮಕ್ಕಳು ಭಾಗವಹಿಸಿ ಗಮನ ಸೆಳೆದರು. ಆದರೆ, ಎಟಿಬಿ ಬೈಕ್ ಸ್ಪರ್ಧೆ ಹಾಗೂ ಭೂ ಕ್ರೀಡೆಯಲ್ಲಿ ಸ್ಪರ್ಧಾಳುಗಳು ಇಲ್ಲದಿರುವುದು ಕ್ರೀಡಾಸಕ್ತರಿಗೆ ನಿರಾಸೆಯುಂಟು ಮಾಡಿತು.

    ಹಂಪಿ ಉತ್ಸವ; ಮೆಹಂದಿ ಹಚ್ಚಿಕೊಂಡು ಸಂಭ್ರಮಿಸಿದ ವಿದೇಶಿ ಮಹಿಳೆಯರು

    ಜನರಿಗಾಗಿ ಐದು ನಿಮಿಷಕ್ಕೊಂದು ಬಸ್ ಸೇವೆ
    ಹಂಪಿ ಉತ್ಸವ ಹಿನ್ನೆಲೆಯಲ್ಲಿ ಕಲಾವಿದರು, ಪ್ರವಾಸಿಗರಿಗಾಗಿ ಜಿಲ್ಲಾಡಳಿತ ಸಾರಿಗೆ ಸಂಸ್ಥೆಯಿಂದ ಉಚಿತ 70 ಬಸ್ ಸೇವೆ ಒದಗಿಸಿದೆ. ಕಡ್ಡಿರಾಂಪುರದಿಂದ ಹಂಪಿ ಮತ್ತು ಕಮಲಾಪುರದಿಂದ ಹಂಪಿಗೆ 5 ನಿಮಿಷಕ್ಕೊಮ್ಮೆ ಸಾರಿಗೆ ಬಸ್ ಸಂಚರಿಸುತ್ತಿವೆ. ಖಾಸಗಿ ವಾಹನ ತಂದವರು ಕಡ್ಡಿರಾಂಪುರದ ಕ್ರಾಸ್ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು, ಬಸ್‌ಗಳಲ್ಲಿ ಹಂಪಿಗೆ ತೆರಳುತ್ತಿದ್ದರು. ಲಗೇಜ್ ಹಾಗೂ ಕಲಾವಿದರ ಸಲಕರಣೆ ಹೊತ್ತು ಬಂದವರಿಗೆ ಕಿರಿಕಿರಿಯೆನಿಸಿದರೂ, ಹಂಪಿಗೆ ತೆರಳುವುದು ಅನಿವಾರ್ಯವಾಗಿತ್ತು. ಮಧ್ಯಾಹ್ನ ನಂತರ ಹಂಪಿಗೆ ಬರುವವರ ಸಂಖ್ಯೆ ಹೆಚ್ಚಿತು. ಕಡ್ಡಿರಾಂಪುರ ಬಸ್ ನಿಲ್ದಾಣದಲ್ಲಿ ರಸ್ತೆಗೆ ಕೆಂಪುಮಣ್ಣು ಸುರಿದಿದ್ದು, ನೀರು ಹಾಕಿರಲಿಲ್ಲ. ಹೀಗಾಗಿ ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿಗೆ ಧೂಳಿನ ಅಭಿಷೇಕ ತಪ್ಪಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts